ರಾಕ್‌ಲೈನ್‌ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ: 7 ನೇಪಾಳಿಗಳ ಬಂಧನ

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಸಹೋದರನ ಮನೆಯಲ್ಲಿ ಕಳ್ಳತನವಾದ ಒಂದು ತಿಂಗಳ ನಂತರ ಪೊಲೀಸರು ಏಳು ನೇಪಾಳಿಗಳ ತಂಡವನ್ನು ಬಂಧಿಸಿ 3 ಕೆಜಿ ಚಿನ್ನ ಸೇರಿದಂತೆ 1.53 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಉಪೇಂದ್ರ, ನಾರಾ ಬಹದ್ದೂರ್, ಖಕೇಂದ್ರ ಶಾಹಿ, ಕೋಮಲ್, ಸ್ವಸ್ತಿಕಾ, ಪಾರ್ವತಿ ಮತ್ತು ಶಾದಲಾ ಎಂದು ಗುರುತಿಸಲಾಗಿದೆ. ಆರೋಪಿಗಳು ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ನಿವಾಸದಿಂದ ಸುಮಾರು ಐದು ಕೆಜಿ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದರು.

 Seven Nepalis Apprehended for Theft at Residence of Rockline Venkateshs Brother

ಅಕ್ಟೋಬರ್ 21 ಮತ್ತು 29 ರ ನಡುವೆ ಟಿ.ಎನ್. ಬ್ರಮರೇಶ್ ಅವರ ನಿವಾಸದಲ್ಲಿ ಅವರು ಮತ್ತು ಅವರ ಕುಟುಂಬ ಗ್ರೀಸ್‌ಗೆ ಪ್ರವಾಸಕ್ಕೆ ತೆರಳಿದ್ದಾಗ ಕಳ್ಳತನ ನಡೆದಿತ್ತು. ಮನೆಯವರು ರಜೆ ಮುಗಿಸಿ ಮರಳಿದ ಬಳಿಕ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಚಿನ್ನಾಭರಣ ಸೇರಿ 6.1 ಲಕ್ಷ ರೂ.ನಗದನ್ನು ಆರೋಪಿಗಳು ಕಳವು ಮಾಡಿದ್ದರು. ಆರೋಪಿಗಳು ದರೋಡೆಗಾಗಿ ಅಲ್ಮೇರಾಗಳನ್ನು ಒಡೆದಿದ್ದಾರೆ.

10ಕ್ಕೂ ಹೆಚ್ಚು ಪ್ರಕರಣ

ಆರೋಪಿಗಳ ಪೈಕಿ ಒಬ್ಬಾತ ಬ್ರಮರೇಶ್ ನಿವಾಸದ ಪಕ್ಕದಲ್ಲಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಒಂದು ತಿಂಗಳಿನಿಂದ ಬ್ರಮರೇಶ್ ಅವರ ಮನೆಯವರ ಚಲನವಲನಗಳನ್ನು ಗಮನಿಸಿದ ತಂಡವು ಕಳ್ಳತನ ಮಾಡುವ ಮೊದಲು ಕುಟುಂಬ ರಜೆಗೆ ಹೋಗಲು ಕಾಯುತ್ತಿತ್ತು. ಪ್ರಮುಖ ಆರೋಪಿ ಉಪೇಂದ್ರ ಅಪರಾಧಿಯಾಗಿದ್ದು, ಆತನ ವಿರುದ್ಧ ನಗರ ಠಾಣೆಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಂಧಿತರ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಸಾರ್ವಜನಿಕರು ದೀರ್ಘಾವಧಿಯವರೆಗೆ ಹೊರಗೆ ಹೋಗುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+