ಸಂಪೂರ್ಣ ಸೌರವಿದ್ಯುತ್ ಕಟ್ಟಡ ಲೋಕಾರ್ಪಣೆಗೆ ಸಿದ್ದ
ಬೆಂಗಳೂರು, ಜುಲೈ, 16 : ಪವರ್ ರಿಸೋರ್ಸಸ್ ಎಂಡ್ ಮಾಡರ್ನ್ ಇಂಟಿಗ್ರೇಷನ್ ಎಂಟರ್ ಪ್ರೈಸಸ್ (PRAMIE) ಸಂಸ್ಥೆ, ಜಯನಗರದಲ್ಲಿ ಸಂಪೂರ್ಣ ಸ್ವತಂತ್ರ ವಿದ್ಯುತ್ ಉತ್ಪಾದನೆಯ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿದ್ದು ಲೋಕಾರ್ಪಣೆಗೆ ಸಿದ್ದವಾಗಿದೆ.
ಪಿಆರ್ಎಎಂಐಇ ಸಂಸ್ಥೆಯ ಸಿಇಒ ಗೋಪಿನಾಥ್ ಜಾವ್ಲೇಕರ್ ಅವರು ಜುಲೈ 17ರಂದು ಬೆಳಿಗ್ಗೆ 11 ಗಂಟೆಗೆ 1372/ಸಿ/ಇ ಕ್ರಾಸ್, ಜಯನಗರ 4ನೇ ಟಿ ಬ್ಲಾಕ್ ನಲ್ಲಿ ಕಟ್ಟಡದ ರೂಪುರೇಷೆ ಕುರಿತು ಮಾಹಿತಿ ನೀಡಲಿದ್ದಾರೆ.[ಕರ್ನಾಟಕದಲ್ಲಿ ತಲೆ ಎತ್ತಲಿವೆ 5 ಸೋಲಾರ್ ವಿದ್ಯುತ್ ಘಟಕ]

ಈ ವಾಣಿಜ್ಯ ಕಟ್ಟಡ ಸಂಪೂರ್ಣವಾಗಿ ಸೌರವಿದ್ಯುತ್ ನಿಂದಲೇ ಕಾರ್ಯನಿರ್ವಹಿಸುವ ರಾಜ್ಯದ ಪ್ರಥಮ ಕಟ್ಟಡವಾಗಿದ್ದು, ಲಿಫ್ಟ್ ಆಪರೇಷನ್, ಹವಾನಿಯಂತ್ರಿತ ವ್ಯವಸ್ಥೆ ಸೇರಿದಂತೆ ಕಟ್ಟಡದ ಹಲವಾರು ವಿಶೇಷತೆ ಬಗ್ಗೆ ತಿಳಿಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ಮೊ.ನಂ: 8880036271
ಇ-ಮೇಲ್: www.pramlenterprises.com












Click it and Unblock the Notifications