62 ಪುಟಗಳ ಹೇಳಿಕೆ ನೀಡಿದ ನಟಿ ಮೈತ್ರಿಯಾ ಗೌಡ

ಬೆಂಗಳೂರು, ಆ.30 : ಸಚಿವ ಡಿವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ಮಾಡಿರುವ ಆರೋಪದ ಕುರಿತ ವಿಚಾರಣೆ ಮುಂದುವರೆದಿದೆ. ಶುಕ್ರವಾರ ಆರ್.ಟಿ.ನಗರ ಪೊಲೀಸರು ಮೈತ್ರಿಯಾ ಗೌಡ ಅವರನ್ನು ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಿದ್ದು, ಸೋಮವಾರ ಕಾರ್ತಿಕ್ ಗೌಡ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆರ್.ಟಿ.ನಗರದಲ್ಲಿರುವ ನಟಿ ಮೈತ್ರಿಯಾ ಮನೆಗೆ ತೆರಳಿದ ಇನ್ಸ್‌ಪೆಕ್ಟರ್ ಓಂಕಾರಯ್ಯ ಅವರ ನೇತೃತ್ವ ತಂಡ ರಾತ್ರಿ 12 ಗಂಟೆಯವರೆವಿಗೂ ಸುದೀರ್ಘ ವಿಚಾರಣೆ ನಡೆಸಿದೆ. ಕಾರ್ತಿಕ್ ಮತ್ತು ಮೈತ್ರಿಯಾ ಭೇಟಿಯಿಂದ ಹಿಡಿದು ಎಲ್ಲಾ ಮಾಹಿತಿಗಳ ಕುರಿತು ವಿಚಾರಣೆ ನಡೆಸಿ, 62 ಪುಟಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. [ಸದಾನಂದ ಗೌಡ ಪುತ್ರನ ವಿರುದ್ಧ ದೂರು ನೀಡಿದ ನಟಿ]

Mythriya Gowda

ಕಾರ್ತಿಕ್ ಗೌಡ ಅವರ ವಿಚಾರಣೆಗೆ ಸಹ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದು, ಭಾನುವಾರ ಅಥವ ಸೋಮವಾರ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ. ಈ ನಡುವೆ ಮೈತ್ರಿಯಾ ಗೌಡ ಅವರ ವೈದ್ಯಕೀಯ ಪರೀಕ್ಷೆಯ ವರದಿ ಇಂದು ಪೊಲೀಸರ ಕೈ ಸೇರುವ ನಿರೀಕ್ಷೆ ಇದ್ದು, ನಂತರ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ. [ಡಿವಿಎಸ್ ಮಗನ ರೇಪ್ ಕೇಸ್, ಬಿಜೆಪಿ ಬಾಸ್ ಗರಂ]

ಪ್ರಹ್ಲಾದ್ ಜೋಶಿ ಹೇಳುವುದೇನು : ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್‍ಗೌಡ ಅವರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ, ಸದಾನಂದ ಗೌಡ ಹಾಗೂ ಅವರ ಪುತ್ರ ತನಗೆ ಸ್ಪಷ್ಟನೆ ನೀಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕೂಡ ಸದಾನಂದ ಗೌಡರಿಂದ ಘಟನೆಯ ಪೂರ್ಣ ವಿವರ ಕೇಳಿದ್ದು ಅವರಿಗೂ ಘಟನೆಯ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎಂದು ಜೋಶಿ ಸ್ಟಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+