SWR Special Train: ಹುಬ್ಬಳ್ಳಿ-ವಾರಣಾಸಿ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ

ಬೆಂಗಳೂರು, ಫೆಬ್ರವರಿ 15: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ದೇಶದ ನಾನಾ ಭಾಗಗಳಿಂದ ಯಾತ್ರಾರ್ಥಿಗಳು ಆಗಮಿಸುತ್ತಿದ್ದಾರೆ. ಕರ್ನಾಟಕ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುಬ್ಬಳ್ಳಿಯಿಂದ ವಾರಣಾಸಿಗೆ ವಿಶೇಷ ರೈಲು ಆರಂಭಿಸಲಾಗಿದೆ. ಈಗಾಗಲೇ ಒಂದು ಟ್ರಿಪ್ ಮುಗಿಸಿದೆ. ಯಾವೆಲ್ಲ ಮಾರ್ಗವಾಗಿ ರೈಲು ಸಂಚರಿಸುತ್ತದೆ. ಎಷ್ಟು ಟ್ರಿಪ್ ಹೊಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.

ಮಹಾ ಕುಂಭಮೇಳ 2025ರ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ವಾರಣಾಸಿ ನಡುವೆ ರೈಲು ಬಿಟ್ಟಿದೆ. 07383/ 07384 ಸಂಖ್ಯೆಯ ರೈತರು ಹುಬ್ಬಳ್ಳಿಯಿಂದ ಫೆಬ್ರವರಿ 14ರಂದು ಮೊದಲ ಟ್ರಿಪ್ ಆರಂಭಿಸಿದೆ. ಒಟ್ಟು 06 ಟ್ರಿಪ್‌ಗಳನ್ನು ಈ ರೈಲು ಪೂರೈಸಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SWR Special train from Hubballi to Varanasi for Pilgrims of Mahakumbh Mela

ಹುಬ್ಬಳ್ಳಿ-ವಾರಣಾಸಿ ವಿಶೇಷ ರೈಲು ಸಂಖ್ಯೆ 07383 ಫೆಬ್ರವರಿ 14, 21 ಮತ್ತು 28 ರಂದು ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಪ್ರಯಾಣದ ಬೆಳೆಸಲಿದೆ. ಬಿಟ್ಟ ದಿನಿಂದ ಮೂರನೇ ಸಂಜೆ 5.30ಕ್ಕೆ ದಿನಕ್ಕೆ ಈ ರೈಲು ನಿಗದಿತ ಗಮ್ಯ ಸ್ಥಳ (ವಾರಣಾಸಿ) ತಲುಪಲಿದೆ.

ಮಹಾ ಕುಂಭಮೇಳ ವಿಶೇಷ ರೈಲು (ಸಂಖ್ಯೆ 07384) ಫೆಬ್ರವರಿ 17 ಮತ್ತು 24 ಮತ್ತು ಮಾರ್ಚ್ 3 ರಂದು ಬೆಳಗ್ಗೆ 5 ಗಂಟೆಗೆ ವಾರಣಾಸಿಯಿಂದ ಮರಳಿ ಹುಬ್ಬಳ್ಳಿ ಕಡೆಗೆ ಸಂಚಾರ ಆರಂಭಿಸುತ್ತದೆ. ಅಲ್ಲಿಂದ ಹೊರಟು ಮೂರನೇ ದಿನ ಬೆಳಗ್ಗೆ 12.45 ಕ್ಕೆ ಹುಬ್ಬಳ್ಳಿ ಶ್ರೀ ಸಿದ್ಧರೂಢ ನಿಲ್ದಾಣಕ್ಕೆ ಆಗಮಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

SWR Special train from Hubballi to Varanasi for Pilgrims of Mahakumbh Mela

ರೈಲು ನಿಲುಗಡೆ ನಿಲ್ದಾಣಗಳು

ಎರಡು ಬದಿಗೆ ಒಟ್ಟು ಆರು ಟ್ರಿಪ್ ಹೊಡೆಯುವ ಈ ವಿಶೇಷ ರೈಲುಗಳು ಸೆಂಟ್ರಲ್ ರೈಲ್ವೆಯ ಸಾಂಗ್ಲಿ, ಮೀರಜ್, ಕಿರ್ಲೋಸ್ಕರ್ವಾಡಿ, ಕರಡ್, ಪುಣೆ, ಸತಾರಾ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಅಹ್ಮದ್‌ನಗರ, ಕೋಪರ್ಗಾಂವ್ ಮತ್ತು ಭೂಸಾವಲ್ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತದೆ.

ಇದು 11 ಸ್ಲೀಪರ್ ಕೋಚ್ ರೈಲು

ಈ ವಾರಣಾಸಿ ವಿಶೇಷ ರೈಲು ಒಂದು ಹವಾನಿಯಂತ್ರಿತ (AC) 2-ಟೈರ್, ನಾಲ್ಕು ಎಸಿ 3-ಟೈರ್, 11 ಸ್ಲೀಪರ್ ಕೋಚ್‌ಗಳನ್ನು ಒಳಗೊಂಡಿದೆ. ಒಂದು ಸೆಕೆಂಡ್-ಸೀಟಿಂಗ್-ಕಮ್-ಗಾರ್ಡ್ ಬ್ರೇಕ್ ವ್ಯಾನ್ ಮತ್ತು ಒಂದು ಜನರೇಟರ್ ಕೋಚ್ ಸಹ ಇದರಲ್ಲಿದೆ.

ಬೀದರ್ ನಿಂದ ದಾನಾಪುರ ರೈಲು ಸಂಚಾರ

ಕುಂಭಮೇಳ ವಿಶೇಷ ರೈಲು (ಸಂಖ್ಯೆ 07111) ಕರ್ನಾಟಕದ ಬೀದರ್ ಜಿಲ್ಲೆಯಿಂದ ಬೆಳಗ್ಗೆ 11.10ಗಂಟೆಗೆ ಹೊರಟು ಮರುದಿನ ರಾತ್ರಿ 11.25 ಕ್ಕೆ ದಾನಾಪುರ ತಲುಪಲಿದೆ. ಅಲ್ಲಿಂದ ಮತ್ತೊಂದು ರೈಲು ಸಂಖ್ಯೆ (07112) ಕುಂಭಮೇಳ ವಿಶೇಷ ರೈಲು ಭಾನುವಾರ ಮಧ್ಯಾಹ್ನ 3.15 ಕ್ಕೆ ದಾನಾಪುರದಿಂದ ಹೊರಟು ಮರುದಿನ ರಾತ್ರಿ 11.45 ಕ್ಕೆ ತೆಲಂಗಾಣ ಬರಲಿದೆ. ಅಲ್ಲಿ ಈ ರೈಲು ಸೇವೆ ಕೊನೆಯಾಗುತ್ತದೆ.

ಈ ರೈಲುಗಳು ಎರಡು ಎಸಿ 2 ಕೋಚ್, ಒಂದು ಎಸಿ 3 ಕೋಚ್, 11 ಎಸಿ 3-ಕೋಚ್ ಎಕಾನಮಿ, ಮೂರು ಸ್ಲೀಪರ್ ಕ್ಲಾಸ್ ಮತ್ತು 2 ಜನರಲ್ ಬೋಗಿ ಒಳಗೊಂಡಿದೆ. ಈ ವಿಶೇಷ ರೈಲುಗಳ ವಿವರಗಳಿಗಾಗಿ www.enquiry.indianrail.gov.in ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+