Sarjapur-Hebbal Red Line: ಮೆಟ್ರೋ ಯೋಜನೆ ಅಂದಾಜು ವೆಚ್ಚ ₹2,920 ಕೋಟಿ ಇಳಿಸಿದ್ದೇಕೆ?

ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಶೀಘ್ರವೇ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಆರಂಭವಾಗಬೇಕಿದೆ. ಇದರೊಂದಿಗೆ ಬಹುನಿರೀಕ್ಷೆಗೆ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕೆಂಪು ಮಾರ್ಗ ಯೋಜನೆ ಪಿಡಿಆರ್ ಸಿದ್ಧವಾಗಿದೆ. ಆದರೆ ಅಂದಾಜು ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಇದೀಗ ಆ ವೆಚ್ಚದಲ್ಲಿ ಸುಮಾರು 2,920 ಕೋಟಿ ರೂ.ಗಳಷ್ಟು ಕಡಿಮೆ ಮಾಡಲಾಗಿದೆ.

ಅಂತಾರಾಷ್ಟ್ರೀಯ ಸಲಹಾ ಸಂಸ್ಥೆಯೊಂದು ನೀಡಿದ ಮೌಲ್ಯಮಾಪನ ವರದಿ ಬಳಿಕ ನಮ್ಮ ಮೆಟ್ರೋ ಕೆಂಪು ಮಾರ್ಗದ ಅಂದಾಜು ವೆಚ್ಚವನ್ನು ತಗ್ಗಿಸಲಾಗಿದೆ. ಈ ಮಾರ್ಗವು ಐಟಿ ಕಾರಿಡಾರ್ ಹಾಗೂ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಒಟ್ಟು 37 ಕಿಲೋಮೀಟರ್ ಮಾರ್ಗ ಇದಾಗಿದೆ. ಇದು ಸಹ ನಗರದ ಪ್ರಮುಖ ಯೋಜನೆಗಳ ಪೈಕಿ ನಿರ್ಣಾಯಕ ಪಾತ್ರವಹಿಸುವ ಯೋಜನೆ ಆಗಿದೆ.

Sarjapur-Hebbal Namma Metro Red Line Total Cost Redused nearly 2900 Cr See What Change

ಸರ್ಜಾಪುರ-ಹೆಬ್ಬಾಳವರೆಗಿನ ಮಾರ್ಗಕ್ಕೆ ಈ ಹಿಂದೆ 28,405 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಅಂದರೆ ಪ್ರತಿ ಕಿಲೋ ಮೀಟರ್‌ಗೆ 750 ಕೋಟಿ ರೂಪಾಯಿಗೂ ಅಧಿಕವೆಂದು ನಿಗದಿಪಡಿಸಲಾಗಿತ್ತು, ಆದರೆ ಈಗ ಅದನ್ನು ಒಟ್ಟಾರೆ 25,485 ಕೋಟಿ ರೂ.ಗಳಿಗೆ ತಗ್ಗಿಸಲಾಗಿದೆ. ಇತ್ತೀಚೆಗೆ ಕೆಂದ್ರ ಸರ್ಕಾರವು ಅನುಮೋದನೆ ನೀಡುವ ಮೊದಲು ಡಿಪಿಆರ್ ಪರಿಶೀಲಿಸಿ ವೆಚ್ಚ ಪುನರ್ ಪರಿಷ್ಕರಿಸುವಂತೆ BMRCL ತಿಳಿಸಿತ್ತು.

ಅಂದಾಜು ವೆಚ್ಚ ಇಳಿಕೆ ಆಗಿದ್ದೇಗೆ?

ಫ್ರೆಂಚ್ ಸಂಸ್ಥೆ SYSTRA ಈ ಮೆಟ್ರೋ ಕೆಂಪು ಮಾರ್ಗದ ಅಂದಾಜುವೆಚ್ಚ ಪರಿಶೀಲನೆಗೆ ಮುಂದಾಳತ್ವ ವಹಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಯೋಜನೆಯ ಹಣಕಾಸು ಅಂದಾಜು ಪರಿಷ್ಕರಣೆಗೆ ಈ ಸಂಸ್ಥೆಯನ್ನು ನೇಮಿಸಿತ್ತು. ರೆಡ್ ಲೈನ್ ನಲ್ಲಿ ಭೂಗತ ನಿಲ್ದಾಣದ ಉದ್ದ ಕಡಿಮೆ ಮಾಡಲಾಯಿತು. ದೇಶಾದ್ಯಂತದ ಇತರ ಮೆಟ್ರೋ ಯೋಜನೆಗಳೊಂದಿಗೆ ವೆಚ್ಚದ ಮಾನದಂಡಗಳಿಗೆ ಹೋಲಿಕೆ ಮಾಡಿ ಒಂದಷ್ಟು ಅಂಶಗಳನ್ನು ಸೇರಿಸಲಾಯಿತು. ಹೀಗಾಗಿ ಒಟ್ಟು ವೆಚ್ಚದಲ್ಲಿ ಹಣ ಇಳಿಕೆ ಆಯಿತು.

