ಪರಪ್ಪನ ಅಗ್ರಹಾರದಲ್ಲಿ ಶಶಿಕಲಾಳ ಪಕ್ಕ ಸೈನೈಡ್ ಮಲ್ಲಿಕಾ

ಸೈನೈಡ್ ಮಲ್ಲಿಕಾ ಒಂದೇ ಒಂದು ಚಿಟ್ ಫಂಡ್ ಕಂಪನಿ ಸ್ಥಾಪಿಸಿದ್ದರೆ, ಶಶಿಕಲಾ (ಬೇನಾಮಿ) ಹೆಸರಿನಲ್ಲಿ 107 ಕಂಪನಿಗಳು ಚಲಾವಣೆಯಲ್ಲಿವೆ. ಈಗ ಹೇಳಿ ಶಶಿಕಲಾಳನ್ನು ಸಣ್ಣಪುಟ್ಟ ಕಳ್ಳಿ ಅಂತ ಹೇಳಲು ಸಾಧ್ಯವೆ?

ಬೆಂಗಳೂರು, ಫೆಬ್ರವರಿ 18 : ಪೊಲೀಸ್ ವ್ಯಾನ್ ಹತ್ತಲು ನಾನೇನು ಕಳ್ಳಿನಾ? ಅಂತ ಅಬ್ಬರಿಸಿ ಬೊಬ್ಬಿರಿದಿದ್ದ, ಅಕ್ರಮ ಆಸ್ತಿ ಗಳಿಕೆಯ ಅಪರಾಧಿ ಶಶಿಕಲಾ ನಟರಾಜನ್ ಅವರ ಉಭಯ ಕುಶಲೋಪರಿ ವಿಚಾರಿಸಲೆಂದು ಹಳೆ ಗೆಳತಿಯೊಬ್ಬಳು ಪರಪ್ಪನ ಅಗ್ರಹಾರದಲ್ಲಿ ಸಿಕ್ಕಿದ್ದಾಳೆ.

ಆಕೆ ಮತ್ತಾರೂ ಅಲ್ಲ... ಮೋಸ ಮಾಡುವುದು, ಹತ್ಯೆಗೈಯುವುದನ್ನು ಕರತಲಾಮಲಕ ಮಾಡಿಕೊಂಡಿದ್ದ ಡೆಡ್ಲಿ ಕ್ರಿಮಿನಲ್ ಕೆಡಿ ಕೆಂಪಮ್ಮ ಅಲಿಯಾಸ್ ಸೈನೈಡ್ ಮಲ್ಲಿಕಾ! ವಯಸ್ಸು 53 ವರ್ಷ. ಭಾರತದ ಮೊಟ್ಟಮೊದಲ ಸೀರಿಯಲ್ ಲೇಡಿ ಕಿಲ್ಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಸೈನೈಡ್ ಮಲ್ಲಿಕಾ! [ಶಶಿಕಲಾ ಮೂರುಬಾರಿ ಕುಟ್ಟಿದ್ದರ ಹಿಂದೆ ಸ್ವಾರಸ್ಯಕರ ಕಥೆ]

Sasikala's neighbour in Parappana Agrahara is Cyanide Mallika

ಈ ಸೈನೈಡ್ ಮಲ್ಲಿಕಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಕಟ್ಟಾ ಅಭಿಮಾನಿ. ಹಿಂದೆ ಜಯಲಲಿತಾ ಅವರು 2014ರಲ್ಲಿ ಪರಪ್ಪನ ಅಗ್ರಹಾರದಲ್ಲಿ ಬಂದಿಯಾಗಿದ್ದಾಗ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಳಂತೆ ಮಲ್ಲಿಕಾ.

ಈಗ ಅನಾಯಾಸವಾಗಿ, ಜಯಲಲಿತಾ ಅವರ ಅಪರಾವತಾರದಂತಿರುವ, 66.65 ಕೋಟಿ ರುಪಾಯಿಯನ್ನು ನುಂಗಿ ನೀರು ಕುಡಿದಿರುವ ಪ್ರಕರಣದ ಎರಡನೇ ಅಪರಾಧಿ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾಗುವ ಅವಕಾಶ ಮಲ್ಲಿಕಾಗೆ ಕೂಡಿಬಂದಿದೆ. ಅದೃಷ್ಟ ಅಂದ್ರೆ ಇದೇ ಅಲ್ವೆ?

ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಹೋಮ ಹವನದ ಆಸೆ ಹತ್ತಿಸಿ, ಸೈನೈಡ್ ತಿನ್ನಿಸಿ ಅವರ ಮೈಮೇಲಿದ್ದ ಚಿನ್ನ, ವಜ್ರದ ಒಡವೆಗಳನ್ನು, ಹಣವನ್ನು ಲಪಟಾಯಿಸುತ್ತಿದ್ದ ಸೈನೈಡ್ ಮಲ್ಲಿಕಾ, 1999 ಮತ್ತು 2007ರ ನಡುವಿನಲ್ಲಿ ಕೊಂದದ್ದು 7 ಮಹಿಳೆಯರನ್ನು. [ಸರಣಿ ಕೊಲೆ ಪಾತಕಿ ಮಲ್ಲಿಕಾ ಪೊಲೀಸರ ವಶಕ್ಕೆ]

ಕಗ್ಗಲಿಪುರದಲ್ಲಿ ಮನೆಗೆಲಸದವಳಾಗಿ ಚಾಕರಿ ಮಾಡುತ್ತಿದ್ದ ಮಲ್ಲಿಕಾಗೆ ಏಕಾಏಕಿ ಶ್ರೀಮಂತಳಾಗುವ ಇಚ್ಛೆ ಉಂಟಾಗಿದೆ. ಸಣ್ಣಪುಟ್ಟ ಕಳ್ಳತನ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಮಲ್ಲಿಕಾಗೆ ಸೈನೈಡ್ ತಿನ್ನಿಸಿ ಮಹಿಳೆಯರನ್ನು ಕೊಂದು ಒಡವೆ ದೋಚುವ ಖತರ್ನಾಕ್ ಐಡಿಯಾ ಹೊಳೆದಿದೆ.

ಮಹಿಳೆಯರಿಂದ ಲಪಟಾಯಿಸಿದ ಹಣ, ಒಡವೆಯನ್ನು ಮಾರಿದ ದುಡ್ಡಿನಿಂದ ಚಿಟ್ ಫಂಡ್ ಕಂಪನಿಯನ್ನೇ ಶುರು ಮಾಡಿದ್ದಳೆಂದರೆ ಈಗ ಎಂಥ ಹೆಂಗಸಿರಬಹುದೆಂದು ಊಹಿಸಿ. ಕಡೆಗೂ 2007ರ ಡಿಸೆಂಬರ್ 31ರಂದು ಪೊಲೀಸರು ಆಕೆಯನ್ನು ಬಂಧಿಸಿದರು. ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಮಲ್ಲಿಕಾ ಈಗ ಶಶಿಕಲಾಳ ನೆರೆಹೊರೆಯವಳು. [ಅಮ್ಮನಂತೆ ಪರಪ್ಪನ ಅಗ್ರಹಾರ ಜೈಲಿನಿಂದಲೇ ಚಿನ್ನಮ್ಮನ ದರ್ಬಾರ್!]

ಇವರಿಬ್ಬರ ಉದ್ದೇಶವೂ ಒಂದೇ... ಹಣ ಲಪಟಾಯಿಸಿ ಶ್ರೀಮಂತರಾಗುವುದು. ಸೈನೈಡ್ ಮಲ್ಲಿಕಾ ಒಂದೇ ಒಂದು ಚಿಟ್ ಫಂಡ್ ಕಂಪನಿ ಸ್ಥಾಪಿಸಿದ್ದರೆ, ಶಶಿಕಲಾ (ಬೇನಾಮಿ) ಹೆಸರಿನಲ್ಲಿ 107 ಕಂಪನಿಗಳು ಚಲಾವಣೆಯಲ್ಲಿವೆ. ಈಗ ಹೇಳಿ ಶಶಿಕಲಾಳನ್ನು ಸಣ್ಣಪುಟ್ಟ ಕಳ್ಳಿ ಅಂತ ಹೇಳಲು ಸಾಧ್ಯವೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+