Ugadi Special Trains: ಬೆಂಗಳೂರು, ಮೈಸೂರು, ಕಲಬುರಗಿ ಮಾರ್ಗಗಳಲ್ಲಿ ವಿಶೇಷ ರೈಲು ಸಂಚಾರ, ವೇಳಾಪಟ್ಟಿ

ಬೆಂಗಳೂರು, ಮಾರ್ಚ್ 24: ಹಿಂದೂಗಳು ಮತ್ತು ಮುಸ್ಲಿಂ ಪಾಲಿನ ಪ್ರಮುಖ ಹಬ್ಬಗಳು ಎದುರಾಗಿವೆ. ಹಬ್ಬದ ಸಂಭ್ರಮ ಬರಮಾಡಿಕೊಳ್ಳಲು ದಿನಗಣನೆ ಶುರುವಾಗಿದೆ. ಯುಗಾದಿ ಹಬ್ಬವು ಹಿಂದೂಗಳ ಪಾಲಿನ ಪ್ರಮುಖ ಹಬ್ಬವಾಗಿದೆ. ಮಾರ್ಚ್ 29 ರಿಂದ ಮೂರು ದಿನ ಹಬ್ಬದಚರಣೆ ನಡೆಯುತ್ತದೆ. ತಿಂಗಳು ಪೂರ್ತಿ ಉಪವಾಸವಿದ್ದು ಆಚರಿಸುವ ಮುಸಲ್ಮಾನರು ಮಾರ್ಚ್ 31 ರಂದು ಈದ್ ಮಿಲಾದ್ ಆಚರಿಸಲಿದ್ದಾರೆ. ಈ ಸಂಬಂಧ ದೂರದ ಊರುಗಳಿಗೆ ಹೋಗುವವರಿಗೆ ಅನುಕೂಲವಾಗಲು, ಪ್ರಯಾಣಿಕರ ದಟ್ಟಣೆಗೆ ನಿಯಂತ್ರಿಸಲು 'ಯುಗಾದಿ ವಿಶೇಷ ರೈಲು' ಕಾರ್ಯಾಚರಣೆ ಮಾಡಲಾಗುತ್ತದೆ.

ಈ ವಿಶೇಷ ರೈಲುಗಳ ಕಾರ್ಯಚರಣೆ ಬೆಂಗಳೂರು-ಬೆಳಗಾವಿ, ಬೆಂಗಳೂರು-ಕಲಬುರಗಿ, ಬೆಂಗಳೂರು-ಚೆನ್ನೈ, ಮೈಸೂರು-ಕಾರವಾರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಲಿದೆ. ಈ ವಿಶೇಷ ರೈಲುಗಳು ಸಂಚಾರ, ವೇಳಾಪಟ್ಟಿ, ದಿನಾಂಕ ಮಾಹಿತಿ ನೀಡಲಾಗಿದೆ.

Special Train Services in These Routes for Ugadi and Eid Milad Celebrations from Bengaluru

ವಿಶೇಷ ರೈಲುಗಳು ದಿನಾಂಕ, ವೇಳಾಪಟ್ಟಿ & ಮಾರ್ಗಗಳು

* ಬೆಂಗಳೂರು ಸರ್ ಎಂ ವಿಶೇಶ್ವರಯ್ಯ ಟರ್ಮಿನಲ್ (SMVT) -ಕಲಬುರಗಿ ಎಕ್ಸ್‌ಪ್ರೆಸ್ ವಿಶೇಷ ರೈಲು (06519) ಇದೇ ಮಾರ್ಚ್ 28 ರಂದು ರಾತ್ರಿ 9.15 ಬೆಂಗಳೂರಿನಿಂದ ಪ್ರಯಾಣ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 7.40ಕ್ಕೆ ಕಲಬುರಗಿ ತಲುಪಲಿದೆ.

