ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಆಸ್ಪತ್ರೆಗೆ ದಾಖಲು
ಹುಬ್ಬಳ್ಳಿ, ಫೆಬ್ರವರಿ 14: ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಅವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೂರು ವರ್ಷಗಳನ್ನು ಪೂರೈಸಿರುವ ಅವರಿಗೆ ಇಂದು ಮುಂಜಾನೆ ಕಡಿಮೆ ರಕ್ತದೊತ್ತಡದಿಂದ ನಿತ್ರಾಣಗೊಂಡಿದ್ದರು. ಕೂಡಲೇ ಅವರನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಧ್ವಜದ ಬೇಡಿಕೆ ಪ್ರತ್ಯೇಕತೆ ಕೂಗಲ್ಲ: ಪಾಟೀಲ್ ಪುಟ್ಟಪ್ಪ
ಸದ್ಯ ಪಾಟೀಲ್ ಪುಟ್ಟಪ್ಪ ಅವರು ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಕೀಮ್ಸ್ ನಿರ್ದೇಶಕ ಡಾ ರಾಮಲಿಂಗಪ್ಪ ಅಂಟರತಾನಿ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಕರ್ನಾಟಕ ಏಕೀಕರಣ ರೂವಾರಿಯಾದ ಪಾಟೀಲ್ ಪುಟ್ಟಪ್ಪ ಅವರು ಇತ್ತೀಚಿಗಷ್ಟೇ ನೂರು ವರ್ಷಗಳನ್ನು ಪೂರೈಸಿ 101 ನೇ ವರ್ಷಕ್ಕೆ ಕಾಲಿಟ್ಟಾದ್ದಾರೆ. ಇಂದಿಗೂ ಅವರು ಕನ್ನಡ ಹಾಗೂ ಕರ್ನಾಟಕದ ಪರ ಗಟ್ಟಿ ಧ್ವನಿ ಎತ್ತಿ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ.