ಮತದಾರರನ್ನು ಸೆಳೆಯಲು ಎಸ್‌ಟಿ ಸೋಮಶೇಖರ್ ಜಾತಿ ಅಸ್ತ್ರ
ಬೆಂಗಳೂರು, ನವೆಂಬರ್ 17: ಯಶವಂಪುರ ಕ್ಷೇತ್ರದ ಮತದಾರರನ್ನು ಸೆಳೆಯಲು ಎಸ್‌ಟಿ ಸೋಮಶೇಖರ್ ಜಾತ್ರಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಸ್ಟಾರ್ ಪ್ರಚಾರಕರ ಪಟ್ಟಿಯೂ ರೆಡಿಯಾಗಿದೆ.
ಜಾತಿ ಹೆಸರಿನ ಮೂಲಕ ಒಕ್ಕಲಿಗ ಮತಬ್ಯಾಂಕ್ ಕ್ರೋಢೀಕರಣ ಯತ್ನ ಮಾಡುತ್ತಿದ್ದಾರೆ. ಮತಯಾಚನೆಗಾಗಿ ಸೋಷಿಯಲ್ ಮೀಡಿಯಾದಲ್ಲಿ ಎಸ್. ಟಿ. ಸೋಮಶೇಖರ್ ಗೌಡ ಎಂದು ಹೆಸರು ಉಲ್ಲೇಖಿಸಲಾಗುತ್ತಿದೆ.

ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವೇಳೆ ಒಕ್ಕಲಿಗ ಮತಗಳ ಜೊತೆಗೆ ಅಹಿಂದ ಮತಗಳು ಕೈ ಹಿಡಿಯುತ್ತಿತ್ತು.ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವ ಕಾರಣ ಅಹಿಂದ ಮತಗಳು ಜೊತೆ ನಿಲ್ಲುವುದು ಅನುಮಾನವಾಗಿದೆ.
ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ನೇರ ಎದುರಾಳಿಯಾಗಿರುವ ಕಾರಣ ಒಕ್ಕಲಿಗ ಮತಗಳನ್ನು ಹಿಡಿದಿಟ್ಟುಕೊಳ್ಳುವುದೇ ಸೋಮಶೇಖರ್ ಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಎಸ್. ಟಿ. ಸೋಮಶೇಖರ್ ಗೌಡ ಎಂದು ಉಲ್ಲೇಖಿಸಲಾಗುತ್ತಿದೆ.ಕಾಂಗ್ರೆಸ್ ನಲ್ಲಿದ್ದ ವೇಳೆ ಕೇವಲ ಎಸ್. ಟಿ. ಸೋಮಶೇಖರ್ ಎಂದಷ್ಟೇ ಮೊದಲು ಹೆಸರಿತ್ತು.
ಡಿಸೆಂಬರ್ 5ರಂದು ಒಟ್ಟು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9ಕ್ಕೆ ಫಲಿತಾಂಶ ಹೊರಬೀಳಲಿದೆ.












Click it and Unblock the Notifications