ವಿಧಾನಸೌಧದಲ್ಲಿ ಅಚಾನಕ್ ಬೆಂಕಿ, ಸಿಬ್ಬಂದಿಗೆ ಆತಂಕ
ಬೆಂಗಳೂರು, ಫೆಬ್ರವರಿ ೦2: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ವಿಧಾನಸೌಧದಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿ ಆಗಿತ್ತು.
ವಿಧಾನಸೌಧದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ವಿ.ಸುನಿಲ್ ಕುಮಾರ್ ಅವರ ಕೊಠಡಿಯಲ್ಲಿ ಸ್ವಿಚ್‌ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯು ಪರದೆಗಳಿಗೆ ಅಂಟಿದೆ, ಮತ್ತು ಗೋಡೆಗೆ ಹಾಕಲಾಗಿದ್ದ ಕೆಲ ಭಾವಚಿತ್ರಗಳಿಗೆ ಅಲ್ಪ ಹಾನಿಯಾಗಿದೆ.

ಬೆಂಕಿ ಹೊತ್ತುಕೊಂಡಿರುವುದು ಗೊತ್ತಾದ ಕೂಡಲೇ ವಿಧಾನಸೌಧದ ವಿದ್ಯುತ್ ಕಡಿತಗೊಳಿಸಲಾಗಿದೆ. ಬೆಂಕಿಯನ್ನು ನಂದಿಸಿದ ನಂತರ, ಸ್ವಿಚ್‌ಬೋರ್ಡ್ ದುರ್ಸ್ತಿ ಮಾಡಲಾಗಿದೆ.












Click it and Unblock the Notifications