* ಕಲಬುರಗಿ-SMVT ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06520) ಮಾರ್ಚ್ 29 ರಂದು ಬೆಳಗ್ಗೆ 9.35 ಕ್ಕೆ ಕಲಬುರಗಿಯಿಂದ ಹೊರಟು ಅದೇ ದಿನ ರಾತ್ರಿ 8 ಗಂಟೆಗೆ ಬೆಂಗಳೂರು ಸರ್ .ಎಂ.ವಿಶೇಶ್ವರಯ್ಯ ಟರ್ಮಿನಲ್ (SMVT) ಗೆ ಆಗಮಿಸುತ್ತದೆ.

ಈ ರೈಲು ಯಲಹಂಕ, ಅನಂತಪುರ, ಗುಂತಕಲ್, ಧರ್ಮಾವರಂ, ಅದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣ, ಯಾದಗೀರ್ ಹಾಗೂ ಶಹಾಬಾದ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.

Special Train Services in These Routes for Ugadi and Eid Milad Celebrations from Bengaluru

ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು

* SMVT ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು (06511) ಮಾರ್ಚ್ 28 ರಂದು ಸಂಜೆ 7:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಸಂಚಾರ ಆರಂಭಿಸುತ್ತದೆ. ಮರುದಿನ ಬೆಳಿಗ್ಗೆ 07:30ಕ್ಕೆ ಬೆಳಗಾವಿ ನಿಲ್ದಾಣ ತಲುಪುತ್ತದೆ.

* ಬೆಳಗಾವಿ-SMVT ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು (06512) ಮಾರ್ಚ್ 29 ರಂದು ಸಂಜೆ 5:00 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ರೈಲು ಪ್ರಯಾಣ ಆರಂಭವಾಗಿ ಮರುದಿನ ಬೆಳಗ್ಗೆ 04:30ಕ್ಕೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

ಬೆಂಗಳೂರು-ಬೆಳಗಾವಿ ಮಧ್ಯೆ 2ನೇ ವಿಶೇಷ ಎಕ್ಸ್‌ಪ್ರೆಸ್ ರೈಲು ವಿವರ

* ಬೆಂಗಳೂರು SMVT-ಬೆಳಗಾವಿ ವಿಶೇಷ ಎಕ್ಸ್ ಪ್ರೆಸ್ ರೈಲು (06513) ಮಾರ್ಚ್ 30 ರಂದು ಸಂಜೆ 7ಕ್ಕೆ SMVT ಬೆಂಗಳೂರಿನಿಂದ ಸಂಚಾರ ಆರಂಭಿಸಿ ಮರುದಿನ ಬೆಳಗ್ಗೆ 07:30ಕ್ಕೆ ಬೆಳಗಾವಿ ಮುಟ್ಟಲಿದೆ.

* ಬೆಳಗಾವಿ-SMVT ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್ ರೈಲು (06514) ಮಾರ್ಚ್ 31 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಪ್ರಯಾಣ ಆರಂಭಿಸಿ ಮರುದಿನ ಬೆಳಗಿನ ಜಾವ 04:30ಕ್ಕೆ SMVT ಬೆಂಗಳೂರಿಗೆ ಬರಲಿದೆ.

ಈ ಮೇಲಿನ ವಿಶೇಷ ರೈಲುಗಳು ಬೆಂಗಳೂರು-ಬೆಳಗಾವಿ ಮಧ್ಯ ಸಂಚರಿಸುವಾಗ ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.

ಈ ವಿಶೇಷ ರೈಲುಗಳು 1 ಎಸಿ ಫಸ್ಟ್ ಕ್ಲಾಸ್ ಕೋಚ್, ಎಸಿ ಟು ಟೈರ್ ಎರಡು ಬೋಗಿಗಳು, ಐದು ಎಸಿ ತ್ರಿ ಟೈರ್ ಬೋಗಿಗಳು ಇರಲಿವೆ. ಇದರೊಂದಿಗೆ 8-ಸ್ಲೀಪರ್ ಕ್ಲಾಸ್ ಬೋಗಿಗಳು, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಹೊಂದಿರುತ್ತದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರು-ಕಾರವಾರ & ಬೆಂಗಳೂರು-ಚೈನ್ನೈ ರೈಲು ಸೇವೆ

