ಭದ್ರತಾ ಸಿಬ್ಬಂದಿ ಮೇಲೆ ಅಮಾನವೀಯ ಹಲ್ಲೆ ಮಾಡಿದ ಮಾಲೀಕ

ಬೆಂಗಳೂರು, ಅಕ್ಟೋಬರ್ 15: ನಗರದಲ್ಲಿ ಖಾಸಗಿ ಭದ್ರತಾ ಸಂಸ್ಥೆ ಮಾಲೀಕನೊಬ್ಬ ತನ್ನ ಸಿಬ್ಬಂದಿಯೊಂದಿಗೆ ಅಮಾನವೀಯ ವರ್ತನೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೆಕ್ಯೂರಿಟಿ ಗಾರ್ಡ್‌ ಗಳನ್ನು ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಸಂಸ್ಥೆಯೊಂದನ್ನು ನಡೆಸುತ್ತಿರುವ ಸಲೀಮ್ ಖಾನ್ ತನ್ನದೇ ಸಂಸ್ಥೆಗೆ ಕೆಲಸಕ್ಕೆ ಸೇರಿದ್ದ ನೌಕರರ ಮೇಲೆ ಮೃಗೀಯ ರೀತಿಯ ವರ್ತನೆ ಮಾಡಿದ್ದಾನೆ.

ಸೆಕ್ಯೂರಿಟಿ ಫೋರ್ಸ್ ಹಾಗೂ ಹೌಸ್​​ ಕೀಪಿಂಗ್​​ ಸ್ವೀಸಸ್​​​ನ ಮ್ಯಾನೇಜರ್ ಸಲೀಂ ಖಾನ್ ನೌಕರರ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Recommended Video

      Narendra Modi shared a video of collecting Trash at a beach in Mamallapuram | Oneindia Kannada
      Security Guard Company Owner Beats His Employees Brutally

      ವಿಡಿಯೋದಲ್ಲಿ ಸೆರೆಯಾಗಿರುವಂತೆ ಸಲೀಂ ಖಾನ್ ಬೂಟು ಗಾಲಿನಲ್ಲಿ ನೌಕರರನ್ನು ಮುಖ, ಎದೆಗೆ ಒದೆಯುತ್ತಿದ್ದಾನೆ. ಅಷ್ಟೆ ಅಲ್ಲದೆ ಅವರ ಮುಖದ ಮೇಲೆ, ಹೊಟ್ಟೆ ಮೇಲೆ ನಿಂತು ಜಿಗಿಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ.

      ಬೌನ್ಸರ್‌ಗಳ ರೀತಿಯಲ್ಲಿ ಬಟ್ಟೆ ಧರಿಸಿದ್ದ ಕೆಲವರು ಬಂದು ಸಲೀಂ ಖಾನ್‌ನನ್ನು ತಡೆಯುತ್ತಾರೆ. ನಂತರ ಸಲೀಂ ಖಾನ್ ಆ ಸಿಬ್ಬಂದಿಯನ್ನು ಅರೆನಗ್ನರನ್ನಾಗಿಯೇ ಹೊರಗೆ ಕರೆದುಕೊಂಡು ಹೋಗುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.

      ಅಕ್ಟೋಬರ್ 14 ರಂದು ಈ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್‌ಎಸ್‌ಆರ್‌ ಬಡಾವಣೆ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+