ಫೇಸ್‌ಬುಕ್, ಟ್ವಿಟರ್‌ಗೆ ಬಂತು ನೈಋತ್ಯ ರೈಲ್ವೆ
ಬೆಂಗಳೂರು, ಡಿ. 26 : ಬೆಂಗಳೂರಿನಿಂದ ಹೊರಡುವ ರೈಲುಗಳ ಕೊನೆ ಕ್ಷಣದ ಬದಲಾವಣೆ, ವೇಳಾಪಟ್ಟಿ, ವಿಶೇಷ ರೈಲುಗಳ ಮಾಹಿತಿ ಇನ್ನು ಮುಂದೆ ಜನರಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿಯೂ ಲಭ್ಯವಾಗಲಿದೆ. ಪ್ರಯಾಣಿಕರು ತಮ್ಮ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ದೂರು ನೀಡಬಹುದಾಗಿದೆ.
ಹೌದು, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಸಾಮಾಜಿಕ ಜಾಲತಾಣಕ್ಕೆ ಪ್ರವೇಶ ಮಾಡಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳನ್ನು ಆರಂಭಿಸಿದೆ. [ಸಾಮಾಜಿಕ ಜಾಲತಾಣಕ್ಕೆ ಬಂತು ಬಿಬಿಎಂಪಿ]

ಸಾಮಾಜಿಕ ಜಾಲ ತಾಣಗಳ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ವಿಭಾಗದ ವ್ಯವಸ್ಥಾಪಕ ಅನಿಲ್‌ಕುಮಾರ್ ಅಗರ್‌ವಾಲ್, ರೈಲುಗಳು ಹೊರಡುವುದು ಅಥವಾ ನಿಲ್ದಾಣಕ್ಕೆ ತಲುಪುವುದು ವಿಳಂಬವಾದರೆ, ವಿಶೇಷ ರೈಲುಗಳ ಸಂಚಾರ, ರೈಲುಗಳ ವೇಳಾಪಟ್ಟಿ ಮುಂತಾದ ಮಾಹಿತಿಗಳನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ನಿರಂತರವಾಗಿ ನೀಡಲಾಗುತ್ತದೆ ಎಂದು ಹೇಳಿದರು. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]
ಪ್ರಯಾಣಿಕರಿಗೆ ರೈಲುಗಳಲ್ಲಿ ಸಮಸ್ಯೆಗಳು ಉಂಟಾದರೆ, ನಿಲ್ದಾಣಗಳಲ್ಲಿ ಯಾವುದೇ ಸಮಸ್ಯೆಗಳು ಎದುರಾದಲ್ಲಿ ಈ ವೆಬ್‌ಪೇಜ್‌ಗಳ ಮೂಲಕ ದೂರು ದಾಖಲಿಸಬಹುದು. ಯಾವುದೇ ಬಗೆಯ ದೂರುಗಳು ಬಂದರೂ ಅವುಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹಾರ ಮಾಡಲು ಯತ್ನಿಸಲಾಗುವುದು ಎಂದು ಅಗರ್‌ವಾಲ್ ಮಾಹಿತಿ ನೀಡಿದರು.
ಡಿಜಿಟಲ್ ಡಿಸ್‌ಪ್ಲೇ ಉದ್ಘಾಟನೆ : ನಗರದ ರೈಲ್ವೆ ನಿಲ್ದಾಣದ ಹೊರಭಾಗದಲ್ಲಿ ನಿರ್ಮಿಸಲಾದ ರೈಲುಗಳ ವೇಳಾಪಟ್ಟಿ ಪ್ರದರ್ಶಿಸುವ ದೊಡ್ಡ ಡಿಜಿಟಲ್ ಡಿಸ್‌ಪ್ಲೇಯನ್ನು ಗುರುವಾರ ಉದ್ಘಾಟಿಸಲಾಗಿದೆ. ಪಿಪಿಪಿ ಮಾದರಿಯಲ್ಲಿ ಡಿಸ್‌ಪ್ಲೇ ನಿರ್ಮಿಸಲಾಗಿದ್ದು, 10 ರೈಲುಗಳ ವೇಳಾಪಟ್ಟಿಯನ್ನು ಒಂದೇ ಸಾರಿ ಪ್ರದರ್ಶಿಸಲು ಇದರಲ್ಲಿ ಸಾಧ್ಯವಾಗಲಿದೆ.
ನೈಋತ್ಯ ರೈಲ್ವೆ ಫೇಸ್‌ಬುಕ್ : Southwestern Railway Bangaloredivision
ಟ್ವಿಟರ್ :@swrbengaluru
ವೆಬ್‌ಸೈಟ್ : http://www.swr.indianrailways.gov.in/












Click it and Unblock the Notifications