Namma Metro: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ವಿಳಂಬ?

ಬೆಂಗಳೂರು, ಆಗಸ್ಟ್‌ 05: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ನಮ್ಮ ಮೆಟ್ರೋ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ. ಹಳದಿ ಮಾರ್ಗದಲ್ಲಿ ಈಗಾಗಲೇ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಆದರೆ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ವಿಳಂವಾಗಲಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮೆಟ್ರೋ ರೈಲುಗಳನ್ನು ಓಡಿಸಲಿದೆ.

18.82 ಕಿ. ಮೀ. ನಮ್ಮ ಮೆಟ್ರೋ ಹಳದಿ ಮಾರ್ಗ ಆರ್. ವಿ. ರಸ್ತೆ-ಬೊಮ್ಮಸಂದ್ರ ಟೆಕ್ಕಿಗಳಿಗೆ ಅನುಕೂಲಕರವಾಗಿದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾದರೆ ನಗರದ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 30ಕ್ಕೂ ಅಧಿಕ ಮಾದರಿ ಪ್ರಾಯೋಗಿಕ ಪರೀಕ್ಷೆಗಳು ಮುಗಿದ ಬಳಿಕ, ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲಿಸಲಿದ್ದಾರೆ. ಬಳಿಕ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ಸಿಗಲಿದೆ.

Shortage Of Coaches Namma Metro RV Road Bommasandra May Delay

2017ರಲ್ಲಿ ಈ ಮಾರ್ಗದ ಕಾಮಗಾರಿ ಆರಂಭವಾಗಿತ್ತು. ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳು ಅಂತಿಮ ಹಂತದಲ್ಲಿದೆ. ಈ ಮಾರ್ಗದಲ್ಲಿ ಚಾಲಕರ ರಹಿತ ನಮ್ಮ ಮೆಟ್ರೋ ರೈಲು ಓಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಈಗಾಗಲೇ ಈ ಮಾದರಿಯ ಎರಡು ರೈಲುಗಳು ಚೀನಾದಿಂದ ಬಂದಿದ್ದು, ಸದ್ಯ ಪ್ರಾಯೋಗಿಕ ಸಂಚಾರ ಚಾಲಕ ಸಹಿತವಾಗಿಯೇ ನಡೆಯುತ್ತಿದೆ.

ಬೋಗಿಗಳ ಕೊರತೆ ಕಾಡುತ್ತಿದೆ: ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡರೂ ಸಹ ರೈಲು ಸಂಚಾರಕ್ಕೆ ಬೋಗಿಗಳ ಕೊರತೆ ಸಮಸ್ಯೆ ಇದೆ. ಈ ಮಾರ್ಗದಲ್ಲಿ ಸದ್ಯ ಎರಡು ರೈಲುಗಳಲ್ಲಿ ಪ್ರಾಯೋಗಿಕ ಸಂಚಾರ ಮಾಡಲಾಗುತ್ತಿದೆ. ಪೂರ್ಣ ಪ್ರಮಾಣದ ಪರೀಕ್ಷೆಗೆ ಇನ್ನೂ ಎರಡು ರೈಲುಗಳ ಅಗತ್ಯವಿದೆ.

ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬೋಗಿಗಳು ಇನ್ನೂ ನಿರ್ಮಾಣ ಹಂತದಲ್ಲಿದೆ. ಆದ್ದರಿಂದ ಪ್ರಾಯೋಗಿಕ ಸಂಚಾರ ಮುಗಿಸಿದ ಬಳಿಕ ವಾಣಿಜ್ಯ ಸಂಚಾರ ಆರಂಭವಾದರೂ ಸಹ ರೈಲುಗಳ ಕೊರತೆ ಎದುರಾಗಲಿದೆ. ಇನ್ನೂ 3-4 ರಿಂದ ತಿಂಗಳಲ್ಲಿ ಬೋಗಿಗಳು ಬರುವ ನಿರೀಕ್ಷೆ ಇದೆ. ಅವುಗಳ ಜೋಡಣೆ ಬಳಿಕ ಸಂಚಾರಕ್ಕೆ ಮುಕ್ತವಾಗಲಿವೆ.

ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾದರೆ 36 ಬೋಗಿಯ 6 ರೈಲುಗಳ ಅಗತ್ಯವಿದೆ ಎಂಬುದು ಸದ್ಯದ ಲೆಕ್ಕಾಚಾರವಾಗಿದೆ. ಸದ್ಯ ಎರಡು ರೈಲುಗಳಿವೆ. ಇನ್ನೂ ಎರಡು ರೈಲುಗಳು 2 ತಿಂಗಳಿನಲ್ಲಿ ಬೆಂಗಳೂರಿಗೆ ಆಗಮಿಸಬಹುದು ಎಂಬ ನಿರೀಕ್ಷೆ ಇದೆ.

ಬಿಎಂಆರ್‌ಸಿಎಲ್ ಚೀನಾ ಮೂಲದ ಚೀನಾ ರೈಲ್ವೆ ರೋಲಿಂಗ್‌ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ)ಗೆ ಬೋಗಿ ತಯಾರಿಕಾ ಟೆಂಡರ್ ನೀಡಿದೆ. ಒಪ್ಪಂದದ ಅನ್ವಯ ಕಂಪನಿ ಭಾರತದ ತನ್ನ ಪಾಲುದಾರ ಕೋಲ್ಕತ್ತಾ ಮೂಲದ ಟಿಟಾಗರ್ ವ್ಯಾಗನ್ಸ್ ಮೂಲಕ 216 ಬೋಗಿಯನ್ನು ತಯಾರಿಸಿ ಪೂರೈಕೆ ಮಾಡಬೇಕಿದೆ.

2023ರಲ್ಲಿಯೇ 6 ಬೋಗಿಯ ಎರಡು ಸೆಟ್ ರೈಲುಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿತ್ತು. ಸದ್ಯ ಒಂದು ಸೆಟ್ ಮಾತ್ರ ನಗರದಲ್ಲಿದ್ದು, ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಒಂದು ಸೆಟ್‌ ಚೀನಾದಿಂದ, ಉಳಿದ 34 ರೈಲು ಕೋಲ್ಕತ್ತಾದಿಂದ ಬೆಂಗಳೂರಿಗೆ ಪೂರೈಕೆಯಾಗಬೇಕು.

ನಗರಕ್ಕೆ ಬರುವ 216 ಕೋಚ್‌ಗಳ ಪೈಕಿ ಬಿಎಂಆರ್‌ಸಿಎಲ್ 126 ಕೋಚ್‌ಗಳನ್ನು ನೇರಳೆ, ಹಸಿರು ಮಾರ್ಗಕ್ಕೆ ಮತ್ತು 90 ಬೋಗಿಗಳನ್ನು ಹಳದಿ ಮಾರ್ಗಕ್ಕೆ ನಿಯೋಜಿಸಬೇಕು ಎಂದು ಯೋಜನೆ ರೂಪಿಸಿದೆ. ಹಸಿರು ಮಾರ್ಗದಲ್ಲಿ ವಿಸ್ತರಿತ ಮಾರ್ಗವಾದ ನಾಗಸಂದ್ರ-ಮಾದವರ ನಡುವೆ ಮೆಟ್ರೋ ಸಂಚಾರ ನಡೆಸಬೇಕಿರುವ ಕಾರಣ ಹೆಚ್ಚಿನ ಬೋಗಿಯ ಅಗತ್ಯವಿದೆ.

ಈ ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರ, ಹೆಬ್ಬಗೋಡಿ, ಹಸ್ಕೂರ್‌ ರಸ್ತೆ, ಇನ್ಫೋಸಿಸ್‌ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಬಿರಿಟೆನ ಅಗ್ರಹಾರ, ಹೊಸರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್‌, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್. ವಿ. ರಸ್ತೆ ನಿಲ್ದಾಣಗಳಿವೆ.

ಕೆಲವು ಐಟಿ ಕಂಪನಿಗಳ ಜೊತೆ ಒಪ್ಪಂದವನ್ನು ಮಾಡಿಕೊಂಡು ಬಿಎಂಆರ್‌ಸಿಎಲ್ ಅವುಗಳಿಗೆ ಅನುಕೂಲವಾಗುವ ಮಾದರಿಯಲ್ಲಿ ಮೆಟ್ರೋ ನಿಲ್ದಾಣವನ್ನು ನಿರ್ಮಾಣ ಮಾಡಿದೆ. ನಗರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಾಫ್ಟ್‌ವೇರ್ ಉದ್ಯೋಗಿಗಳು ಈ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕಾಗಿ ಕಾದು ಕುಳಿತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+