ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ

ಬೆಂಗಳೂರು, ಅಕ್ಟೋಬರ್ 28: "ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಯಂತ್ರಿಸುವುದಕ್ಕೆ ಆಗದ ಬೇಸರದಿಂದ ಆರೆಸ್ಸೆಸ್ ನ ವ್ಯಕ್ತಿಯೊಬ್ಬರು ಒಂದು ಹೋಲಿಕೆ ಮಾಡಿ ಹೇಳಿದ್ದರು. ಶಿವಲಿಂಗದ ಮೇಲೆ ಕುಳಿತಿರುವ ಚೇಳಿನಂತೆ ನರೇಂದ್ರ ಮೋದಿ. ನೀವು ಬರೀ ಕೈನಿಂದ ಅದನ್ನು ಸರಿಸುವುದಕ್ಕೆ ಆಗಲ್ಲ ಮತ್ತು ಚಪ್ಪಲಿಯಿಂದ ಹೊಡೆಯಲು ಕೂಡ ಸಾಧ್ಯವಿಲ್ಲ" ಎಂದು ಸಂಸದ ಶಶಿ ತರೂರ್ ಇಲ್ಲಿ ಭಾನುವಾರ ಹೇಳಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ತಾವು ಬರೆದ ಪುಸ್ತಕದ ಬಗೆಗಿನ ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿ ತರೂರ್, ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ. ಆರೆಸ್ಸೆಸ್ ನ ಹಲವರಿಗೆ ಮೋದಿ ನಡೆ ಇಷ್ಟವಿಲ್ಲ. ಆದರೆ ಅವರನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಿದೆ. ಈ ಬಗ್ಗೆ ಆ ಸಂಘಟನೆಯವರೇ ಹೇಳಿಕೊಂಡಿದ್ದಾರೆ ಎಂದಿದ್ದಾರೆ.

RSS source said PM Narendra Modi Scorpion on Shivlinga: Shashi Tharoor

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಈ ಹೇಳಿಕೆ ಬಂದ ಕೆಲ ಗಂಟೆಗಳಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಒತ್ತಾಯಿಸಿದ್ದಾರೆ. "ರಾಹುಲ್ ಗಾಂಧಿಯವರೇ ನಿಮ್ಮನ್ನು ಶಿವಭಕ್ತ ಅಂತ ಕರೆದುಕೊಳ್ತೀರಿ. ಮಹಾದೇವನಿಗೆ ಮಾಡಿದ ಈ ಅವಮಾನಕ್ಕೆ ನಿಮ್ಮ ಪ್ರತಿಕ್ರಿಯೆ ನೀಡಿ" ಎಂದಿದ್ದಾರೆ.

ಕಳೆದ ತಿಂಗಳು ಶಶಿ ತರೂರ್ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತದ ಸಂವಿಧಾನವನ್ನು ಹರಿದುಹಾಕಿ, ಹೊಸದು ಬರೆದು ಬಿಡುತ್ತಾರೆ ಎಂದು ಆರೋಪಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+