ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

LKG, UKG ಮಕ್ಕಳಿಗೆ ರಜೆ: ಗೊಂದಲ ಬೇಡ ಎಂದ ಸುರೇಶ್ ಕುಮಾರ್

|
Google Oneindia Kannada News

ಬೆಂಗಳೂರು, ಮಾರ್ಚ್ 9: ಬೆಂಗಳೂರಿನ ಎಲ್‌ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಇಂದಿನಿಂದ ರಜೆ ಘೋಷಣೆ ಮಾಡಲಾಗಿದೆ. ಕೊರೊನಾ ವೈರಸ್ ಭೀತಿಯಿಂದ ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಇರುವ ಶಾಲೆಗಳಿಗೆ ಶಿಕ್ಷಣ ಇಲಾಖೆ ರಜೆ ನೀಡಿದೆ.

ಆದರೆ, ಇಂದು ಶಾಲೆ ಇದೆಯಾ..?, ಇಲ್ವಾ..? ಎನ್ನುವ ಗೊಂದಲ ಪೋಷಕರಲ್ಲಿ ಇತ್ತು. ನಿನ್ನೆ ರಾತ್ರಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದರು. ಅಲ್ಲದೆ ಸರ್ಕ್ಯುಲರ್ ಕೂಡ ರಾತ್ರಿಯೇ ನೀಡಿದ್ದರು. ಹಾಗಾಗಿ ಇದು ಅನೇಕರ ಗಮನಕ್ಕೆ ಬಂದಿರಲಿಲ್ಲ.

Suresh Kumar Declared Holiday For LKG And UKG Students From Today

ಕೊರೊನಾ ಭೀತಿ: ಬೆಂಗಳೂರಿನ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಇಂದಿನಿಂದ ರಜೆಕೊರೊನಾ ಭೀತಿ: ಬೆಂಗಳೂರಿನ ಎಲ್‌ಕೆಜಿ, ಯುಕೆಜಿ ಶಾಲೆಗಳಿಗೆ ಇಂದಿನಿಂದ ರಜೆ

ಎಷ್ಟೊ ಪೋಷಕರು ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದಾರೆ. ಶಾಲಾ ಶಿಕ್ಷಕರು ರಜೆಯ ವಿಷಯ ತಿಳಿಸಿ ಮಕ್ಕಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇನ್ನು ಕೆಲವು ಶಾಲೆಗಳಲ್ಲಿ ಫೋನ್ ಮಾಡಿ ಪೋಷಕರಿಗೆ ವಿಷಯ ತಿಳಿಸುತ್ತಿದ್ದಾರೆ.

ಬಾಲ್ಡ್ವಿನ್ ಶಾಲೆಯಲ್ಲಿ ಇಂದು ಪರೀಕ್ಷೆ ನಡೆಯುತ್ತಿದ್ದು, ಅದನ್ನು ಸಹ ನಿಲ್ಲಿಸಲಾಗಿದೆ. ಪರೀಕ್ಷೆ ಇದ್ದರೂ, ರಜೆ ನೀಡಿರುವ ವಿಷಯವನ್ನು ಪೋಷಕರಿಗೆ ತಿಳಿಸಲಾಗುತ್ತಿದೆ. ಇಂದಿನಿಂದ ಮುಂದಿನ ಆದೇಶ ಬರುವವರೆಗೆ ಮಕ್ಕಳಿಗೆ ರಜೆ ನೀಡಲಾಗಿದೆ.

ಬೆಂಗಳೂರು: ಕೊರೊನಾ ಸೋಂಕಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆಬೆಂಗಳೂರು: ಕೊರೊನಾ ಸೋಂಕಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ರಜೆ

ಈ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದು, ''ಆರೋಗ್ಯ ಆಯುಕ್ತರ ಸಲಹೆ ಮೇರೆಗೆ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ LKG, UKG ಶಾಲೆಗಳಿಗೆ ನಾಳೆಯಿಂದ ರಜೆ ಘೋಷಿಸಲಾಗಿದೆ.'' ಎಂದು ನಿನ್ನೆ ರಾತ್ರಿ ತಿಳಿಸಿದ್ದಾರೆ.

English summary
Fear Of Coronavirus, Minister Suresh Kumar Tweeeted that Karnataka Government Declared Holiday For LKG , UKG Students From March 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X