ಟೆಕ್ಕಿಗಳ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಹಿಂಸೆ

ಉತ್ತರ ಪ್ರದೇಶ ಮೂಲದ ಬಾಲಕಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ವಾಸವಿದ್ದ ಟೆಕ್ಕಿ ದಂಪತಿಯ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕ್ರೂರವಾಗಿ ನಡೆಸಿಕೊಂಡಿರುವ ಅಂಶದ ಆಧಾರದ ಮೇಲೆ ದಂಪತಿಗಳ ವಿರುದ್ಧ ಕೇಸ್ ದಾಖಲಾಗಿದೆ.[ಅಸಾರಮ್ ಬಾಪು ಪುತ್ರನ ಮೇಲೆ ಚಾರ್ಜ್ ಶೀಟ್]
ಬಾಲಕಿ ತಪ್ಪು ಮಾಡಿದ್ದಲ್ಲಿ ಕ್ರೂರವಾಗಿ ಹಿಂಸುತ್ತಿದ್ದ ದಂಪತಿಗಳು ಇತ್ತೀಚೆಗೆ ಐಸ್‌ಕ್ರೀಂ ತಿಂದದ್ದಕ್ಕೆ ಹಸಿ ಮೊಟ್ಟೆಯನ್ನು ಬಲವಂತವಾಗಿ ತಿನ್ನಲು ಹೇಳಿ ಮನೆಯಿಂದ ಹೊರ ಹಾಕಿದ್ದರು. ಬಾಲಕಿ ಆಳುತ್ತಾ ಬರುತ್ತಿರುವುದನ್ನು ನೋಡಿದ ಹತ್ತಿರದ ಅಪಾರ್ಟ್‌ಮೆಂಟ್‌ನ ಮನೆಯವರು ಪೊಲೀಸರಿಗೆ ತಿಳಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ಐಪಿಸಿ ಮತ್ತುಅಪ್ರಾಪ್ತ ವಯಸ್ಕರ ನ್ಯಾಯಿಕ ಕಾಯಿದೆ(ಜುವೆನೈಲ್ ಜಸ್ಟೀಸ್ ಆಕ್ಟ್) ಅಡಿಯಲ್ಲಿ ದಂಪತಿಗಳ ವಿರುದ್ಧ ಕೇಸ್ ದಾಖಲಾಗಿದ್ದು,ಬಾಲಕಿಯನ್ನುಈಗ ಮಕ್ಕಳ ಕಲ್ಯಾಣ ಆಯೋಗಕ್ಕೆ ಸೇರಿಸಲಾಗಿದೆ.[ಪುಣೆಯಲ್ಲಿ ಬೆಂಗಳೂರು ಟೆಕ್ಕಿ ರೇಪ್; ಪೊಲೀಸರಿಂದ ಅಪಮಾನ]
ದಂಪತಿಗಳು ಈಗ ಬಂಧನ ಭೀತಿಯನ್ನು ಎದುರಿಸುತ್ತಿದ್ದು ಪೊಲೀಸರು ದಂಪತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಆರೋಪಿಸಿದೆ. ಬಾಲಕಿಗೆ 10 ಅಥವಾ 11 ವರ್ಷವಾಗಿರುವ ಸಾಧ್ಯತೆಯಿದೆ. ಆದರೆ ಪೊಲೀಸರು 14 ವರ್ಷ ಎಂದು ಹೇಳುತ್ತಿದ್ದಾರೆ. ಗುತ್ತಿಗೆದಾರ ಮತ್ತು ಸರ್ಕಾರದ ಪ್ರಭಾವಿ ಮಂತ್ರಿಯೊಬ್ಬರು ದಂಪತಿಗಳ ಪರವಾಗಿ ನಿಂತಿದ್ದು ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಆರೋಪ ಮಾಡಿದೆ.












Click it and Unblock the Notifications