ಬೆಂಗಳೂರು; 4ನೇ ಮಹಡಿಯಿಂದ ಬಿದ್ದು ಟೆಕ್ಕಿ ಸಾವು
ಬೆಂಗಳೂರು, ಮೇ 21 : ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬರು 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Recommended Video
ಮೃತಪಟ್ಟವರನ್ನು ಉತ್ತಮ್ ಹೆಗಡೆ (30) ಎಂದು ಗುರುತಿಸಲಾಗಿದೆ. ಬೆನ್ನಿಗಾನಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಅವರು ಗುರುವಾರ ಮುಂಜಾನೆ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
"ಉತ್ತಮ್ ಹೆಗಡೆ ಕುಟುಂಬದ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಬುಧವಾರ ರಾತ್ರಿ ಕುಟುಂಬದವರ ಜೊತೆಗೆ ಊಟ ಮಾಡಿದ್ದರು. ನಂತರ ಎಲ್ಲರೂ ಮಲಗಿದ್ದಾರೆ" ಎಂದು ರಾಮಮೂರ್ತಿ ನಗರ ಪೊಲೀಸರು ಹೇಳಿದ್ದಾರೆ.

"ಮುಂಜಾನೆ ಉತ್ತಮ್ ಹೆಗಡೆ ಕೊಠಡಿಯಿಂದ ಹೊರ ಬಂದಿದ್ದರು. 4ನೇ ಮಹಡಿಯಿಂದ ಬಿದ್ದು ಅವರು ಗಾಯಗೊಂಡಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ. ಇದು ಆತ್ಮಹತ್ಯೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಉತ್ತಮ್ ಹೆಗಡೆ ಸಾವಿನ ಕುರಿತು ಕುಟುಂಬದವರ ಹೇಳಿಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆಯಿಂದ ಇದು ಆತ್ಮಹತ್ಯೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ತನಿಖೆ ಮುಂದುವರೆದಿದೆ.












Click it and Unblock the Notifications