ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್‌ ಪಾಸ್‌ಗೆ ದೃಢೀಕರಣ ಮುದ್ರೆ ಬೇಡ

ಬೆಂಗಳೂರು, ಜೂನ್ 16: ಇನ್ನುಮುಂದೆ ವಿಮಾನನಿಲ್ದಾಣಗಳಲ್ಲಿ ಬೋರ್ಡಿಂಗ್‌ ಪಾಸ್ ಮೇಲೆ ಭದ್ರತಾ ತಪಾಸಣೆ ದೃಢೀಕರಣದ ಮುದ್ರೆಯ ಅಗತ್ಯ ಇರುವುದಿಲ್ಲ, ಬೆಂಗಳೂರು, ಮುಂಬೈ, ನವದೆಹಲಿ ವಿಮಾನ ನಿಲ್ದಾಣಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.

ತಂತ್ರಜ್ಞಾನದ ಮೂಲಕವೇ ಪ್ರಯಾಣಿಕರ ಗುರುತು, ಭದ್ರತೆಯ ದೃಢೀಕರಣವಾಗುವುದರಿಂದ ಬೋರ್ಡಿಂಗ್ ಪಾಸ್‌ಗೆ ಮುದ್ರೆಯ ಅಗತ್ಯ ಇರುವುದಿಲ್ಲ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಈ ಸಂಬಂಧ ದೆಹಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳನ್ನು ಸಂಪರ್ಕಿಸಿದೆ. ಪ್ರಾಯೋಗಿಕವಾಗಿ ಈ ಯೋಜನೆಗಳನ್ನು ಅಳವಡಿಸಲು ವಿಮಾನ ನಿಲ್ದಾಣಗಳು ಒಪ್ಪಿವೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲೂ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Security goes digital: No stamping on boarding pass in airports soon

ಸಿಐಎಸ್‌ಎಫ್‌ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಹಲವು ವಿಮಾನ ನಿಲ್ದಾಣಗಳಲ್ಲಿ ಹ್ಯಾಂಡ್‌ಬ್ಯಾಗ್‌ಗೆ ಮುದ್ರೆ ಹಾಗೂ ಟ್ಯಾಗ್‌ಗಳ ಅಳವಡಿಕೆಯನ್ನು ಸ್ಥಗಿತಗೊಳಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಆಧುನಿಕ ಸಿಸಿಟಿವಿ ಅಳವಡಿಸಲಾಗುತ್ತಿದೆ.

ಈ ಸಿಸಿಟಿವಿ ಕ್ಯಾಮರಾಗಳು ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕನ ಸ್ಪಷ್ಟವಾದ ಚಿತ್ರವನ್ನು ಸೆರೆಹಿಡಿಯುತ್ತವೆ ಎಂದು ನಿಲ್ದಾಣದ ಅಧಇಕಾರಿಗಳು ತಿಳಿಸಿದ್ದಾರೆ. ಎಚ್‌ಡಿ ಕ್ಯಾಮರಾಗಳು ಇದ್ದರೆ, ಬೋರ್ಡಿಂಗ್ ಪಾಸ್ ಮೇಲೆಯೇ ಮುದ್ರೆಯ ಅಗತ್ಯ ಇರುವುದಿಲ್ಲ, ಹೀಗಿದ್ದರೂ ನಿಯಮಿತ ಭದ್ರತಾ ತಪಾಸಣೆ ಇರುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+