Karnataka Rails: ಪ್ರಯಾಣಿಕರೇ ಗಮನಿಸಿ, ಬೇಸಿಗೆ ರೈಲುಗಳ ಸೇವೆ ವಿಸ್ತರಣೆ, 3 ಟ್ರಿಪ್ ರದ್ದು

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ನೈಋತ್ಯ ರೈಲ್ವೆಯು (SWR) ಬೇಸಿಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಪ್ರಯಾಣಿಕರಿಗೆ ಉತ್ತಮ ಸಾರಿಗೆ ಲಭ್ಯವಾಗುವಂತೆ ಮಾಡಲು ವಿಶೇಷ ರೈಲುಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಅದೇ ರೀತಿ ರೈಲ್ವೆ ಮಂಡಳಿಯು ಈ ಕೆಳಗಿನ ಬೇಸಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಮುಂದುವರಿಸಲು ಒಪ್ಪಿಗೆ ನೀಡಿದೆ. ಅದರ ಭಾಗವಾಗಿ ಏಪ್ರಿಲ್ ಅಂತ್ಯಕ್ಕೆ ವಿಶೇಷ ರೈಲು ಸೇವೆಗಳು ಅಂತ್ಯಗೊಳಿಸಬೇಕಿದ್ದ ಕೆಲವು ರೈಲುಗಳು ಸೇವೆ ಜೂನ್, ಜುಲೈವರೆಗೂ ಮುಂದುವರಿಯಲಿವೆ. ಬೇಸಿಗೆ ರೈಲಿನ ಮೂರು ಟ್ರಿಪ್ ರದ್ದುಗೊಂಡಿದೆ.

ಹುಬ್ಬಳ್ಳಿ-ಬನಾರಸ್ ರೈಲು ಸೇವೆ ವಿಸ್ತರಣೆ

* ಪ್ರತಿ ಶನಿವಾರ ಚಲಿಸುವ ಎಸ್‌ಎಸ್‌ಎಸ್ ಹುಬ್ಬಳ್ಳಿ-ಬನಾರಸ್ ವಿಶೇಷ ಎಕ್ಸ್‌ಪ್ರೆಸ್ ರೈಲು (07323) ಈ ಮೊದಲು ಮೇ 10ರವರೆಗೆ ಕಾರ್ಯ ನಿರ್ವಹಿಸಬೇಕಿತ್ತು. ಇದೀಗ ಆರೈಲಿನ ಸೇವೆಯನ್ನು ಮೇ 17ರಿಂದ ಜೂನ್ 28 ರವರೆಗೆ ವಿಸ್ತರಣೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚುವರಿ 7 ಟ್ರಿಪ್‌ ಸೇವೆ ಸಿಗಲಿದೆ.

Summer Special Express Train Extension in Between Hubballi-Banaras Cancel 3 Trips Special Trains

* ಪ್ರತಿ ಮಂಗಳವಾರ ಸಂಚರಿಸುವ ಬನಾರಸ್-ಎಸ್‌ಎಸ್‌ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು (07324) ಮೇ 13 ರವರೆಗೆ ಸಂಚರಿಸಲು ಅವಕಾಶ ಇತ್ತು. ಈಗ ಮೇ 20ರಿಂದ ಜುಲೈ 01ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಪ್ರತಿ ಮಂಗಳವಾರದಂತೆ ಏಳು ಹೆಚ್ಚುವರಿ ಟ್ರಿಪ್ ಲಭ್ಯವಾಗುತ್ತದೆ.

ಈ ಮೇಲಿನ ವಿಶೇಷ ರೈಲು 02 ಎಸಿ-3 ಟೈರ್, 07 ಸ್ಲೀಪರ್ ಕ್ಲಾಸ್, 09 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್/ಡಿ ಕೋಚ್‌ಗಳು ಸೇರಿದಂತೆ ಒಟ್ಟು 20 ಕೋಚ್‌ಗಳನ್ನು ಹೊಂದಿದೆ ಎಂದು ನೈಋತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

* ಭಾನುವಾರದ ಬೆಳಗಾವಿ-ಮವೂ ವಿಶೇಷ ಎಕ್ಸ್‌ಪ್ರೆಸ್ ರೈಲು (07327)ಈ ಹಿಂದೆ ಮೇ 11 ರವರೆಗೆ ಓಡಿಸಲು ನಿರ್ಧರಿಸಲಾಗಿತ್ತು. ಇದೀಗ ಮೇ 18 ರಿಂದ ಜೂನ್ 29 ರವರೆಗೆ ಹೆಚ್ಚುವರಿ 7 ಟ್ರಿಪ್‌ ಓಡಿಸಲು ರೈಲ್ವೆ ಅಧಿಕಾರಿಗಳು ತಿರ್ಮಾನಿಸಿದ್ದಾರೆ.

* ಪ್ರತಿ ಬುಧವಾರ ಚಲಿಸುವ ಮವೂ-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು (07328) ಮೇ 14ರವರೆಗೆ ಸಂಚರಿಸುವ ಬದಲಾಗಿ ವಿಸ್ತರಣೆಯ ದಿನಾಂಕವಾದ ಮೇ 21ರಿಂದ ಜುಲೈ 02ರವರೆಗೆ ಸಂಚರಿಸಲಿದೆ. ಈ ರೈಲು 02 ಎಸಿ-2 ಟೈರ್, 05 ಎಸಿ 3 ಟೈರ್, 10 ಸ್ಲೀಪರ್ ಕ್ಲಾಸ್, 02 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್‌ಎಲ್‌ಆರ್‌ಡಿ, ಒಟ್ಟು 21 ಕೋಚ್‌ ಹೊಂದಿರಲಿದೆ.

ರದ್ದಾದ ಬೇಸಿಗೆ ರೈಲುಗಳು ಮೂರು ಟ್ರಿಪ್‌ ಸಂಚಾರ

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಉತ್ತರ ಮಧ್ಯ ರೈಲ್ವೆ ವಲಯವು ಕಾನ್ಪುರ ಸೆಂಟ್ರಲ್ ಮತ್ತು SMVT ಬೆಂಗಳೂರು ಮಧ್ಯ ಪ್ರತಿ ದಿಕ್ಕಿನಲ್ಲಿ ಆರು ಟ್ರಿಪ್‌ಗಳ ವಿಶೇಷ ರೈಲುಗಳನ್ನು ಮೊದಲೇ ಪ್ರಕಟಿಸಿತ್ತು. ಇಂಟರ್‌ಲಾಕಿಂಗ್ ಇಲ್ಲದ ಕಾರಣ ಈ ಮಾರ್ಗದಲ್ಲಿನ ವಿಶೇಷ ರೈಲುಗಳ ಮೂರು ಟ್ರಿಪ್‌ ರದ್ದುಮಾಡಲಾಗಿದೆ.

* ಕಾನ್ಪುರ ಸೆಂಟ್ರಲ್ SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (04131) ಮೇ 11ರವರೆಗೆ ಸೇವೆ ನೀಡಲಿದೆ. ನಂತರ ಮೇ 18, ಮೇ 25 ಹಾಗೂ ಜೂನ್ 01ರ ಸೇವೆ ಇರುವುದಿಲ್ಲ. ಮರಳಿ ಬರುವ ಅದೇ ರೈಲು (04132) ಮೇ 21, 28 ಹಾಗೂ ಜೂನ್ 04 ರಂದು ರದ್ದುಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+