ಮೂರು ವರ್ಷದ ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಬೆಂಗಳೂರು, ಆಗಸ್ಟ್, 04 : ಇಂದಿರಾನಗರದ ಖಾಸಗಿ ಶಾಲೆಯಲ್ಲಿ ಪ್ರೀ ನರ್ಸರಿ ಓದುತ್ತಿದ್ದ 3 ವರ್ಷದ ಬಾಲಕಿ ಮೇಲೆ ಸೋಮವಾರ ಲೈಂಗಿಕ ದೌರ್ಜನ್ಯ ನಡೆದಿದ್ದು, ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಶಾಲೆಯಿಂದ ಸಂಜೆ ಮನೆಗೆ ತೆರಳಿದ ಆಕೆ ಕಿಬ್ಬೊಟ್ಟೆ ನೋವಿನಿಂದ ಅಳುತ್ತಿದ್ದಳು. ನೋವಿನಿಂದ ನರಳುತ್ತಿದ್ದ ಆಕೆಯನ್ನು ಕಂಡು ಆತಂಕಕ್ಕೆ ಒಳಗಾದ ಪೋಷಕರು ಸಂಜೆ 5 ಗಂಟೆಗೆ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.[ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ]

ಸುಮಾರು ರಾತ್ರಿ 10.45 ರ ವೇಳೆಗೆ ಬಾಲಕಿಯನ್ನು ತಪಾಸಣೆಗೆ ಒಳಪಡಿಸಿದಾಗ ಸಣ್ಣಪುಟ್ಟ ಗಾಯಗಳಾಗಿರುವುದರ ಜೊತೆಯಲ್ಲಿ ಲೈಂಗಿಕ ದೌರ್ಜನ್ಯ ಒಳಗಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿದ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಮಕ್ಕಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲೆಯಲ್ಲಿ ಯಾವುದೇ ಸಿಸಿಟಿವಿ ಅಳವಡಿಕೆ ಇಲ್ಲದಿರುವುದು ಗೊತ್ತಾದ ಪೊಲೀಸರು ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗವನ್ನು ತರಾಟೆಗೆ ತೆಗೆದುಕೊಂಡಿದ್ದು, ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ನಂತರ ಅಸ್ವಸ್ಥಳಾಗಿದ್ದ ಬಾಲಕಿಯನ್ನು ವಿಚಾರಿಸಿದಾಗ ಆಕೆ 'ಸ್ಕೂಲ್ ಅಂಕಲ್' ಎಂದು ಹೇಳಿದ್ದಾಳೆ. ಆದರೆ ಘಟನೆ ಎಲ್ಲಿ ನಡೆಯಿತು, ಯಾರಿಂದ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೃತ್ಯ ನಡೆದು ಒಂದು ದಿನವಾದರೂ ಇನ್ನು ಹೆಚ್ಚಿನ ಮಾಹಿತಿ ಕಲೆಹಾಕದ ಪೊಲೀಸರ ವಿರುದ್ದ ಕುಟುಂಬ ಸದಸ್ಯರು ಮಾತಿಗಿಳಿದಿದ್ದು, ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ.
3yr old girl allegedly sexually assaulted in Indiranagar(Bengaluru): Clash btw police & family members of victim pic.twitter.com/VrQpjFYsMF
— ANI (@ANI_news) August 4, 2015 











Click it and Unblock the Notifications