ದೀಪಾವಳಿ 2025: SMVT ಬೆಂಗಳೂರಿನಿಂದ ವಿಶೇಷ ರೈಲುಗಳ ಸೇವೆ, ವೇಳಾಪಟ್ಟಿ
ಬೆಂಗಳೂರು, ಸೆಪ್ಟಂಬರ್ 02: ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಂಡು ಬರುತ್ತದೆ. ಈ ವೇಳೆ ರೈಲು ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಿರುತ್ತದೆ. ಅವರಿಗೆ ರೈಲು ಸೇವೆ ಪೂರೈಕೆ, ದಟ್ಟಣೆ ನಿವಾರಣೆಗೆ ಈಶಾನ್ಯ ಗಡಿನಾಡು ರೈಲ್ವೆ ಬೆಂಗಳೂರಿಗೆ ವಿಶೇಷ ರೈಲು ಸೇವೆ ಆರಂಭಿಸಿದೆ. ಈ ರೈಲುಗಳ ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಈಶಾನ್ಯ ಗಡಿನಾಡು ರೈಲ್ವೆ ನ್ಯೂ ಟಿನ್ಸುಕಿಯಾ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ಹಬ್ಬಗಳ ವಿಶೇಷ ರೈಲು ಕಾರ್ಯಾಚರಣೆಗೆ ತಿರ್ಮಾನಿಸಿದೆ. ಪ್ರತಿ ದಿಕ್ಕಿನಲ್ಲಿ 07 ಟ್ರಿಪ್‌ಗಳಿಗೆ ಉತ್ಸವ ವಿಶೇಷ ರೈಲುಗಳನ್ನು ಓಡಿಸುವುದಾಗಿ ಮಾಹಿತಿ ನೀಡಿದೆ. ಈ ರೈಲುಗಳ ಸಂಖ್ಯೆ, ಸಂಚಾರ ದಿನಾಂಕ ವಿವರ ಇಲ್ಲಿದೆ.

ನ್ಯೂ ಟಿನ್ಸುಕಿಯಾ - SMVT ಬೆಂಗಳೂರು ರೈಲು
ನ್ಯೂ ಟಿನ್ಸುಕಿಯಾ - SMVT ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 05952) ಸೆಪ್ಟಂಬರ್ 18 ರಿಂದ ಅಕ್ಟೋಬರ್ 30ರವರೆಗೆ ಪ್ರತಿ ಗುರುವಾರ ಸಂಜೆ 6:45 ಕ್ಕೆ ನ್ಯೂ ಟಿನ್ಸುಕಿಯಾದಿಂದ ಹೊರಡುತ್ತದೆ. ಭಾನುವಾರ ಬೆಳಗ್ಗೆ 9:30ಕ್ಕೆ SMVT ಬೆಂಗಳೂರಿಗೆ ಆಗಮಿಸುತ್ತದೆ.
ಮರಳಿ ಅದೇ ದಿಕ್ಕಿನಲ್ಲಿ, SMVT ಬೆಂಗಳೂರು ಹೊಸ ಟಿನ್ಸುಕಿಯಾ ವಿಶೇಷ ರೈಲು (ಸಂಖ್ಯೆ 05951) ಸೆಪ್ಟಂಬರ್ 21.09.2025 ರಿಂದ 02.11.2025 ರವರೆಗೆ ಪ್ರತಿ ಭಾನುವಾರ ರಾತ್ರಿ 11:50 ಕ್ಕೆ SMVT ಬೆಂಗಳೂರಿನಿಂದ ಹೊರಟು ಬುಧವಾರ ಸಂಜೆ 6:25 ಕ್ಕೆ ನ್ಯೂ ಟಿನ್ಸುಕಿಯಾ ನಿಲ್ದಾಣಗಳ ತಲುಪುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ರೈಲಿನ ನಿಲುಗಡೆ ನಿಲ್ದಾಣಗಳ ಪಟ್ಟಿ
ಈ ವಿಶೇಷ ರೈಲು ಎರಡು ಬದಿ ಸಂಚಾರದ ವೇಳೆ ದಿಬ್ರುಗಢ್, ಧೇಮಾಜಿ, ಉತ್ತರ ಲಖಿಂಪುರ, ಹರ್ಮುಟಿ, ವಿಶ್ವನಾಥ ಚರಾಲಿ, ರಂಗಪಾರ ಉತ್ತರ, ರಂಗೀಯ, ಬಾರ್ಪೇಟಾ ರಸ್ತೆ, ನ್ಯೂ ಬೊಂಗೈಗಾಂವ್, ಕೊಕ್ರಜಾರ್, ನ್ಯೂ ಕೂಚ್ ಬೆಹಾರ್, ನ್ಯೂ ಜಲ್ಪೈಗುರಿ, ಅಲುಬರಿ ರಸ್ತೆ, ಕಿಶನ್‌ಗಂಜ್, ಮಾಲ್ಡಾ ಟೌನ್, ನ್ಯೂ ಫರಕ್ಕಾ, ರಾಂಪುರ್ ಹ್ಯಾಟ್, ಬೋಲ್‌ಪುರ್ (ಶಾಂತಿನಿಕೇತನ), ಬರ್ದ್ಧಮಾನ್, ಅಂಡುಲ್, ಶ್ರೀಕಾಪುರ್ಕುಲಂ ರಸ್ತೆ, ಪಲಸಾಪಲ್ಲಿ, ವಿಜಯನಗರ, ಕೊತ್ತವಲಸ, ದುವ್ವಾಡ, ರಾಜಮಂಡ್ರಿ, ವಿಜಯವಾಡ, ಓಂಗೋಲ್, ನೆಲ್ಲೂರು, ಗುಡೂರು, ಪೆರಂಬೂರು, ಕಟಪಾಡಿ, ಜೋಲಾರ್‌ಪೇಟ್ಟೈ, ಬಂಗಾರಪೇಟೆ, ವೈಟ್‌ಫೀಲ್ಡ್ ಮತ್ತು ಕೃಷ್ಣರಾಜಪುರಂ ಎರಡೂ ದಿಕ್ಕುಗಳಲ್ಲಿ ನಿಲುಗಡೆ ನೀಡುತ್ತದೆ.
ಈ ರೈಲು 2 ಎಸಿ 2-ಟೈರ್, 16 ಇತರ ಬೋಗಿಗಳು ಸೇರಿದಂತೆ 20 ಕೋಚ್‌ಗಳನ್ನು ಹೊಂದಿರುತ್ತದೆ. ಸ್ಲೀಪರ್ ಕ್ಲಾಸ್ ಮತ್ತು 2 SLRD ತರಬೇತುದಾರರು. ಸಮಯ ಮತ್ತು ಇತರ ಮಾಹಿತಿಯ ಕುರಿತು ಹೆಚ್ಚಿನ ವಿವರಗಳಿಗೆ, ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.ಇಲ್ಲವೇ ಸಹಾಯವಾಣಿಗೆ 139ಗೆ ಕರೆ ಮಾಡಬೇಕು.












Click it and Unblock the Notifications