ಇಂದಿರಾನಗರದಲ್ಲಿ ಮಹಿಳಾ ದೌರ್ಜನ್ಯ: ದಾಖಲಾಗದ ಪ್ರಕರಣಗಳು
ಬೆಂಗಳೂರು, ಮೇ 22: ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ನ ಸಹೋದ್ಯೋಗಿ ಜತೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳ ಗುಂಪೊಂದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಘಟನೆಯಲ್ಲಿ ಈ ಮಹಿಳೆ ಬಹುತೇಕ ಅತ್ಯಾಚಾರಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಇಂದಿರಾನಗರದಲ್ಲಿ ಮೇ 9 ರಂದು ರಾತ್ರಿ ಊಟ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದಾಗ ಸುಮಾರು 2 ಗಂಟೆ ವೇಳೆಗೆ ಈ ಘಟನೆ ನಡೆದಿತ್ತು. ಈ ಕುರಿತಂತೆ ದೂರು ನೀಡಲು ಜೀವನಬಿಮಾ ನಗರ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ತೆರಳಿದ್ದಾಗ ಅಲ್ಲಿದ್ದ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿದ್ದಾರೆ.

ಅಧಿಕಾರಿಗಳು ಚುನಾವಣಾ ಕೆಲಸಕ್ಕೆ ತೆರಳಿದ್ದು ಮರುದಿನ ಬೆಳಗ್ಗೆ ಬಂದು ದೂರು ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಚುನಾವಣೆ ನೆಪದಲ್ಲಿ ಸಾರ್ವಜನಿಕರ ಸಹಾಯಕ್ಕೆ ಬಾರದ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications