ಬೆಂಗಳೂರಲ್ಲಿ "ಹಿಂದಿ ಮಾತನಾಡು" ಎಂದವನಿಗೆ ಬಾರಿಸಬೇಕಿತ್ತು: ಪೊಲೀಸ್ ಅಧಿಕಾರಿ ಟ್ವೀಟ್ ವೈರಲ್!
ಬೆಂಗಳೂರಿನಲ್ಲಿ ಭಾಷಾ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಹಿಂದಿವಾಲಾಗಳು ಕರ್ನಾಟಕಕ್ಕೆ ಬಂದು ಕನ್ನಡಿಗರ ಮೇಲೆಯೇ ದರ್ಪ ಮೆರೆಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ರೀತಿ ಇರುವಾಗಲೇ ಪೊಲೀಸ್ ಅಧಿಕಾರಿಯೊಬ್ಬರ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಹಳೇ ಏರ್‌ಪೋರ್ಟ್ ರಸ್ತೆಯ ಮುರುಗೇಶನ ಪಾಳ್ಯದಲ್ಲಿ ಭಾಷಾ ವಿವಾದ ಸೃಷ್ಟಿಯಾಗಿತ್ತು. ಯುವಕನೊಬ್ಬ ಕಾರು ಚಾಲಕನೊಂದಿಗೆ ಇದು ಬೆಂಗಳೂರು ಆಗಿರಬಹುದು. ಆದರೆ, ಹಿಂದಿ ಮಾತನಾಡು ಎಂದಿದ್ದ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ವಿಚಾರವಾಗಿ ಹಿಂದಿಯವನಿಗೆ "ಎರಡು ಬಾರಿಸ ಬೇಕಿತ್ತು" ಅಂತ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಡಿಸಿಪಿ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ನಗರದಲ್ಲಿ ಭಾಷಾ ವಿವಾದವು ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು " ನೀವು ಕಾರ್‌ನಿಂದ ಇಳಿದು ಅವನ್ಗೆ ನಾಲಕ್ಕೂ ಬಾರಿಸಬೇಕಿತ್ತು" (ನೀವು ಕಾರ್ ಇಂದ ಇಳಿದು ಅವನ್ಗೆ ನಾಳಕ್ಕೂ ಬಾರಸ್ ಬೇಕಿತ್ತು) ಎಂದು ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ನೋಡಿ ಕನ್ನಡಿಗರು ಕಂಗಾಲಾಗಿದ್ದಾರೆ. ಸರ್ ಏನ್ ಹೇಳ್ತಾ ಇದ್ದೀರಾ ನಿಮ್ಮ ಕೌಂಟ್ ಹ್ಯಾಕ್ ಆಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ರೋಹಿತ್ ಎನ್ನುವವರು ಸರ್ ಆಮೇಲೆ ಕೇಸ್ ಆಗೋದು ಕನ್ನಡಿಗನ ಮೇಲೆ ಅಲ್ವಾ. ಇವರೆಲ್ಲ ರೈಟ್ ಜೀವಿಗಳು ಕೆಲಸದಿಂದ ವಜಾ ಮಾಡಿ ಒದ್ದು ಓಡಿಸಬೇಕು ಅಂತ ಹೇಳಿದ್ದಾರೆ. ಆದರೆ ತುಂಬಾ ಜನ ಒಬ್ಬರು ಮಾಜಿ ಪೊಲೀಸ್ ಅಧಿಕಾರಿ ಈ ರೀತಿ ಟ್ವೀಟ್ ಮಾಡುವುದು ಎಂದರೆ ಏನು ಅಂತ ಪ್ರಶ್ನೆ ಮಾದಿದ್ದಾರೆ. ಇದು ಭಾಸ್ಕರ್ ರಾವ್ ಅವರೇ ಮಾಡಿರುವ ಟ್ವೀಟ್ ಮಾಡಿದ್ದಾ ಎಂದು ಪ್ರಶ್ನಿಸಿದ್ದಾರೆ.
ನೀವು ಕಾರ್ ಇಂದ ಇಳಿದು ಅವನ್ಗೆ ನಾಳಕ್ಕೂ ಬಾರಸ್ ಬೇಕಿತ್ತು
— Bhaskar Rao (@Nimmabhaskar22) April 19, 2025
ಸಂಗಮ್ ಎನ್ನುವವರು, Funny that it's coming from a DCP account 🤣🤣🤣 ಕನ್ನಡ ಅಂತ ಬಂದ್ರೆ ನಮ್ ಪೋಲೀಸು ರೋಚ್ಗೆಲ್ತಾರೆ ಅಂತ ಆಯ್ತು!! 👏🏻👏🏻👏🏻 ಅಂತ ಹೇಳಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯ ಟ್ವೀಟ್‌ಗೆ ಜನ ಕಾಮಿಡಿಯಾಗಿ ರಿಯಾಕ್ಟ್ ಮಾಡಿದ್ದಾರೆ. ನೀವು ಹೇಳಿದಂತೆ ಮಾಡಿದರೆ, ಆಮೇಲೆ @BlrCityPolice ಅವರು ಕನ್ನಡಿಗನಿಗೆ ಒದ್ದು ಒಳಗೆ ಹಾಕಿ ರೀಲ್ಸ್ ಮಾಡಿ ಹರಿಬಿಡುತ್ತಾರೆ ಎಂದಿದ್ದಾರೆ. ನಿರಂಜನ್ ಎನ್ನುವವರು ಸಾರ್ ! ಇಂತವರಿಂದ ಕನ್ನಡಿಗರಿಗೆ ಬಹಳ ತೊಂದರೆ ಆಗುತ್ತಿದೆ . ಪೊಲೀಸ್ ಕಡೆ ಇಂದ ಸ್ಥಳೀಯರಿಗೆ ಮೊದಲು ಪ್ರಾಶಸ್ತ್ಯ ಇರುವ ತರಹ ಆಗಲಿ ! ಹೊರಗಡೆಯಿಂದ ಬಂದವರ ಹಾವಳಿ ಜಾಸ್ತಿ ಆಗಿದೆ ಅಂತ ನೋವು ತೋಡಿಕೊಂಡಿದ್ದಾರೆ.
ಸರ್ ನೀವು ಪೊಲೀಸ್ ಆಗಿದ್ದವರು..
ಭಾಸ್ಕರ್ ರಾವ್ ಅವರ ಟ್ವೀಟ್ ನೋಡಿ ಕನ್ನಡಿಗರು ಶಾಕ್ ಆಗಿದ್ದರು. ಸರ್ ನೀವು ಈ ಹಿಂದೆ ಪೊಲೀಸ್ ಅಧಿಕಾರಿ ಆಗಿದ್ದವರು. ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದವರು. ನೀವು ಈ ರೀತಿಯ ಹೇಳಿಕೆಗಳನ್ನು ಕೊಟ್ಟರೆ ಹೇಗೆ, ನೀವು ಹಿಂದೆ ಪೊಲೀಸ್ ಅಧಿಕಾರಿ ಆಗಿದ್ದವರು ಎನ್ನುವುದನ್ನು ಮರೆತೋದ್ರಾ ಅಂತ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications