ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಎಂಬಿಎ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ,ಬಂಧನ
ಬೆಂಗಳೂರು, ಫೆಬ್ರವರಿ 12: ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ನಗರದ ಪೇಯಿಂಗ್ ಗೆಸ್ಟ್‌ನಲ್ಲಿ ವಾಸಮಾಡುತ್ತಿರುವ 24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಯುವಕನನ್ನುಪೊಲೀಸರು ಬಂಧಿಸಿದ್ದಾರೆ. ಆಕೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತ ಯುವತಿಗೆ ದೊಡ್ಡನೆಕ್ಕುಂದಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಸಾಫ್ಟ್‌ವೇರ್ ಎಂಜಿನಿಯರ್ ಆರಿಫ್ ಎಂಬಾತ ಒಂದು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ , ಆರಿಫ್‌ಗೆ ಆದಿತ್ಯ ಸ್ನೇಹಿತನಾಗಿದ್ದ, ನಗರದ ಹೆಸರಾಂತ ಮಾಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.

ಅಂದು ಹುಟ್ಟುಹಬ್ಬ ಆರಿಫ್ ಹುಟ್ಟುಹಬ್ಬವಿದ್ದ ಕಾರಣ ತನ್ನ ಮನೆಯಲ್ಲಿ ಪಾರ್ಟಿ ಇದೆ ಬಾ ಎಂದು ಕರೆದಿದ್ದ, ಪಾರ್ಟಿಗೆ ಫೇಸ್‌ಬುಕ್ ಸ್ನೇಹಿತೆ ಹಾಗೂ ಸ್ನೇಹಿತ ಆದಿತ್ಯನಿಗೂ ಆಹ್ವಾನಿಸಿದ್ದ, ಅಂದು ರಾತ್ರಿ ಮೂವರು ಸೇರಿ ಮದ್ಯಪಾನ ಮಾಡಿ ಪಾರ್ಟಿ ಮಾಡಿದ್ದಾರೆ, ತಡರಾತ್ರಿ ಊಟ ತರಲು ಆರೀಫ್ ಮನೆಯಿಂದ ಹೊರಗೆ ಹೋದಾಗ ಯುವತಿ ಮೇಲೆ ಆದಿತ್ಯ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications