ಶಾಹೀದ್ ಶಾದಿ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗೋ ಟ್ರೆಂಡಿಂಗ್

ನವದೆಹಲಿ, ಜುಲೈ 07: ಬಾಲಿವುಡ್ ನಟ ಶಾಹೀದ್ ಕಪೂರ್ ಅವರು ಮಂಗಳವಾರ ಸಾಂಪ್ರದಾಯಿಕ ರೀತಿಯಲ್ಲಿ ಮೀರಾ ರಜಪೂತ್ ಅವರನ್ನು ವಿವಾಹವಾಗಿದ್ದಾರೆ. ಸಂಗೀತ್ ಸಮಾರಂಭ, ಬಾಲಿವುಡ್ ಶೈಲಿ ನೃತ್ಯ, ಕೊನೆಗೆ ಸೆಲ್ಫಿ ತೆಗೆದುಕೊಂಡ ಮದುಮಕ್ಕಳ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.

ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ತಾಳಿ ಕಟ್ಟುವ ಶುಭ ವೇಳೆ ಶಾಹೀದ್ ಬಾಳಲ್ಲಿ ಮೀರಾ ಪ್ರವೇಶ. ಈ ಶುಭ ಸಂದರ್ಭದಲ್ಲಿ 40ಕ್ಕೂ ಅಧಿಕ ಆಪ್ತೇಷ್ಟರೇ ಸಾಕ್ಷಿ. ನಂತರ ಆರತಕ್ಷತೆ ಮಾತ್ರ ಸಕತ್ ವೈಭವೋಪೇತವಾಗಿ ಆಚರಣೆ ಗುರ್ ಗಾಂವ್ ನ ಪಂಚತಾರಾ ಹೋಟೆಲ್ ನಲ್ಲಿ ನಡೆಯಲಿದೆ. [ಮದ್ವೆಗೂ ಮುನ್ನ ಶಾಹಿದ್ ಕ್ಯಾಮರಾ ಕಣ್ಣಿಗೆ ಕಾಣಿಸಿದ್ದು ಹೀಗೆ]

ಹನಿಮೂನ್ ಸದ್ಯಕ್ಕಿಲ್ಲ: ಝಲಕ್ ದಿಕ್ಲಾ ಜಾ ರೀಲೋಡೆಡ್ ರಿಯಾಲಿಟಿ ಶೋನ ಜಡ್ಜ್ ಆಗಿರುವ ಶಾಹೀದ್ ಕಪೂರ್ ಅವರು ಸದ್ಯಕ್ಕೆ ಹನಿಮೂನ್ ಪ್ಲಾನ್ ಮಾಡಿಲ್ಲವಂತೆ.

ವಿಕಾಸ್ ಬೆಹ್ಲ್ ಅವರ ಚಿತ್ರ ಶಾಂಧಾರ್ ದಲ್ಲಿ ಆಲಿಯಾ ಭಟ್ ಜೊತೆ ಹಾಗೂ ಅಭಿಷೇಕ್ ಛುಬೇ ಅವರ ನಿರ್ದೇಶನದಲ್ಲಿ ಉಡ್ತಾ ಪಂಜಾಬ್ ಚಿತ್ರದಲ್ಲಿ ಶಾಹೀದ್ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಂಪ್ರದಾಯಿಕ ರೀತಿಯಲ್ಲಿ ವಿವಾಹ

ಸಾಂಪ್ರದಾಯಿಕ ರೀತಿಯಲ್ಲಿ ವಿವಾಹ

ಪಂಕಜ್ ಕಪೂರ್ ಹಾಗೂ ನೀಲಿಮಾ ಅಜೀಂ ಅವರ ಪುತ್ರ ಶಾಹೀದ್ (34 ವರ್ಷ) ಪಂಜಾಬಿ ಶೈಲಿಯಲ್ಲಿ ತನಗಿಂತ 13 ವರ್ಷ ಕಿರಿಯಳಾದ ಮೀರಾಳನ್ನು ವರಿಸಿದ್ದಾನೆ. ಮದುವೆಯ ಪ್ರತಿ ವಿಧಿ ವಿಧಾನಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

#ShahidKiShaadi ಟ್ರೆಂಡಿಂಗ್

ಸಂಗೀತ್ ಸಮಾರಂಭ, ಬಾಲಿವುಡ್ ಶೈಲಿ ನೃತ್ಯ, ಕೊನೆಗೆ ಸೆಲ್ಫಿ ತೆಗೆದುಕೊಂಡ ಮಧುಮಕ್ಕಳ ಫೋಟೊ ಸಾಮಾಜಿಕ ಜಾಲ ತಾಣಗಳಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.

ಶಾಹೀದ್ ಮೀರಾ ಮದುವೆ ಚಿತ್ರಗಳು

ಟ್ವಿಟ್ಟರ್ ನಲ್ಲಿ ಬಂದಿರುವ ಶಾಹೀದ್ ಮೀರಾ ಮದುವೆ ಚಿತ್ರಗಳು

ಅತಿಥಿಗಳ ಜೊತೆ ನೂತನ ದಂಪತಿ

ಅತಿಥಿಗಳ ಜೊತೆ ನೂತನ ದಂಪತಿ ಫೋಟೋ

ಮದುವೆಯ ಸಂಪ್ರದಾಯಕ್ಕೆ ಕೆಲವರು ಸಾಕ್ಷಿ

ಮದುವೆಯ ಸಂಪ್ರದಾಯ, ಆಚರಣೆ ಕೆಲ ಅತಿಥಿಗಳು ಮಾತ್ರ ಸಾಕ್ಷಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+