* ಮೈಸೂರು-ಕಾರವಾರ ಎಕ್ಸ್‌ಪ್ರೆಸ್ ವಿಶೇಷ ರೈಲು (06203) ಮಾರ್ಚ್ 28 ರಂದು ರಾತ್ರಿ 9.35 ಗಂಟೆಗೆ ಮೈಸೂರಿನಿಂದ ಸಂಚಾರ ಆರಂಭಿಸಿ ಮರುದಿನ ಸಂಜೆ 4.15 ಗಂಟೆಗೆ ಕಾರವಾರ ತಲುಪಲಿದೆ.

* ಮರಳಿ ಕಾರವಾರ-ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06204) ಮಾರ್ಚ್ 29 ರಂದು ರಾತ್ರಿ 11.30 ಕಾರವಾರದಿಂದ ಹೊರಟು ಮರುದಿನ ಸಂಜೆ 4.40 ಗಂಟೆಗೆ ಮೈಸೂರು ನಗರ ನಿಲ್ದಾಣಕ್ಕೆ ಬರಲಿದೆ.

ಈ ರೈಲು ಮಾರ್ಗ ಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಸಕಲೇಶಪುರ, ಕುಣಿಗಲ್, ಹಾಸನ, ಸುಬ್ರಹ್ಮಣ್ಯ ರಸ್ತೆ, ಬಂಟ್ವಾಳ, ಸುರತ್ಕಲ್, ಮುಲ್ಕಿ ನಿಲ್ದಾಣ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರಸ್ತೆ ಮತ್ತು ಅಂಕೋಲಾ ನಿಲುಗಡೆ ನೀಡಿ ಮುಂದೆ ಕಾರವಾರ ತಲುಪುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

* ಕೆಎಸ್‌ಆರ್ ಬೆಂಗಳೂರು-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು (07319) ಮಾರ್ಚ್ 28 ರಂದು ಬೆಳಗ್ಗೆ 8.05 ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು ಅದೇ ದಿನ ಮಧ್ಯಾಹ್ನ 2.40 ಗಂಟೆಗೆ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ ತಲುಪುತ್ತದೆ.

* ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (07320) ಮಾರ್ಚ್ 28 ರಂದು ಚೆನ್ನೈ ಸೆಂಟ್ರಲ್‌ನಿಂದ ಮಧ್ಯಾಹ್ನ 3.40 ಕ್ಕೆ ಸಂಚಾರ ಆರಂಭಿಸಿ ಅದೇ ದಿನ 10.50 ಗಂಟೆಗೆ ಬೆಂಗಳೂರು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬರಲಿದೆ.

ಈ ರೈಲು ಎರಡು ಕಡೆ ಸಂಚಾರದಲ್ಲಿ ಯಶವಂತಪುರ, ಕೆಆರ್ ಪುರಂ, ಬಂಗಾರಪೇಟೆ, ಜೋಲಾರ್‌ಪೆಟ್ಟೈ, ಅಂಬೂರ್, ಗುಡಿಯಾಟ್ಟಂ, ಕಟ್ಪಾಡಿ, ಶೋಲಿಂಗೂರ್, ಅರಕ್ಕೋಣಂ, ತಿರುವಳ್ಳೂರು ಹಾಗೂ ಪೆರಂಬೂರ್ ನಿಲ್ದಾಣದಲ್ಲಿ ನಿಲುಗಡೆ ನೀಡುತ್ತದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯಾಣಿಕರು IRCTC ಆಪ್‌, ವೆಬ್‌ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಪ್ರಿ ಬುಕ್ಕಿಂಗ್ ಓಪನ್ ಆಗಿದ್ದು, ವಿಶೇಷ ರೈಲುಗಳ ಕಾರ್ಯಾಚರಣೆ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+