SWR: ಪ್ರಯಾಣಿಕರೇ ಗಮನಿಸಿ: ರದ್ದಾದ, ಮಾರ್ಗ ಬದಲಾದ ರೈಲುಗಳು ಪುನಃಸ್ಥಾಪನೆ, ಹೊಸ ವೇಳಾಪಟ್ಟಿ
ಬೆಂಗಳೂರು, ಜನವರಿ 28: ಬೆಂಗಳೂರು ಕಂಟೋನ್ಮೆಂಟ್ ಮತ್ತು ಬೈಯಪ್ಪನಹಳ್ಳಿ ವಿಭಾಗಗಳ ನಡುವಿನ ರಸ್ತೆ ಕೆಳ ಸೇತುವೆ ಕಾಮಗಾರಿ ನಡೆಸಲಾಗಿತ್ತು. ಈ ವೇಳೆ ಭಾಗಶಃ ರದ್ದಾದ, ಮಾರ್ಗ ಬದಲಾಯಿಸಲಾದ ಮತ್ತು ಮರು ನಿಗದಿಪಡಿಸಲಾದ ರೈಲು ಸೇವೆಗಳನ್ನು ಈಗ ಅವುಗಳ ನಿಯಮಿತ ವೇಳಾಪಟ್ಟಿ ಮತ್ತು ಮಾರ್ಗಗಳ ಪ್ರಕಾರ ಕಾರ್ಯಾಚರಣೆಗೆ ಪುನಃಸ್ಥಾಪಿಸಲಾಗಿದೆ. ಪುನಃಸ್ಥಾಪಿಸಲಾದ ರೈಲು ವಿವರ ಸಮಯ, ನಿಲ್ದಾಣಗಳ ಮಾಹಿತಿ ಇಲ್ಲಿದೆ.
ರದ್ದಾಗಿದ್ದ ರೈಲುಗಳು ಪುನಃಸ್ಥಾಪನೆ ವೇಳಾಪಟ್ಟಿ, ಸಂಖ್ಯೆ
* ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07339) ಜನವರಿ 27ರಿಂದ ಆರಂಭವಾಗಿದೆ.
* ಕೆಎಸ್‌ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07340 ) ಜನವರಿ 28 ರಿಂದ ಆರಂಭವಾಗಿದೆ.

* ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16521) ಜನವರಿ 27, 28 ರಿಂದ ಪ್ರಯಾಣ ಆರಂಭಿಸಿದೆ.
* ಜನವರಿ 27 ಮತ್ತು 28ರಿಂದ ಹೊಸಪೇಟೆ-ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲು (ಸಂಖ್ಯೆ 56520) ಕಾರ್ಯಾಚರಣೆ ನಡೆಸಲಿದೆ.
* ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17391) ಜನವರಿ 28 ಮತ್ತು 29 ಪ್ರಯಾಣ ಮರು ಆರಂಭಿಸಲಿದೆ.

ಭಾಗಶಃ ರದ್ದಾದ ರೈಲುಗಳ ಮರುಸ್ಥಾಪನೆ, ವೇಳಾಪಟ್ಟಿ
* ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07339) ಜನವರಿ 27ರಿಂದ ಪುನಃ ಕಾರ್ಯಾಚರಣೆ ಶುರು ಮಾಡಿದೆ.
* ಕೆಎಸ್‌ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 07340) ಜನವರಿ 27, 28 ರಿಂದ ಸಂಚರಿಸಲಿದೆ.
* ಜನವರಿ 27 ಮತ್ತು 28ರಿಂದ ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16521) ಪುನರ್ ಸಂಚಾರ ಆರಂಭಿಸಲಿದೆ.
* ಹೊಸಪೇಟೆ-ಕೆಎಸ್ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ರೈಲಿನ (ಸಂಖ್ಯೆ 56520) ಸಂಚಾರ ಜನವರಿ 28ರಿಂದ ಪುನಃ ಶುರುವಾಗಲಿದೆ.
* ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17391) ಸಂಚಾರ ಜನವರಿ 28 ಹಾಗೂ 29, 2025 ರಿಂದ ಪ್ರಾರಂಭವಾಗಲಿದೆ.
ಮಾರ್ಗ ಬದಲಾಯಿಸಲಾದ ರೈಲುಗಳ ಪುನಃಸ್ಥಾಪನೆ ಮಾಡಲಾಗಿದೆ. ಮಾರ್ಗ ಬದಲಾಯಿಸಲಾದ ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಕೆಳಗಿನ ರೈಲುಗಳನ್ನು ಅವುಗಳ ನಿಯಮಿತ ಮಾರ್ಗಗಳಿಗೆ ಪುನಃಸ್ಥಾಪಿಸಲಾಗಿದೆ. ಅದರ ವಿವರ ಇಲ್ಲಿದೆ.
* ಲೋಕಮಾನ್ಯ ತಿಲಕ್-ಕೊಯಮತ್ತೂರು ದೈನಂದಿನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11013) ಪ್ರಯಾಣವು ಜನವರಿ 27ರ ಸೋಮವಾರದಿಂದ ಪುನಾರಂಭಗೊಂಡಿದೆ. ಪ್ರಯಾಣಿಕಗ ಗಮನಿಸಬೇಕು.
* ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12658) ಜನವರಿ 27 ಮತ್ತು 28 ರಿಂದ ಆರಂಭವಾಗಲಿದೆ.
* ಜನವರಿ 27 ಮತ್ತು 28 ರಿಂದ ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16593) ನಿಗದಿತ ಮಾರ್ಗದಲ್ಲಿ ಪುನರ್ ಸೇವೆ ಆಂಭಿಸಿದೆ.
* ಎಸ್‌ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (ಸಂಖ್ಯೆ 06270) ಜನವರಿ 27 ಮತ್ತು 28 ರಿಂದ ಪ್ರಾರಂಭವಾಗಲಿದೆ.
* ರೈಲು ಸಂಖ್ಯೆ 16022 ಮೈಸೂರು-ಡಾ. ಎಂಜಿಆರ್ ಚೆನ್ನೈ ಕಾವೇರಿ ಡೈಲಿ ಎಕ್ಸ್‌ಪ್ರೆಸ್ ನೆನ್ನೆ ಜನವರಿ 27 ಮತ್ತು 28 ರಿಂದ ಕಾರ್ಯಾಚರಣೆ ಮತ್ತೆ ಆರಂಭಿಸಿದೆ.
* ಮೈಸೂರು-ಎಸ್‌ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು (ಸಂಖ್ಯೆ 06269) ಜನವರಿ 27 ಹಾಗೂ 28 ರಿಂದ ಸಂಚಾರ ಪುನಃ ಆರಂಭಿಸಲಿದೆ.
ಮರು ನಿಗದಿಪಡಿಸಿದ ರೈಲುಗಳ ಮರುಸ್ಥಾಪನೆ ವಿವರ
* ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12658) ಜನವರಿ 27 ಮತ್ತು 28ರಿಂದ ಪ್ರಯಾಣ ಆರಂಭಿಸುತ್ತದೆ.
* ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಜನವರಿ 28ರಿಂದ ಪುನರಾರಂಭಗೊಳ್ಳಲಿದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications