ಜಪಾನಿ ಭಾಷೆ ಕಲಿಯಲು ಎಸ್‌ಐಎಫ್‌ನಿಂದ ಇನ್ನು 9 ಡೆಸ್ಕ್ ಆರಂಭ
ಬೆಂಗಳೂರು, ಆಗಸ್ಟ್ 31 : ಜಪಾನಿ ಭಾಷೆ ಬೋಧನೆ ಮತ್ತು ತಾಂತ್ರಿಕ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲು ಎಸ್‌ಐಎಫ್ ಕರ್ನಾಟಕದಲ್ಲಿ 9 ಕಡೆ ಜಪಾನಿ ಡೆಸ್ಕ್ ಆರಂಭಿಸಲು ನಿರ್ಧರಿಸಿದೆ. ಇದರಿಂದ ತಾಂತ್ರಿಕ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯಲು ಸಹಕಾರಿಯಾಗಲಿದೆ.
ಸುಕುರಾ ಇಂಡಿಯಾ ಫೌಂಡೇಷನ್ (ಎಸ್‌ಐಎಫ್), ಜಪಾನಿ ಕಾರ್ಪೊರೇಟ್ ಹೌಸ್‌ಗಳು, ಸಂಸ್ಥೆಗಳ ಸಹಯೋಗದಲ್ಲಿ ಈ ಡೆಸ್ಕ್‌ಗಳನ್ನು ಆರಂಭಿಸಿದೆ. ಎಸ್‌ಐಎಫ್ ಸ್ಥಾಪಕ ಬಿ.ಜಿ.ಶ್ರೀಧರ್ ಈ ಕುರಿತು ಮಾಹಿತಿ ನೀಡಿದ್ದು, 'ಇದರಿಂದ ವಿದ್ಯಾರ್ಥಿಗಳಿಗೆ ಜಪಾನ್ ಮಾತ್ರವಲ್ಲ, ಭಾರತದಲ್ಲಿ ಇರುವ ಜಪಾನ್ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಇದರಿಂದ ನೆರವಾಗಲಿದೆ' ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ವೈಟ್ ಫೀಲ್ಡ್, ಎಚ್‌ಎಸ್ಆರ್ ಲೇಔಟ್, ರಾಜಾಜಿನಗರ, ಪೀಣ್ಯ ಕೈಗಾರಿಕಾ ಪದೇಶ, ಸಹಕಾರ ನಗರದ ಸೇರಿ 5 ಕಡೆ ಜಪಾನಿ ಡೆಸ್ಕ್ ಆರಂಭವಾಗಲಿದೆ. ಮೈಸೂರು, ಬೆಳಗಾವಿ, ಧಾರವಾಡ, ತುಮಕೂರಿನಲ್ಲಿ ತಲಾ ಒಂದು ಕೇಂದ್ರ ಸ್ಥಾಪನೆಯಾಗಲಿದೆ.
ಕರ್ನಾಟಕದ ಇತರೆ ನಾಲ್ಕು ಜಿಲ್ಲೆಗಳಲ್ಲಿ ಮಾರ್ಚ್ 2018ಕ್ಕೂ ಮೊದಲು ನಾಲ್ಕು ಡೆಸ್ಕ್‌ಗಳನ್ನು ಆರಂಭಿಸಲಾಗುತ್ತದೆ. ಬೆಂಗಳೂರಿನಲ್ಲಿ ಇನ್ನೂ ಎರಡು ಕೇಂದ್ರ ಸ್ಥಾಪನೆಯಾಗಲಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಅವು ಕಾರ್ಯಾರಂಭ ಮಾಡಲಿವೆ.
ಕಳೆದ ಹಲವು ವರ್ಷಗಳಲ್ಲಿ ಭಾರತದ ಇಂಜಿನಿಯರ್‌ಗಳು ಜಪಾನ್ ಐಟಿ ಉದ್ಯಮದ ಬೆನ್ನೆಲುಬು ಆಗಿದ್ದು, ಬ್ಯಾಂಕಿಂಗ್, ಹಣಕಾಸು ಸೇವೆ, ಮೂಲಸೌಕರ್ಯ, ಇಂಧನ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಪಾನ್‌ನಲ್ಲಿ ಭಾರತೀಯ ಮೂಲದವರಿಗೆ ಹಲವು ಉದ್ಯೋಗ ಸೃಷ್ಟಿಯಾಗುತ್ತಿದೆ.












Click it and Unblock the Notifications