ಭೂಮಿ ಸ್ವಾಧಿನದಲ್ಲಿನ ಹೊಂದಾಣಿಕೆ, ಭೂಗತ ಸುರಂಗದ ಕೊರೆಯುವ ಉದ್ದೇಶಿತ ಭಾಗವನ್ನು ಮರು ಪರಿಶೀಲಿಸಲಾಯಿತು.ವೆಚ್ಚದಲ್ಲಿ ಕಡಿತದ ಹೊರತಾಗಿಯೂ, ಕಾರಿಡಾರ್‌ನ ಒಟ್ಟು ಉದ್ದ ಮತ್ತು ನಿಲ್ದಾಣಗಳ ಸಂಖ್ಯೆಯಲ್ಲಿ ಯಾವುದೇ ಬದಲಾಣೆ ಆಗಿಲ್ಲ ಎನ್ನಲಾಗಿದೆ.

ಈ ಮಾರ್ಗದ ಎತ್ತರದ ಮಾರ್ಗವನ್ನು 21.995 ಕಿ.ಮೀ.ಗೆ ಅಂದರೆ ಕೊಂಚ ಕಡಿಮೆ ಮಾಡಲಾಗಿದೆ. ಸುರಂಗ (ಭೂಗತ) ಮಾರ್ಗವು 14.63 ಕಿ.ಮೀ.ಗೆ ಹೆಚ್ಚಾಗಿದೆ. ಈ ಕೆಂಪು ಮಾರ್ಗವು ಉತ್ತರದಲ್ಲಿ ಹೆಬ್ಬಾಳ ಮತ್ತು ಆಗ್ನೇಯದಲ್ಲಿ ಸರ್ಜಾಪುರವನ್ನು ಸಂಪರ್ಕಿಸುತ್ತದೆ. ಕೇಂದ್ರ ವ್ಯಾಪಾರ ಜಿಲ್ಲೆ ಮತ್ತು ಕೋರಮಂಗಲದಂತಹ ಪ್ರಮುಖ ವಾಣಿಜ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಈ ಭಾಗದ ಸಾವಿರಾರು ಜನರಿಗೆ ಮೆಟ್ರೋ ಮಾರ್ಗ ಕಲ್ಪಿಸಿದಂತಾಗುತ್ತದೆ. ಯೋಜನೆಯ ಕಾಮಗಾರಿ ಇನ್ನೇನು ಶುರುವಾಗಬೇಕಿದೆ.

ಶೀಘ್ರವೇ ಕೇಂದ್ರ ಅನುಮೋದನೆ ನಿರೀಕ್ಷೆ

ರಾಜ್ಯ ಸರ್ಕಾರ ಈ ಕೆಂಪು ಮಾರ್ಗಕ್ಕೆ ಅನುಮೋದನೆ ನೀಡಿ 2024ರಲ್ಲಿ ಕೇಂದ್ರಕ್ಕೆ ಒಪ್ಪಿಗೆಗೆ ಕಳಹಿಸಲಾಗಿತ್ತು. ಆದರೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಹಣಕಾಸು ವಿಚಾರದಲ್ಲಿ ಕೆಲವೊಂದು ಸೂಚನೆ ನೀಡಿತ್ತು. ಇದೀಗ ಅಂದಾಜು ವೆಚ್ಚ ತಗ್ಗಿದ್ದ ಹಿನ್ನೆಲೆಯಲ್ಲಿ ಮಾರ್ಗದ ಪ್ರಸ್ತಾವನೆ ಅಂಗೀಕರಿಸುವ ಸಾಧ್ಯತೆ ಇದೆ. 2026 ಮಾರ್ಚ್ ಹೊತ್ತಿಗೆ ಅಂತಿಮ ಅನುಮೋದನೆ ನೀಡುವ ನಿರೀಕ್ಷೆ ಇದೆ. ನಮ್ಮ ಮೆಟ್ರೋ 3ನೇ ಹಂತದ ಭೂತಾಂತ್ರಿಕ ಅಧ್ಯಯನಕ್ಕಾಗಿ BMRCL ರೂ. 6.86 ಕೋಟಿ ಮೌಲ್ಯದ ಟೆಂಡರ್ ಆಹ್ವಾನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+