ಶಶಿ ಸುನಂದಾ ಮೆಹರ್ ಪ್ರೇಮ ಪ್ರಸಂಗ
ಬೆಂಗಳೂರು, ಜ.16: ಕೇಂದ್ರ ಸಚಿವ ಶಶಿ ತರೂರ್ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಭಾರತದ ಶಶಿ ಮೇಲೆ ಪಾಕಿಸ್ತಾನದ ಮಹಿಳೆ ಕರಿನೆರಳು ಬಿದ್ದಿದೆಯೇ? ಗುರುವಾರ ಬೆಳಗ್ಗಿನಿಂದಲೂ ಶಶಿ, ಸುನಂದಾ ಹಾಗೂ ಪಾಕಿಸ್ತಾನಿ ಪತ್ರಕರ್ತೆ ಮೆಹರ್ ಸುದ್ದಿಗೆ ಗ್ರಾಸವಾಗಿದ್ದಾರೆ. ಪಾಕಿಸ್ತಾನದ ಪತ್ರಕರ್ತೆ ನನ್ನ ಪತಿ ಶಶಿ ತರೂರ್ ಮೇಲೆ ಕಣ್ಣು ಹಾಕಿದ್ದಾಳೆ, ಆಕೆ ಐಎಸ್ ಐ ಏಜೆಂಟ್ ಎಂದು ಸುನಂದಾ ಗಂಭೀರ ಆರೋಪ ಮಾಡಿದ್ದಾರೆ.
ಆದರೆ, ಶಶಿ ತರೂರ್ ಜತೆ ಪಾಕಿಸ್ತಾನಿ ಪತ್ರಕರ್ತೆ ಮೆಹರ್ ಎರಡನೇ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗೆಳೆದಿರುವ ಸುನಂದಾ 'ನನ್ನ ಪತಿದೇವ ನನ್ನನ್ನು ಬಿಟ್ಟು ಬೇರೆ ಯುವತಿಯರ ಹಿಂದೆ ಬೀಳುವವನಲ್ಲ' ಎಂದಿದ್ದಾರೆ.
ಶಶಿ ಹಾಗೂ ಮೆಹರ್ ನಡುವಿನ ಒಡನಾಟವಿದ್ದರೂ ಅದನ್ನು ಪ್ರೇಮ ಎನ್ನಲು ಬರುವುದಿಲ್ಲ. ಶಶಿ ತನ್ನ ಪತ್ನಿಯನ್ನು ತೊರೆದು ಪರನಾರಿ ಹಿಂದೆ ಹೋಗುವ ಪೈಕಿಯಲ್ಲ ಎಂದು ಸುನಂದಾ ಹೇಳಿದ್ದಾರೆ. ತಮಾಷೆ ವಿಷಯವೆಂದರೆ ಸುನಂದಾ ಅವರು 57 ವರ್ಷ ವಯಸ್ಸಿನ ಶಶಿ ತರೂರ್ ಅವರ ಮೂರನೇ ಪತ್ನಿಯಾಗಿದ್ದಾರೆ.
ವೈಯಕ್ತಿಕ ವಿಷಯಗಳು ಟ್ವಿಟರ್ ನಲ್ಲಿ ಚರ್ಚೆಗೊಳಗಾಗುತ್ತಿದ್ದಂತೆ ಶಶಿ ಅವರು ನನ್ನ ಟ್ವಿಟ್ಟರ್ ಐಡಿ ಹ್ಯಾಕ್ ಆಗಿದೆ ಎಂದಿದ್ದಾರೆ. ಈ ನಡುವೆ ಎಲ್ಲಾ ಗದ್ದಲಗಳ ಬಗ್ಗೆ ಮೆಹರ್ ನೀಡಿರುವ ಪ್ರತಿಕ್ರಿಯೆ ಏನು ಮುಂದೆ ಓದಿ...

ಯಾರೀಕೆ ಮೆಹರ್ ತರಾರ್?
ಲಾಹೋರ್ ಮೂಲದ ಮೆಹರ್ ತರಾರ್ ಅವರು ಡೈಲಿ ಟೈಮ್ಸ್ ನಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ಹಲವಾರು ಪ್ರಮುಖ ದೈನಿಕ ಪತ್ರಿಕೆಗಳಿಗೂ ಅಂಕಣಗಳನ್ನು ಬರೆದಿದ್ದಾರೆ. ಇದೆಲ್ಲಕ್ಕಿಂತ ನಾನೊಬ್ಬ ಗೃಹಿಣಿ, ಮಗುವಿನ ತಾಯಿ ಎಂದು ಹೇಳಿಕೊಳ್ಳುವ ಮೆಹರ್ ಈಗ ಸುನಂದಾ ಎಂದರೆ ಸಿಡಿದೇಳುತ್ತಾರೆ.
ಐಎಸ್ ಐ ಏಜೆಂಟ್ ಎಂದಿರುವ ಸುನಂದಾ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. Meeting Shashi Tharoor ಹೆಸರಿನಲ್ಲಿ ಲೇಖನ ಬರೆದಾಗ ಅವರೊಟ್ಟಿಗೆ ನನ್ನ ಸಖ್ಯ ಬೆಳೆಯಿತು. ಅವರ ರಾಜಕೀಯ ನಿಲುವು ನನಗಿಷ್ಟ. ಆದರೆ, ಸುನಂದಾ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದಾರೆ.
|
ಟ್ವಿಟರ್ ನಲ್ಲಿ ಶಶಿ ಸುನಂದಾ ಮೆಹರ್ ಪ್ರೇಮ ಪ್ರಸಂಗ
ನನ್ನ ಹೆಸರು ಮೆಹರ್ ನಾನು ಐಎಸ್ ಐ ಏಜೆಂಟ್, ಸಿಐಎ ಏಜೆಂಟ್ ಅಲ್ಲ
|
ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿರುವುದು ಯಾರು?
ನಾನೇನು ಡ್ಯಾಮೇಜ್ ಕಂಟ್ರೋಲ್ ಮಾಡುತ್ತಿಲ್ಲ ಎಂದ ಮೆಹರ್
|
ನಾನು ಶುರುಮಾಡಿದ ಗದ್ದಲವಲ್ಲ
ನಾನು ಶುರುಮಾಡಿದ ಗದ್ದಲವಲ್ಲ ನನ್ನನ್ನು ಬಿಟ್ಟು ಬಿಡಿ ಬೇಜಾನ್ ಕೆಲ್ಸ ಇದೆ: ಮೆಹರ್
|
ಸಾರ್ವಜನಿಕರಿಗೆ ಥ್ಯಾಂಕ್ಸ್ ಹೇಳಿದ ಮೆಹರ್
ಟ್ವೀಟ್ಸ್ ಮೂಲಕ ತನ್ನನ್ನು ಬೆಂಬಲಿಸಿದ ಸಾರ್ವಜನಿಕರಿಗೆ ಥ್ಯಾಂಕ್ಸ್ ಹೇಳಿದ ಮೆಹರ್
|
ಟ್ವೀಟ್ ಐಡಿ ಹ್ಯಾಕ್ ಆಗಿದೆ ಎಂದ ಶಶಿ
ಟ್ವೀಟ್ ಐಡಿ ಹ್ಯಾಕ್ ಆಗಿದೆ. ಡೀಆಕ್ಟಿವೇಟ್ ಮಾಡಿದ್ದೇನೆ ಎಂದ ಶಶಿ ತರೂರ್
|
ಶಶಿ- ಮೆಹರ್ ಬಗ್ಗೆ ಸಾರ್ವಜನಿಕರ ಅಭಿಪ್ರಾಯ
ಸುನಂದಾ- ಮೆಹರ್ ಬಿಗ್ ಬಾಸ್ ಸ್ಪರ್ಧಿಗಳಾಗಬಹುದು : ಸಾರ್ವಜನಿಕರ ಅಭಿಪ್ರಾಯ












Click it and Unblock the Notifications