Bengaluru Traffic Police: ಬೆಂಗಳೂರಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರಿಗೆ ಶಾಕ್‌!

bengaluru traffic jam: ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳವಾಗ್ತಿದೆ. ಇದರ ನಡುವೆ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಆಗುವುದು ಸಹ ಹೆಚ್ಚಳವಾಗುತ್ತಿದೆ. ಇದಕ್ಕೆ ಸರಿಯಾಗಿಯೇ ಬೆಂಗಳೂರು ಟ್ರಾಫಿಕ್‌ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಲ್ಲಿ ಆಗ್ಗಾಗ್ಗೆ ಟ್ರಾಫಿಕ್‌ ರೂಲ್ಸ್‌ ಆಗುವುದು ಹಾಗೂ ಈ ರೀತಿ ರೂಲ್ಸ್‌ ಬ್ರೇಕ್‌ ಮಾಡುವವರಿಗೆ ಬೆಂಗಳೂರು ಟ್ರಾಫಿಕ್‌ ಪೊಲೀಸರು ದಂಡ ವಿಧಿಸುವುದನ್ನು ಕೇಳಿಯೇ ಇರುತ್ತೀರಿ. ಆದರೆ, ಈ ಬಾರಿ ಒಂದೇ ಬಾರಿಗೆ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿದೆ.

ಬೆಂಗಳೂರಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗ್ತಿದೆ. ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ನಗರದಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಪ್ರಕರಣಗಳೂ ಹೆಚ್ಚಾಗ್ತಿವೆ. ಇದೀಗ ಹಬ್ಬದ ಸಮಯದಲ್ಲಿ ಏಕಾಏಕಿ ಫೀಲ್ಡ್‌ಗೆ ಇಳಿದಿರುವ ಬೆಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ದಂಡದ ಬಿಸಿ ಸಹ ಮುಟ್ಟಿಸುತ್ತಿದ್ದಾರೆ.

Shock for those who break traffic rules in Bengaluru

ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿರುವ ಬೆಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಪಾಠ ಕಲಿಸಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸುವವ ಸಾವಿರಕ್ಕೂ ಹೆಚ್ಚು ಜನರಿಗೆ ಒಂದೇ ದಿನದಲ್ಲಿ ದಂಡಾಸ್ತ್ರ ಪ್ರಯೋಗಿಸಲಾಗಿದೆ.

ಈ ರೀತಿ ನಿಯಮ ಉಲ್ಲಂಘನೆ ಮಾಡುವವರಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರು, ಟ್ರಾಫಿಕ್‌ ಜಂಪ್‌, ನೋ ಎಂಟ್ರಿ ಮಾರ್ಗದಲ್ಲಿ ವಾಹನ ಚಲಾಯಿಸುವವರು ಹಾಗೂ ದ್ವಿಚಕ್ರ ವಾಹನಗಳಲ್ಲಿ ಟ್ರಿಪಲ್‌ ರೈಡಿಂಗ್‌ ಸೇರಿದಂತೆ ಹಲವು ನಿಯಮ ಉಲ್ಲಂಘನೆ ಪ್ರಕರಣಗಳು ಸೇರಿವೆ. ಇನ್ನು ಬೆಂಗಳೂರಲ್ಲಿ ಟ್ರಾಫಿಕ್ ರೂಲ್ಸ್‌ ಬ್ರೇಕ್‌ ಮಾಡಿರುವುದಕ್ಕೆ ಸಂಬಂಧಿಸಿದಂತೆ 1,055 ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ.

ಒನ್ ವೇ ಬರುವವರಿಗೆ ಎಚ್ಚರಿಕೆ: ಬೆಂಗಳೂರಲ್ಲಿ ಒನ್‌ವೇ ಅಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಿದೆ. ಇದರಿಂದ ಅಪಘಾತಗಳು ಹಾಗೂ ಸಂಚಾರ ದಟ್ಟಣೆ ಆಗುತ್ತಿರುವುದು ಸಹ ವರದಿಯಾಗುತ್ತಲ್ಲೇ ಇದೆ. ಟ್ರಾಫಿಕ್‌ ಜಾಮ್‌ ತಪ್ಪಿಸುವುದಕ್ಕೆ, ಬೇಗ ಹೋಗಬೇಕು ಅಥವಾ ಕಡಿಮೆ ಡಿಸ್ಟೆನ್ಸ್‌ನಲ್ಲಿ ಹೋಗಬಹುದು ಎಂದು ಹಲವು ಬೈಕ್‌ ಸವಾರರು ಒನ್‌ವೇ ಅಲ್ಲಿ ಹೋಗುವುದು ಇದೆ.

ಈ ರೀತಿ ಒನ್‌ವೇ ಅಲ್ಲಿ ಹೋಗಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಬೆಂಗಳೂರು ಟ್ರಾಫಿಕ್‌ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಒನ್‌ ವೇ ಅಲ್ಲಿ ಸಾಗಿ ನಿಯಮ ಉಲ್ಲಂಘನೆ ಮಾಡಿದ 812 ವಾಹನ ಚಾಲಕರಿಗೆ ಒಂದೇ ದಿನ ಬಿಸಿ ಮುಟ್ಟಿಸಲಾಗಿದೆ. ಅಲ್ಲದೇ ಫುಟ್‌ಪಾತ್‌ ಮೇಲೆ (ಪಾದಚಾರಿ ಮಾರ್ಗದಲ್ಲಿ) ವಾಹನ ಚಲಾಯಿಸುವ ಹಾಗೂ ವಾಹನ ನಿಲ್ಲಿಸಿದ್ದ 127 ಚಾಲಕರಿಗೆ ದಂಡಾಸ್ತ್ರ ಪ್ರಯೋಗಿಸಲಾಗಿದೆ. ಈ ಮೂಲಕ ಬರೋಬ್ಬರಿ ಒಂದೇ ದಿನದಲ್ಲಿ 64,000 ರೂಪಾಯಿ ದಂಡ ಸಂಗ್ರಹ ಮಾಡಲಾಗಿದೆ.

ಇನ್ನು ಬೆಂಗಳೂರಲ್ಲಿ ಟ್ರಾಫಿಕ್‌ ರೂಲ್ಸ್‌ಗೆ ಬ್ರೇಕ್‌ ಹಾಕುವ ಉದ್ದೇಶದಿಂದ ಈಗಾಗಲೇ ಎಐ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+