ಐಪಿಎಲ್ : ಬಿಎಂಟಿಸಿ, ಮೆಟ್ರೋದಿಂದ ಹೆಚ್ಚುವರಿ ಸೇವೆ
ಬೆಂಗಳೂರು, ಮೇ.4: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಬೆಂಗಳೂರು,ಹೈದರಾಬಾದ್ ತಂಡಗಳ ಕ್ರಿಕೆಟ್ ವೀಕ್ಷಿಸಲು ಆಗಮಿಸುತ್ತಿರುವ ಅಭಿಮಾನಿಗಳಿಗೆ ಸಿಹಿಸುದ್ದಿ. ಐಪಿಎಲ್ ಪ್ರಯುಕ್ತ ಪ್ರೇಕ್ಷಕರ ಅನುಕೂಲಕ್ಕಾಗಿ ನಗರದಲ್ಲಿ ಹೆಚ್ಚುವರಿಯಾಗಿ ಬಿಎಂಟಿಸಿ ಮತ್ತು ಮೆಟ್ರೋ ರೈಲುಗಳು ಸಂಚರಿಸಲಿವೆ.
ಭಾನುವಾರ ಸಂಜೆ 5 ರಿಂದ ರಾತ್ರಿ 8ರವರೆಗೆ ನಗರದ ವಿವಿಧ ಭಾಗಗಳಿಂದ ಕ್ರೀಡಾಂಗಣಕ್ಕೆ ಹೆಚ್ಚುವರಿಯಾಗಿ ವೋಲ್ವೋ ಬಸ್ಗಳು ಸಂಚರಿಸಲಿವೆ. ಪಂದ್ಯ ಮುಗಿದ ಬಳಿಕವೂ ಪ್ರೇಕ್ಷಕರು ಮನೆಗೆ ತರೆಳಲು ರಾತ್ರಿ 11ರ ನಂತರವೂ ಹೆಚ್ಚುವರಿ ವೋಲ್ವೋ ಬಸ್ಗಳನ್ನು ಓಡಿಸಲಾಗುವುದು ಎಂದು ಬಿಎಂಟಿಸಿ ಹೇಳಿದೆ.[ಐಪಿಎಲ್ ಪಂದ್ಯಕ್ಕಾಗಿ ಹೆಚ್ಚುವರಿ ಬಿಎಂಟಿಸಿ ಬಸ್]

ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಬಸ್ ಸಂಖ್ಯೆ ವಿ-335ಇ, ಬನ್ನೇರುಘಟ್ಟ ನಿಲ್ದಾಣಕ್ಕೆ ಬಸ್ ಸಂಖ್ಯೆ ವಿ-365, ಅತ್ತಿಬೆಲೆಗೆ ವಿ-360 ಬಸ್ ಗಳು ಸಂಚರಿಸಲಿದೆ. ಮಾರಾಟವಾದ ಟಿಕೆಟ್ಗಳ ಆಧಾರದ ಮೇಲೆ ಹೆಚ್ಚುವರಿ ಬಸ್ಗಳ ಸೇವೆ ಇರಲಿದೆ ಎಂದು ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚುವರಿ ಮೆಟ್ರೋ ಸೇವೆ: ಐಪಿಎಲ್ ಪ್ರಯುಕ್ತ ಮೆಟ್ರೋ ರೈಲುಗಳು ತಡರಾತ್ರಿ 12.20ರವರಗೆ ಸಂಚರಿಸಲಿದೆ. ಮಹಾತ್ಮ ಗಾಂಧಿ ರಸ್ತೆ- ಬೈಯಪ್ಪನಹಳ್ಳಿ ಮಾರ್ಗದ ಮಧ್ಯೆ ರೈಲುಗಳು ಸಾಮಾನ್ಯವಾಗಿ ರಾತ್ರಿ 10 ಗಂಟೆಯವರೆಗೆ ಸಂಚರಿಸುತ್ತವೆ. ಆದರೆ ಇಂದು ಪ್ರೇಕ್ಷಕರ ಅನುಕೂಲಕ್ಕಾಗಿ ಪ್ರತಿ 20 ನಿಮಿಷಕ್ಕೊಮ್ಮೆ ತಡರಾತ್ರಿ 12.20ವರೆಗೆ ಸಂಚರಿಸಲಿದೆ ಎಂದು ಬೆಂಗಳೂರು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications