Viral Video: ಬಾರ್ಬಿಕ್ಯೂಗೆ 20 ನಿಮಿಷ ಹೋಗಿ ₹20 ಲಕ್ಷ ನಷ್ಟ ಅನುಭವಿಸಿದ ಮಹಿಳೆ..

ಬೆಂಗಳೂರು, ಮೇ 01: ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಬಾರ್ಬಿಕ್ಯೂಗೆ ಹೋಗಿದ್ದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದು ಮಾತ್ರವಲ್ಲದೇ ನ್ಯಾಯ ಕೇಳಲು ಹೋದರೆ ಪೊಲೀಸರಿಂದ, ನಗರದ ಆಡಳಿತ ವೈಫಲ್ಯ ಭ್ರಷ್ಟಾಚಾರದಿಂದ ಸಂಕಷ್ಟ ಅನುಭವಿಸುವಂತಾಗಿದೆ. ಕೊನೆಗೆ ಆ ಮಹಿಳೆಗೆ ದಾರಿ ಕಾಣದಾಗಿದೆ. ಈ ಕುರಿತು ಫೋಟೋ, ವಿವರಣೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

'ಬೆಂಗಳೂರಿನಲ್ಲಿ 20 ನಿಮಿಷಗಳ ಆಹಾರ ವೆಚ್ಚ ರೂ. 20 ಲಕ್ಷ ನಷ್ಟ' ಶಿರ್ಷಿಕೆಯಡಿ ಕರ್ನಾಟಕ ಪೋರ್ಟ್‌ಫೋಲಿಯೋ ಬೆಂಜ್ ಕಾರಿನ ಫೋಟೋ ಹಂಚಿಕೊಂಡಿದೆ. ನಗರದ ಮಾತ್ತರಹಳ್ಳಿಯ ದಿ ಬಿಗ್ ಬಾರ್ಬೆಕ್ಯೂನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ಬಾರ್ಬಿಕ್ಯೂಗೆ ಬಂದ ಮಹಿಳೆಯು ತನ್ನ ₹1.4 ಕೋಟಿ ರೂಪಾಯಿ ಮೌಲ್ಯದ ಕಾರನ್ನು ಪಾರ್ಕಿಂಗ್ ವ್ಯಾಲೆಟ್ ಚಾಲಕರಿಗೆ ನೀಡಿದ್ದಾರೆ.

Rs 20 Lakh Damage in 20 Minutes Valet Joyride Wrecks Mercedes in Bengaluru Women urge Justice

ಆದರೆ ಅವರ ಕಾರು ಪಾರ್ಕಿಂಗ್ ಜಾಗದಲ್ಲಿ ನುಜ್ಜು ಗುಜ್ಜು ರೀತಿಯಲ್ಲಿ ಹಾನಿಗೀಡಾದ ಸ್ಥಿತಿಯಲ್ಲಿ ಕಂಡು ಆ ಮಹಿಳೆ ದಗ್ಭ್ರಮೆಗೊಂಡಿದ್ದಾರೆ. ಮರ್ಸಿಡಿಸ್-ಬೆನ್ಜ್ ಕಾರಿಗೆ ಸಾಕಷ್ಟು ಹಾನಿಗೀಡಾಗಿದೆ. ವ್ಯಾಲೆಟ್ ಚಾಲಕ ಕಾರನ್ನು ಪಾರ್ಕಿಂಗ್ ಮಾಡುವ ಬದಲು ಜಾಲಿರೈಡ್‌ಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಕಾರನ್ನು ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ. ಮುಂದಿನ ಬಾನೆಟ್ ಸೇರಿ ಕಾರು ಹಾನಿಗೀಡಾಗಿದೆ.

ಹಾನಿ ಮಾಡಿದ ಚಾಲಕ ಸ್ಥಳದಿಂದ ಪರಾರಿ..

ಸುಮಾರು 20 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಾರಿನಲ್ಲಿ ಚಾಲಕರಿಲ್ಲದೇ ಓಡಿ ಹೋಗಿದ್ದಾರೆ. ರೀಲ್ಸ್ ಮಾಡಲು ಹೋಗಿ ಹೀಗೆ ಕಾರಿಗೆ ಹಾನಿ ಮಾಡಿದ್ದಾರೆ ಅಂತಲೂ ಹೇಳಿದ್ದಾರೆ. ಆದರೆ ಈ ಹಾನಿ ಜವಾಬ್ದಾರಿಯನ್ನು ಬಾರ್ಬಿಕ್ಯೂ ರೆಸ್ಟೋರೆಂಟ್ ಹೊರದೇ ತಪ್ಪಿಸಿಕೊಳ್ಳಲು ಯತ್ನಿಸಿದೆ. ಪಾಕಿಂಗ್ ಮಾಡಲು ಹೋದ ಚಾಲಕ ನಕಲಿ ವಿವರ ನೀಡಿದೆ. ಮಹಿಳೆ ಯಾಮಾರಿಸಲು ಮುಂದಾಗಿದೆ.

Take a Poll

ಇದು ಗೊತ್ತಾಗುತ್ತಿದ್ದಂತೆ ಮಹಿಳೆ, ಪೊಲೀಸರ ಬಳಿಕ ನ್ಯಾಯಕ್ಕಾಗಿ ಅಲೆದಿದ್ದಾರೆ. ಕಾನೂನು ಕ್ರಮ ಕೈಗೊಳ್ಳುಬೇಕಾದ ಪೊಲೀಸರು 2 ಲಕ್ಷ ರೂಪಾಯಿಯಿಂದ ಸಮಸ್ಯೆ "ಇತ್ಯರ್ಥಪಡಿಸಿಕೊಳ್ಳಿ" ಎಂದು ಸೂಚಿಸಿದ್ದಾರೆ. ನೀವು ವ್ಯವಹಾರಕ್ಕೆ ಬೆಲೆ ಕೊಡುವ ಬದಲು ನ್ಯಾಯಕ್ಕಾಗಿ ಬೆಲೆ ಕೊಡಿ ಎಂದು ಆಗ್ರಹಿದ್ದಾರೆ. ಇತ್ತ ಕಾರು ಪಾರ್ಕಿಂಗ್ ಮಾಡಲು ಹೋದ ಚಾಲಕ ಕಾಣೆಯಾಗಿದ್ದಾರೆ. ಸದ್ಯ ಮಹಿಳೆಗೆ ಯಾರಿಂದಲೂ ಸ್ಪಂದನೆ ಸಿಗದೇ ಏಕಾಂಗಿ ಹೋರಾಡುತ್ತಿದ್ದಾರೆ.

ಜನಸಾಮಾನ್ಯರ ಗತಿ ಏನು?

ನಗರದಲ್ಲಿ ಕುಸಿಯುತ್ತಿರುವ ಗ್ರಾಹಕ ಹಕ್ಕುಗಳು ಮತ್ತು ಕಾನೂನು ಜಾರಿ ವೈಫಲ್ಯಗಳ ಮೇಲೆ ಮಹಿಳೆ ಸಂಕಷ್ಟ ಆಗುತ್ತಿರುವ ಅನ್ಯಾಯವು ಎತ್ತಿ ತೋರಿಸುತ್ತಿದೆ. ಹೀಗೆ ಐಶಾರಾಮಿ ಕಾರು ಹೊಂದಿದ ವ್ಯಕ್ತಿಗಳ ಪ್ರಕರಣಗಳೇ ಹೀಗಾದರೆ, ಇನ್ನೂ ಸಾಮಾನ್ಯರ ಕಥೆ ಏನಾಗಬೇಡ. ರಾಜ್ಯ ಸರ್ಕಾರವು "ಬ್ರ್ಯಾಂಡ್ ಬೆಂಗಳೂರು" ಎಂದು ಹೆಮ್ಮೆ ವ್ಯಕ್ತಪಡಿಸುತ್ತದೆ. ವಂಚನೆ ಹೆಚ್ಚಾಗುತ್ತಿರುವ ಇಂದಿನ ಸಮಯದಲ್ಲಿ ಆಡಳಿತ, ಪೊಲೀಸ್ ಕರ್ತವ್ಯ ಹೇಗಿದೆ ಎಂಬುದನ್ನು ಗಂಭೀರವಾಗಿ ನೋಡಬೇಕಿದೆ.

ಸದ್ಯ ಬಾರ್ಬಿಕ್ಯೂ ಪಾರ್ಕಿಂಗ್‌ನಲ್ಲಿ ಹಾನಿಗೀಡಾದ ಕಾರಿನ ಫೋಟೋ, ವಿಡಿಯೋ ವೈರಲ್ ಆಗುತ್ತಿವೆ. ಆ ಮಹಿಳೆ ಕಾರಿನ ದುರಸ್ತಿಗಾಗಿ ₹20 ಲಕ್ಷ ವ್ಯಯಿಸಬೇಕಿದೆ. ಸದ್ಯ ಸರ್ಕಾರ, ಪೊಲೀಸ್ ಅಧಿಕಾರಿಗಳ ಬೆಂಬಲವನ್ನು ಆ ಮಹಿಳೆ ಎದುರು ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+