Skywalks: ಬೆಂಗಳೂರಿನ ಈ 11 ಸ್ಥಳಗಳಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ BBMP ಪ್ಲಾನ್, ಎಲ್ಲೆಲ್ಲಿ?-ಮಾಹಿತಿ ತಿಳಿಯಿರಿ

ಬೆಂಗಳೂರು, ಜನವರಿ, 24: ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದು, ಅಪಘಾತಗಳು ಕೂಡ ಹೆಚ್ಚಾಗುತ್ತಲೇ ಇವೆ. ಇನ್ನು ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಪ್ರಮುಖ ರಸ್ತೆಗಳಲ್ಲಿ ಸ್ಕೈವಾಕ್‌ ನಿರ್ಮಿಸಬೇಕೆಂದು ನಗರ ಸಂಚಾರ ಪೊಲೀಸರು ಸಲಹೆ ನೀಡಿದ್ದು, ಈ 11 ಸ್ಥಳಗಳಲ್ಲಿ ಇದರ ಕಾರ್ಯಸಾಧ್ಯತಾ ವರದಿ ತಯಾರಿಸಲು ಬಿಬಿಎಂಪಿ ನಿರ್ಧರಿಸಿದೆ.

ನಗರದಲ್ಲಿ ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದಾರೆ. ಇದರಲ್ಲಿ ಬ್ಲ್ಯಾಕ್‌ಸ್ಪಾಟ್‌ ಎಂದು 11 ಪ್ರದೇಶಗಳನ್ನು ಗುರುತಿಸಿದೆ. ಇಲ್ಲಿ ರಸ್ತೆ ದಾಟುವ ವೇಳೆ ಪಾದಚಾರಿಗಳಿಗೆ ಹೆಚ್ಚಿನ ಅಪಘಾತ ಆಗುತ್ತಿದೆ ಹಾಗೂ ವಾಹನ ಸಂಚಾರಕ್ಕೂ ಅಡೆತಡೆ ಆಗುತ್ತಿದೆ. ಆದ್ದರಿಂದ ಸ್ಕೈವಾಕ್‌ಗಳನ್ನು ನಿರ್ಮಿಸಬೇಕೆಂದು ಬಿಬಿಎಂಪಿಗೆ ಸಂಚಾರ ಪೊಲೀಸರು ವರದಿ ಸಲ್ಲಿಸಿದ್ದಾರೆ ಎಂದು ಪ್ರಜಾವಾಣಿಯಲ್ಲಿ ವರದಿ ಆಗಿದೆ.

Skywalks: BBMP has decided to skywalks construct at these 11 places of Bengaluru

ಪೊಲೀಸರ ಸಲಹೆಯಂತೆ ಬಿಬಿಎಂಪಿ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಕಾರ್ಯಸಾಧ್ಯತಾ ವರದಿ ಸಿದ್ಧಿಪಡಿಸಲು ಟೆಂಡರ್‌ ಕರೆದಿದೆ. ಫೆಬ್ರವರಿ ಮೊದಲ ವಾರದಲ್ಲಿ ಸಂಸ್ಥೆ ನಿಗದಿ ಮಾಡಿ, 90 ದಿನಗಳಲ್ಲಿ ವರದಿ ನೀಡಲು ಸೂಚಿಸಲಾಗುತ್ತದೆ. ವರದಿ ಬಂದ ಬಳಿಕ ಯಾವ ಅನುದಾನದಲ್ಲಿ ನಿರ್ಮಿಸಬೇಕು ಅಥವಾ ಸಾರ್ವಾಜನಿಕ-ಖಾಸಗಿ ಸಹಭಾಗಿತ್ವದ ಮಾದರಿ ಆದ್ಯೆತೆ ಕೊಡಬೇಕೇ ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಬಿಬಿಎಂಪಿ ತಾಂತ್ರಿಕ ಕೋಶದ ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

ಈ ಸ್ಥಗಳಲ್ಲಿ ಸ್ಕೈವಾಕ್‌ ನಿರ್ಮಾಣಕ್ಕೆ ನಿರ್ಧಾರ

* ಟ್ಯಾಂಕ್‌ ಬಂಡ್‌ ರಸ್ತೆ
* ಹೊರವರ್ತುಲ ರಸ್ತೆಯ ಚೌಡೇಶ್ವರಿ ಅಂಡರ್‌ಪಾಸ್‌ ಬಳಿ
* ಕೈಕೊಂಡನಹಳ್ಳಿ ಜಂಕ್ಷನ್‌
* ತುಮಕೂರು ರಸ್ತೆಯ ಆರ್‌ಎಂಸಿ ಯಾರ್ಡ್‌ ಸಮೀಪ
* ಹೊರವರ್ತುಲ ರಸ್ತೆಯ ಎನ್‌ಸಿಸಿ ಅಪಾರ್ಟ್‌ಮೆಂಟ್‌ ಬಳಿ
* ಹೊರವರ್ತುಲ ರಸ್ತೆಯ ಬಾಗ್ಮನೆ ಟೆಕ್‌ಪಾರ್ಕ್‌ ಸಮೀಪ
* ಹೂಡಿ ಜಂಕ್ಷನ್‌
* ಹಳೇ ಮದ್ರಾಸ್‌ ರಸ್ತೆಯ ಜಿಆರ್‌ಟಿ ಜ್ಯುವೆಲರ್ಸ್‌ ಎದುರು
* ಹಳೇ ಮದ್ರಾಸ್‌ ರಸ್ತೆಯ ಕಾರ್ಲ್ಟನ್‌ ಟವರ್‌ ಬಳಿ
* ಮೈಸೂರು ರಸ್ತೆಯ ಬಿಎಚ್‌ಇಎಲ್‌ ಸಮೀಪ
* ಸರ್ಜಾಪುರ ರಸ್ತೆಯ ಕೃಪಾನಿಧಿ ಕಾಲೇಜು ಬಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+