ಬೆಂಗಳೂರು : ಲಿಡೋ ಮಾಲ್‌ಗೆ 3 ಲಕ್ಷ ದಂಡ ಹಾಕಿದ ಪಾಲಿಕೆ

ಬೆಂಗಳೂರು, ನವೆಂಬರ್ 27 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಲಿಡೋ ಮಾಲ್‌ಗೆ 3 ಲಕ್ಷ ರೂ. ದಂಡವನ್ನು ವಿಧಿಸಿದೆ. ಅಕ್ರಮ ಕಸ ಹಾಕುವುದನ್ನು ತಡೆಯಲು ನೇಮಕ ಮಾಡಿರುವ ಮಾರ್ಷಲ್‌ಗಳು ಮಾಲ್‌ಗೆ ಸೇರಿದ ಕಸದ ವಾಹನವನ್ನು ತಡೆದಿದ್ದರು.

ಕಸ ವಿಲೇವಾರಿ ಕುರಿತು 2016ರಲ್ಲಿ ಬಿಬಿಎಂಪಿ ರಚಿಸಿದ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ದಂಡವನ್ನು ವಿಧಿಸಲಾಗಿದೆ. ಅನಧಿಕೃತ ವಾಹನದಲ್ಲಿ ಮಾಲ್‌ಗೆ ಸೇರಿದ ಕಸವನ್ನು ಸಾಗಣೆ ಮಾಡುವಾಗ ಮಾರ್ಷಲ್‌ ಪರಿಶೀಲನೆ ನಡೆಸಿದ್ದರು.

ಮಾಲ್‌ ಕಸವನ್ನು ವಿಂಗಡನೆ ಮಾಡದೆ ಸಾಗಣೆ ಮಾಡುತ್ತಿತ್ತು. ಕಸ ಸಾಗಣೆ ಮಾಡುತ್ತಿದ್ದ ವಾಹನ ಕೂಡಾ ಅನಧಿಕೃತವಾಗಿದ್ದು, ಅದರ ಲೈಸೆನ್ಸ್ ಮಾರ್ಚ್‌ನಲ್ಲೇ ಮುಗಿದು ಹೋಗಿತ್ತು. ಇವುಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ದಂಡ ಹಾಕಿದ್ದಾರೆ.

Solid Waste Management BBMP Fines Lido Mall

ಲಿಡೋ ಮಾಲ್‌ನಲ್ಲಿ ಆಳವಡಿಕೆ ಮಾಡಿದ್ದ ಕಾಂಪೋಸ್ಟ್ ತಯಾರಿಕಾ ಘಟಕ ಹಲವು ತಿಂಗಳಿನಿಂದ ಬಂದ್ ಆಗಿತ್ತು. ಬಿಬಿಎಂಪಿ ನಿಷೇಧ ಮಾಡಿರುವ ಪ್ಲಾಸ್ಟಿಕ್‌ ಅನ್ನು ಮಾಲ್ ಬಳಕೆ ಮಾಡುತ್ತಿತ್ತು. ಹಸಿ, ಒಣ ಕಸವನ್ನು ವಿಂಗಡನೆ ಮಾಡುತ್ತಿರಲಿಲ್ಲ.

ಮಾಲ್‌ಗೆ 3 ಲಕ್ಷ ದಂಡ ವಿಧಿಸಿರುವ ಪಾಲಿಕೆ ಅಧಿಕಾರಿಗಳು, ವಾಹನದ ಮಾಲೀಕನಿಗೂ 15 ಸಾವಿರ ರೂ. ದಂಡವನ್ನು ವಿಧಿಸಿದೆ. ಮಾಲ್, ಆಸ್ಪತ್ರೆಯಂತಹ ಹೆಚ್ಚು ಕಸ ಉತ್ಪಾದನೆಯಾಗುವ ಸ್ಥಳಗಳಲ್ಲಿ ಕಸ ವಿಂಗಡನೆ ಕಡ್ಡಾಯಗೊಳಿಸಲಾಗಿದೆ.

ಬೆಂಗಳೂರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಕ ಮಾಡಿದೆ. 198 ವಾರ್ಡ್‌ನಲ್ಲಿಯೂ ಮಾರ್ಷಲ್‌ಗಳಿದ್ದು, ವಿವಿಧ ಸಮಯದಲ್ಲಿ ಅವರು ಪಹರೆ ಕಾಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+