ಮಾಸ್ಕ್ ಪೂರೈಕೆ; ಪತ್ರಕರ್ತನಿಂದ ಉದ್ಯಮಿಗೆ 1 ಕೋಟಿ ವಂಚನೆ!
ಬೆಂಗಳೂರು, ಜೂನ್ 21 : ಕಡಿಮೆ ದರಕ್ಕೆ ಗಾರ್ಮೆಂಟ್ಸ್‌ನಿಂದ ಮಾಸ್ಕ್ ಕೊಡಿಸುವುದಾಗಿ ಬೆಂಗಳೂರಿನ ಉದ್ಯಮಿಯೊಬ್ಬರಿಗೆ ವಂಚಿಸಲಾಗಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಉದ್ಯಮಿ ಈ ಕುರಿತು ದೂರು ದಾಖಲು ಮಾಡಿದ್ದಾರೆ.
Recommended Video
ವಸಂತ್ ಕುಮಾರ್ ಎಂಬ ಉದ್ಯಮಿ ಪತ್ರಕರ್ತರೊಬ್ಬರು 1 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಶನಿವಾರ ದೂರು ನೀಡಿದ್ದಾರೆ. ಉದ್ಯಮಿ ಬಳಿ ಹಣ ಪಡೆದ ಬಳಿಕ ಪತ್ರಕರ್ತ ನಾಪತ್ತೆಯಾಗಿದ್ದಾನೆ. ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ.
ಪತ್ರಕರ್ತ ಫಾಸ್ಟ್ ನ್ಯೂಸ್ ಎಂಬ ಯೂ ಟ್ಯುಬ್ ಚಾನೆಲ್ ನಡೆಸುತ್ತಾನೆ. ಕಡಿಮೆ ಬೆಲೆಯಲ್ಲಿ ಮಾಸ್ಕ್‌ಗಳನ್ನು ಪೂರೈಕೆ ಮಾಡುತ್ತೇನೆ ಎಂದು ಆತ ಉದ್ಯಮಿ ವಸಂತ್ ಕುಮಾರ್‌ಗೆ ಭರವಸೆ ನೀಡಿದ್ದ. 1 ಕೋಟಿ ರೂ. ಹಣವನ್ನು ಪಡೆದುಕೊಂಡಿದ್ದ.

ತನಗೆ ಗಾರ್ಮೆಂಟ್ಸ್ ಮಾಲೀಕರು ಗೊತ್ತು ಎಂದು ಹೇಳಿದ್ದ ಪತ್ರಕರ್ತ, ಅಲ್ಲಿ ಮಾಸ್ಕ್ ತಯಾರು ಮಾಡುತ್ತಾರೆ. ಕಡಿಮೆ ಬೆಲೆಯಲ್ಲಿ ಅವುಗಳನ್ನು ನಿಮಗೆ ಪೂರೈಕೆ ಮಾಡುತ್ತೇನೆ ಎಂದು ಹೇಳಿದ್ದ. ಇದಕ್ಕಾಗಿ ಹಣವನ್ನು ಪಡೆದಿದ್ದ.
ಹಣ ಪಡೆದ ದಿನದಿಂದ ಆತನ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ತಮ್ಮನ್ನು ಭೇಟಿ ಸಹ ಮಾಡಿಲ್ಲ ಎಂದು ಉದ್ಯಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications