ಸೇಂಟ್ ಜೋಸೆಫ್ ಕಾಲೇಜು ಈಗ ವಿಶ್ವವಿದ್ಯಾಲಯ

ಬೆಂಗಳೂರು ಜು. 13: ಕರ್ನಾಟಕದ ಕಾಲೇಜುಗಳಲ್ಲಿ ಹಳೆಯದಾದ ಸೇಂಟ್ ಜೋಸೆಫ್ಸ ಕಾಲೇಜನ್ನು (ಸ್ವಾಯತ್ತ) ಮೇಲ್ದರ್ಜೆಗೆ ಏರಿಸಲಾಗಿದ್ದು, ಅದು ಈಗ 'ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ' ಆಗಿದೆ ಎಂದು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

2021ರ ಫೆಬ್ರುವರಿಯಲ್ಲಿ ರಾಜ್ಯ ಸರ್ಕಾರ ಸೇಂಟ್ ಜೋಸೆಫ್ಸ ವಿಶ್ವವಿದ್ಯಾಲಯ ಕುರಿತ ಮಸೂದೆಯನ್ನು ಅಂಗೀಕರಿಸಿತ್ತು. ಈ ವರ್ಷ ಜುಲೈ 2ರಂದು ಕಾಲೇಜಿಗೆ ಔಪಚಾರಿಕವಾಗಿ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿರುವುದಾಗಿ ತಿಳಿದು ಬಂದಿದೆ. ಕಾಲೇಜನ್ನು ಔಪಚಾರಿಕವಾಗಿ ವಿಶ್ವವಿದ್ಯಾನಿಲಯವೆಂದು ಘೋಷಿಸುವ ಪ್ರಕ್ರಿಯೆಯು ಕಳೆದ ವಾರ ಸರ್ಕಾರ ಪೂರ್ಣಗೊಳಿಸಿದೆ. ಇದಾದ ಬಳಿಕ ವಿಶ್ವವಿದ್ಯಾಲಯ ತನಗೆ ಸಿಕ್ಕ ಸ್ಥಾನಮಾನ ಪ್ರಕಟಿಸಿದೆ.

ಕರ್ನಾಟಕ ಮತ್ತು ನಗರದ ಹಳೆಯ ಕಾಲೇಜುಗಳಲ್ಲಿ ಒಂದಾಗಿರುವ ಸೇಂಟ್ ಜೋಸೆಪ್ಸ್ ಕಾಲೇಜು 1882 ರಲ್ಲಿ ಸ್ಥಾಪಿತವಾಗಿದೆ. ಈ ಕಾಲೇಜನ್ನು ಕರ್ನಾಟಕದ ಸೊಸೈಟಿ ಆಫ್ ಜೀಸಸ್ (ಜೆಸ್ಯೂಟ್ಸ್) ನಿರ್ವಹಿಸುತ್ತಿದೆ. ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದವರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ.

st-josephs-college-karnataka-turns-into-university

ಆ ಹಳೆಯ ವಿದ್ಯಾರ್ಥಿಗಳ ಪೈಕಿ ವಿಜ್ಞಾನಿ ರಾಜಾ ರಾಮಣ್ಣ, ವಿಜ್ಞಾನಿ ಮತ್ತು ಕಾರ್ಯಕರ್ತ ಅಮೂಲ್ಯ ರೆಡ್ಡಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ, ರಾಜಕೀಯ ಮುಖಂಡ ಎಂ.ವೈ.ಘೋರ್ಪಡೆ, ಕುಮಾರ್ ಬಂಗಾರಪ್ಪ, ರಾಜೀವ್ ಗೌಡ, ಇತಿಹಾಸಕಾರ ಜಾನಕಿ ನಾಯರ್ ಮತ್ತಿತರರು ಇದೇ ಕಾಲೇಜಿನವರಾಗಿದ್ದಾರೆ.

ಆರ್‌ಯುಎಸ್‌ಎ ಅಭಿಯಾನ ಆರಂಭ

ಶಿಕ್ಷಣ ಸಚಿವಾಲಯವು 2013ರಲ್ಲಿ 'ರಾಷ್ಟ್ರೀಯ ಉಚ್ಚತರ್ ಶಿಕ್ಷಣ ಅಭಿಯಾನ (ಆರ್‌ಯುಎಸ್‌ಎ)' ಆರಂಭಿಸಿದ್ದಾಗಲೇ ಈ ಸೇಂಟ್ ಜೋಸೆಫ್ಸ್ ಕಾಲೇಜು ಕಾಲೇಜನ್ನು ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆ ಸೃಷ್ಟಿಯಾಗಿತ್ತು. ಅದು ಈಗ ಸಾಧ್ಯವಾಗಿದೆ. ಸ್ವಾಯತ್ತ ಕಾಲೇಜುಗಳನ್ನು ಉನ್ನತೀಕರಿಸಿ, ಅಭಿವೃದ್ಧಿಗೊಳಿಸಿ ಹೊಸ ಸಂಸ್ಥೆಗಳನ್ನಾಗಿ ರಚಿಸುವ ಸಲುವಾಗೇ 'ರಾಷ್ಟ್ರೀಯ ಉಚ್ಚತರ್ ಶಿಕ್ಷಣ ಅಭಿಯಾನ (ಆರ್‌ಯುಎಸ್‌ಎ)' ವನ್ನು ಸರ್ಕಾರ ಆರಂಭಿಸಿದೆ.

ಗುಣಮಟ್ಟದ ಶಿಕ್ಷಣ: ಶಿಕ್ಷಣದಲ್ಲಿ ಸಮಾನತೆಗೆ ಆದ್ಯತೆ

ವಿಶ್ವವಿದ್ಯಾನಿಲಯ ಸ್ಥಾನಮಾನ ಪಡೆದ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಕ್ಟರ್ ಲೋಬೋ ಅವರು ಮಾತನಾಡಿ, ಸೇಂಟ್ ಜೋಸೆಫ್ಸ ವಿಶ್ವವಿದ್ಯಾನಿಲಯವು ದೇಶದಲ್ಲೇ ಒಂದು ವಿಶಿಷ್ಟ ವಿಶ್ವವಿದ್ಯಾನಿಲಯವಾಗಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿಶ್ವವಿದ್ಯಾನಿಲಯ ಕಾರ್ಯ ನಿರ್ವಹಿಸಲಿದೆ. ಆರ್‌ಯುಎಸ್‌ಎ ಉದ್ದೇಶವನ್ನು ಸಾಧಿಸಲು ವಿಶ್ವವಿದ್ಯಾಲಯ ಮುಂಚೂಣಿಯಲ್ಲಿದೆ. ಇಲ್ಲಿಂದ ಜನಸಾಮಾನ್ಯರು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಸಮಾಜದ ಉನ್ನತ ಹಂತ ತಲುಪಬಹುದಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

st-josephs-college-karnataka-turns-into-university

ಉನ್ನತ ಶಿಕ್ಷಣ ಒದಗಿಸುವಲ್ಲಿ ವಿಶ್ವವಿದ್ಯಾನಿಲಯ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ವೈಜ್ಞಾನಿಕ ಸಂಶೋಧನೆ, ಗುಣಮಟ್ಟದ ಶಿಕ್ಷಣ ಮತ್ತು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರಿಗೂ ವಿಫುಲ ಅವಕಾಶ ನೀಡುವ ಮೂಲಕ ಒದಗಿಸಲಿದೆ. ಉನ್ನತ ಶಿಕ್ಷಣದಲ್ಲಿ ಸಮಾನತೆ ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯವಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ದೇಶದಲ್ಲಿರುವ ಸ್ವಾಯತ್ತ ಕಾಲೇಜುಗಳಲ್ಲಿ ಅತ್ಯಧಿಕ ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರಿಡಿಟೇಶನ್ ಕೌನ್ಸಿಲ್ (ಎನ್‌ಎಎಸಿ) ನಲ್ಲಿ ಸೇಂಟ್ ಜೊಸೆಫ್ಸ್ ಕಾಲೇಜು ಅತ್ಯಧಿಕ ಅಂಕ (3.79/4) ಪಡೆದುಕೊಂಡಿದೆ ಎಂದು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+