ಲಾಕ್ ಡೌನ್ ; ನೈಋತ್ಯ ರೈಲ್ವೆಯಿಂದ ವಿಶೇಷ ರೈಲು ಸಂಚಾರ
ಬೆಂಗಳೂರು, ಮಾರ್ಚ್ 30 : ನೈಋತ್ಯ ರೈಲ್ವೆ ಬೆಂಗಳೂರಿನ ಯಶವಂತಪುರ ಮತ್ತು ಹೌರಾ ನಡುವೆ ವಿಶೇಷ ರೈಲನ್ನು ಓಡಿಸಲಿದೆ. ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೆ ಈ ರೈಲನ್ನು ಓಡಿಸಲಾಗುತ್ತಿದೆ.
ರೈಲು ನಂಬರ್ 00603/00604 ರೈಲು ವಾರದಲ್ಲಿ ಎರಡು ಬಾರಿ ಯಶವಂತಪುರ-ಹೌರಾ ನಡುವೆ ಸಂಚಾರ ನಡೆಸಲಿದೆ. ಏಪ್ರಿಲ್ 1ರಿಂದ ಈ ವಿಶೇಷ ರೈಲಿನ ಸಂಚಾರ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಯಶವಂತಪುರದಿಂದ ಬುಧವಾರ ಮತ್ತು ಶನಿವಾರ 11 ಗಂಟೆಗೆ ಹೊರಡುವ ರೈಲು ಮರುದಿನ 9 ಗಂಟೆಗೆ ಹೌರಾಗೆ ತಲುಪಲಿದೆ. 11/4/2020ರ ತನಕ ರೈಲು ಸಂಚಾರ ನಡೆಸಲಿದ್ದು, ಒಟ್ಟು 4 ಟ್ರಿಪ್ ಸಂಚಾರ ಮಾಡಲಿದೆ.

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ಚೆನ್ನೈ ಮೂಲಕ ಹೌರಾ ತಲುಪಲಿದೆ. ರೈಲಿನಲ್ಲಿ 5 ಪಾರ್ಸೆಲ್ ವ್ಯಾನ್, 2 ಕೂರುವ ಮತ್ತು ಲಗೇಜ್ ವ್ಯಾನ್ ಇರಲಿದೆ. ವಿಶೇಷ ಸಂದರ್ಭಕ್ಕಾಗಿ ನಿಗದಿತ ವೇಳಾಪಟ್ಟಿ ಜೊತೆಗೆ ಈ ರೈಲು ಸಂಚಾರ ನಡೆಸುತ್ತಿದೆ.
ನೈಋತ್ಯ ರೈಲ್ವೆ ಅಗತ್ಯ ವಸ್ತುಗಳನ್ನು ಸಾಗಣೆ ಮಾಡಲು ಪಾಯಿಂಟ್ ಟು ಪಾಯಿಂಟ್ ಮಾದರಿಯಲ್ಲಿ ವಿಶೇಷ ರೈಲನ್ನು ಓಡಿಸಲಿದೆ. ಬೆಂಗಳೂರಿನಿಂದ ಬೇರೆ ಪಾಯಿಂಟ್‌ಗಳಿಗೆ ಈ ರೈಲು ವಸ್ತುಗಳನ್ನು ಸಾಗಣೆ ಮಾಡಲಿದೆ.
ಭಾರತೀಯ ರೈಲ್ವೆ ಎಲ್ಲಾ ಪ್ರಯಾಣಿಕ ರೈಲುಗಳ ಸಂಚಾರವನ್ನು ದೇಶಾದ್ಯಂತ ರದ್ದುಗೊಳಿಸಿದೆ. ಆದರೆ, ಗೂಡ್ಸ್ ರೈಲುಗಳ ಮೂಲಕ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ.












Click it and Unblock the Notifications