ಪೆರೋಲ್ ಮುಗಿಸಿ ಪರಪ್ಪನ ಅಗ್ರಹಾರಕ್ಕೆ ವಾಪಸಾದ ಶಶಿಕಲಾ
ಬೆಂಗಳೂರು, ಅಕ್ಟೋಬರ್ 12: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತಿಯನ್ನು ನೋಡಲು ಐದು ದಿನಗಳ ಪೆರೋಲ್ ಪಡೆದಿದ್ದ ಶಶಿಕಲಾ ನಟರಾಜನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಾಸಾಗಿದ್ದಾರೆ.
ಅಕ್ಟೋಬರ್ 6ರಂದು ಶಶಿಕಲಾಗೆ ಐದು ದಿನಗಳ ಷರತ್ತುಬದ್ಧ ಪೆರೋಲ್ ನೀಡಲಾಗಿತ್ತು. ನಂತರ ಶಶಿಕಲಾ ಚೆನ್ನೈಗೆ ತೆರಳಿ ಆಸ್ಪತ್ರೆಯಲ್ಲಿರುವ ಪತಿಯ ಜತೆಗಿದ್ದರು.

ಶಶಿಕಲಾ ಪೆರೋಲ್ ಅವಧಿ ಬುಧವಾರಕ್ಕೆ ಮುಗಿದ ಹಿನ್ನಲೆಯಲ್ಲಿ ಇಂದು ಪರಪ್ಪನ ಅಗ್ರಹಾರಕ್ಕೆ ವಾಪಾಸಾಗಿದ್ದಾರೆ.
#Visuals from Bengaluru's Central prison where Sasikala returned, after her 5-days parole ended yesterday. pic.twitter.com/NlteqUQvll
— ANI (@ANI) October 12, 2017
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ನಟರಾಜನ್, 4 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.












Click it and Unblock the Notifications