Siddaramaiah: ವೈರಲ್ ಸ್ಟಿಂಗ್ ವಿಡಿಯೋ ಕೇಸ್! ತನಿಖೆಯ ಅಪ್ಡೇಟ್ ಕೊಟ್ಟ ಬೆಂಗಳೂರು ಪೊಲೀಸ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಎಂಬ ವಿಚಾರ ತೀವ್ರ ಸ್ವರೂಪ ಪಡೆದಂತೆ ಕಾಣಿಸುತ್ತಿದೆ. ಶುಕ್ರವಾರ ರಾತ್ರಿ ಮೈಸೂರಿನಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಸಿದ್ದರಾಮಯ್ಯರದ್ದು ಎನ್ನಲಾಗುತ್ತಿರುವ ವೈರಲ್ ಸ್ಟಿಂಗ್ ವಿಡಿಯೋಗೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ.

ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕೇಸಿನಲ್ಲಿ ಇನ್ನೂವರೆಗೂ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಹೀಗಾಗಿ ಯೂಟ್ಯೂಬ್ ಸೇರಿದಂತೆ ವಿವಿಧ ಜಾಲತಾಣಗಳ ಮೂಲಕವೂ ತಾಂತ್ರಿಕ ವಿಶ್ಲೇಷಣೆ ಮಾಡುತ್ತಿದ್ದಾರೆ. ಈಗಾಗಲೇ ಹಲವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾಗಿ ತಿಳಿಸಿ

Siddaramaiah Viral Sting Video

ವೀಡಿಯೊದ ಮೂಲ ಪತ್ತೆಗೆ ಮುಂದಾದ ಬೆಂಗಳೂರು ನಗರ ಪೊಲೀಸರಿಗೆ ಮತ್ತು ಅದರಲ್ಲಿ ಭಾಗಿಯಾದವರನ್ನು ಗುರುತಿಸಲು ವಿವಿಧ ಆಯಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ವಿಡಿಯೋ ಹರಿದಾಡಿದ್ದು, ಅದರ ಪ್ರಸಾರದಲ್ಲಿ ಭಾಗಿಯಾಗಿರುವವರನ್ನು ಗುರುತಿಸಲು ಪೊಲೀಸರು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ವೇದಿಕೆಯಿಂದ ಮಾಹಿತಿ ಕೇಳಿದ್ದಾರೆ. ಆಯಾ ಕಂಪನಿಗಳು ಮಾಹಿತಿ ನೀಡಿದರೆ ಇನ್ನಷ್ಟು ಮಾಹಿತಿ ದೊರೆಯಲಿವೆ.

ವೈರಲ್ ಆದ ವಿಡಿಯೋ ನಿಜವೋ, ಎಡಿಟ್ ಮಾಡಿದ್ದಾ?

ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಮುಖ ಕಾಣದಂತೆ, ಕೇವಲ ಧ್ವನಿ ಮಾತ್ರವೇ ಕೇಳುವಂತೆ ಮಾಡಲಾದ ವಿಡಿಯೋ ವೈರಲ್ ಆಗಿದೆ. ಇದು ಸ್ಟಿಂಗ್ ಆಪರೇಷನದ್ದೇ ಎನ್ನಲಾಗುತ್ತಿದೆ. ಇದು ನಿಜವೋ ಅಥವಾ ತಂತ್ರಜ್ಞಾನ ಬಳಸಿ ರಿಚಿಸಿದ ವಿಡಿಯೋನಾ ಎಂಬುದು ತನಿಖೆಯಾಗುತ್ತಿದೆ. ಇದರ ಹಿಂದಿರುವವರು ಯಾರು, ಇದನ್ನು ರಚಿಸಿದ್ದೇಕೆ? ಎಂಬುದರ ಜಾಡು ಪತ್ತೆಗೆ ಖಾಕಿ ಮುಂದಾಗಿದೆ.

ತನಿಖೆಯ ಭಾಗವಾಗಿ ಪೊಲೀಸರು ಸಂಬಂಧಿದಿ ಕೆಲವು ಸುಳಿವು ತಡಕಾಡುತ್ತಿದ್ದಾರೆ. ಸ್ಟಿಂಗ್ ಕಾರ್ಯಾಚರಣೆಯ ಹಿಂದಿನ ದೊಡ್ಡ ಪಿತೂರಿ ಇದೆಯೇ ಎಂಬುದರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಕಳೆದ ಸೋಮವಾರ ಎಫ್‌ಐಆರ್ ದಾಖಲಾಗಿತ್ತು. ಅದಾಗಿ ನಾಲ್ಕು ದಿನಗಳಲ್ಲೇ ಶಂಕಿತ 21 ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಒಳಗಪಡಿಸಿದ್ದಾರೆ. ವಿಡಿಯೋ/ಸ್ಟಿಂಗ್ ಆಪರೇಷನ್ ಹಿಂದಿನ ಪ್ರಮುಖ ರೂವಾರಿಯ ಪತ್ತೆಗೆ ಪೊಲೀಸರು ಇಳಿದಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ನಗರ ಪೊಲೀಸ್ ತಿಳಿಸಿದ್ದಾರೆ.

@@ Siddaramaiah: ಸ್ಟಿಂಗ್ ಆಪರೇಷನ್: ವಿಡಿಯೋ ತುಣುಕುಗಳ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್​ ಮೊರೆ ಹೋದ ಸಿದ್ದರಾಮಯ್ಯ

ಸಿಎಂ, ಮಾಜಿ ಸಿಎಂ ಒಂದು ಗಂಟೆ ಗೌಪ್ಯ ಚರ್ಚೆ

ಶುಕ್ರವಾರ ಮೈಸೂರಿನಲ್ಲಿ ಪ್ರತ್ಯೇಕವಾಗಿ ಒಂದು ಗಂಟೆ ಕಾಲ ಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾಗಿಲು ಹಾಕಿಕೊಂಡೇ ಚರ್ಚೆ ನಡೆಸಿದರು. ಸ್ಟಿಂಗ್ ಆಪರೇಷನ್, ದೂರು, ವಿಡಿಯೋಗೆ ಸಂಬಂಧಿಸಿದಂತೆ ಚರ್ಚೆ ನಡೆದಿವೆ ಎನ್ನಲಾಗಿದೆ. ಆದರೆ ಚರ್ಚೆಯ ನಿಖರ ವಿಷಯಗಳು ಬಹಿರಂಗಗೊಂಡಿಲ್ಲ. ಸರ್ಕಾರದ ಮೇಲಿನ ಆರೋಪ, ಆಂತರಿಕ ವಿಚಾರಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ. ಸ್ಟಿಂಗ್ ಸುದ್ದಿ ತೀವ್ರತೆ ಹೆಚ್ಚಾದ ಬೆನ್ನಲ್ಲೆ ಉಭಯ ನಾಯಕರ ಗೌಪ್ಯ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+