ಅತ್ಯಾಚಾರ ಪ್ರಕರಣ: ಡಿಜಿಯನ್ನು ಭೇಟಿ ಮಾಡಿದ ಶೋಭಾ ಕರಂದ್ಲಾಜೆ

ಬೆಂಗಳೂರು, ಜನವರಿ 13: ಕಾಸರಗೋಡಿನ ಯುವತಿ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿ, ವಿಡಿಯೋ ಮಾಡಿ ಕೊನೆಗೆ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವಂತೆ ಬೆದರಿಕೆ ಹಾಕಿದ್ದ ವ್ಯಕ್ತಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಸಂತ್ರಸ್ತೆ ಜೊತೆ ತೆರಳಿ ಡಿಜಿಗೆ ದೂರು ನೀಡಿದ್ದಾರೆ.

ಆತ ಸಂತ್ರಸ್ತೆಗೆ ಮಾನಸಿಕ ಹಿಂಸೆ ಕೊಟ್ಟು ಅಶ್ಲೀಲ ವಿಡಿಯೋಗಳನ್ನು ಮಾಡಿ, ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಬೆದರಿಕೆಯೊಡ್ಡಿದ್ದ, ಆಗ ಬೆಂಗಳೂರಿನಲ್ಲಿ ವಾಸವಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಇಂದು ಡಿಜಿ ನೀಲಮಣಿರಾಜು ಅವರನ್ನು ಭೇಟಿಯಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವಂತೆ ಒತ್ತಾಯಿಸಿದರು.

ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಇದನ್ನು ಸಿಐಡಿಗೆ ವಹಿಸಬೇಕು ಎಂದು ಮನವಿ ಮಾಡಿದ್ದೇವೆ.

Shobha Karandlaje Meet Neela Mani Raju

ರಾಜ್ಯದಲ್ಲಿ ನಡೆಯುತ್ತಿರುವ ಬೇರೆ ಬೇರೆ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಕೋನಗಳಲ್ಲಿ ಕೂಡಾ ಈ ಪ್ರಕರಣವನ್ನು ನೋಡಬೇಕಾಗಿದೆ.

ಆರೋಪಿಗಳು ಬೆಂಗಳೂರು, ಮಂಗಳೂರು ಎಲ್ಲಾ ಕಡೆ ಸಂತ್ರಸ್ಥೆಯನ್ನು ಸುತ್ತಾಡಿಸಿದ್ದಾರೆ,ಹಾಗಾಗಿ ಕೇವಲ ಬೆಂಗಳೂರು ಪೊಲೀಸರಿಂದ ಇದನ್ನು ತನಿಖೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಿಐಡಿ ತನಿಖೆಗೆ ವಹಿಸಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+