• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿ ಕಾಮಗಾರಿ ಇಂದಿನಿಂದ ಆರಂಭ

|

ಬೆಂಗಳೂರು,ಡಿಸೆಂಬರ್ 16: ಇಂದಿನಿಂದ ಸಿರ್ಸಿ ಸರ್ಕಲ್ ಮೇಲ್ಸೇತುವೆ ಇನ್ನೊಂದು ಬದಿಯ ದುರಸ್ತಿ ಕಾಮಗಾರಿ ಆರಂಭವಾಗಲಿದೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಸೋಮವಾರ(ಡಿಸೆಂಬರ್ 16) ಮಧ್ಯಾಹ್ನ 12 ಗಂಟೆಯಿಂದ ಮೇಲ್ಸೇತುವೆ ಸಂಚಾರ ಸ್ಥಗಿತಗೊಳ್ಳಲಿದೆ. ಸಿರ್ಸಿ ಮೇಲ್ಸೇತುವೆಯಿಂದ 2.65 ಕಿ.ಮೀ ಉದ್ದವಿದ್ದು, ಎರಡು ಹಂತಗಳಲ್ಲಿ ಕಾಮಗಾರಿ ನಡೆಸುವುದಕ್ಕೆ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರು ಯೋಜನೆ ರೂಪಿಸಿದ್ದಾರೆ.

ಮೊದಲ ಹಂತದ ಕಾಮಗಾರಿ

ಮೊದಲ ಹಂತದ ಕಾಮಗಾರಿ

ಮೈಸೂರು ರಸ್ತೆ ಕಡೆಯಿಂದ ಮೇಲ್ಸೇತುವೆ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುತ್ತಿದೆ. ಸಂಚಾರ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ 6ರಿಂದ ಸಂಜೆ 4ವರಗೆ ಹಾಗೂ ರಾತ್ರಿ 11ರಿಂದ ಬೆಳಗ್ಗೆ 6 ಗಂಟೆವರೆಗೆ ಮೈಸೂರು ಕಡೆಯಿಂದ ಬರುವ ವಾಹನಗಳಲ್ಲಿ ಈಗಾಗಲೇ ಕಾಮಾಗಾರಿ ನಡೆಸಲಾಗಿರುವ ಮೇಲ್ಸೇತುವೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಹೀಗೆ ಮೇಲ್ಸೇತುವೆ ಬಳಸಿ ಬರುವ ವಾಹನಗಳನ್ನು ರಾಯನ್ ವೃತ್ತದ ಬಳಿ ಎರ ತಿರುವು ಪಡೆದು ಯಥಾ ಪ್ರಕಾರ ಮೆಜೆಸ್ಟಿಕ್ ಹಾಗೂ ಪುರಭವನದ ಕಡೆ ಸಾಗಬೇಕಾಗಿದೆ.

10 ದಿನಗಳ ಕಾಲ ಸುಮನಹಳ್ಳಿ ಮೇಲ್ಸೇತುವೆ ಬಂದ್, ಪರ್ಯಾಯ ಮಾರ್ಗ?

ಟೌನ್‌ಹಾಲ್‌ನಿಂದ ಬರುವ ವಾಹನಗಳಿಗೆ ಯಾವ ಮಾರ್ಗ

ಟೌನ್‌ಹಾಲ್‌ನಿಂದ ಬರುವ ವಾಹನಗಳಿಗೆ ಯಾವ ಮಾರ್ಗ

ಟೌನ್‌ಹಾಲ್‌ನಿಂದ ಮೈಸೂರು ರಸ್ತೆ ಕಡೆ ಸಂಚರಿಸುವ ವಾಹನಗಳು ರಾಯನ್ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ರಾಯನ್ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಸೇತುವೆಯಿಂದ ಚಾಮರಾಜಪೇಟೆ ಕಡೆ ಮೇಲ್ಸೇತುವೆಯಿಂದ ಇಳಿದು ಒಂದನೇ ಮುಖ್ಯರಸ್ತೆ ಮೂಲಕ ಮೈಸೂರು ರಸ್ತೆ ಕಡೆ ತೆರಳಬೇಕಾಗಿದೆ.

ಸಂಜೆ 4ರಿಂದ ರಾತ್ರಿ11ರವರೆಗೆ ವಾಹನದ ಮಾರ್ಗ

ಸಂಜೆ 4ರಿಂದ ರಾತ್ರಿ11ರವರೆಗೆ ವಾಹನದ ಮಾರ್ಗ

ಸಂಜೆ 4ರಿಂದ ರಾತ್ರಿ 11ರವರೆಗೆ ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಮೇಲ್ಸೇತುವೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಇನ್ನು ಮೈಸೂರು ಕಡೆಯಿಂದ ಬರುವ ವಾಹನಗಳು ಮೇಲ್ಸೇತುವೆಯ ಕೆಳಭಾಗದಲ್ಲಿ ಸಂಚರಿಸಿ ಕೆಆರ್ ಮಾರುಕಟ್ಟೆ ಬಳಸಿ ಪುರಭವನ ಕಡೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಸುಮನಹಳ್ಳಿ ಫ್ಲೈಓವರ್ ದುರಸ್ತಿ ಕಾಮಗಾರಿ

ಸುಮನಹಳ್ಳಿ ಫ್ಲೈಓವರ್ ದುರಸ್ತಿ ಕಾಮಗಾರಿ

ಸುಮನಹಳ್ಳಿ ಮೇಲ್ಸೇತುವೆ ದುರಸ್ತಿ ಕಾಮಗಾರಿಯು ಸೋಮವಾರದಿಂದಲೇ ಆರಂಭವಾಗಲಿದೆ. ಆದರೆ, ಈ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರತಿನಿತ್ಯದಂತೆ ವಾಹನ ಸಂಚಾರ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Repair works on the other side of the Sirsi Circle Flyover will begin Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X