• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರ ಹೋರಾಟಕ್ಕೆ ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಿರುವ ಪೊಲೀಸರು

|

ಬೆಂಗಳೂರು, ಜನವರಿ 26: ಕೃಷಿ ಕಾಯ್ದೆ ವಿರೊಧಿಸಿ ದೆಹಲಿಯಲ್ಲಿ ರೈತರು ಕೈಗೊಂಡಿರುವ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ರೈತ ಸಂಘಟನೆಗಳು, ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ರೈತರ ಟ್ರಾಕ್ಟರ್ ಜಾಥಾಗೆ ಬೆಂಗಳೂರು ಸಂಚಾರ ಪೊಲೀಸರು ಪ್ರತ್ಯೇಕ ಮಾರ್ಗ ವ್ಯವಸ್ಥೆ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು, ರೈತ ಹೋರಾಟ ಬೆಂಬಲಿಸಿ ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಪರ್ಯಾಯ ಪೆರೇಡ್ ನಡೆಸಲು ರೈತ, ದಲಿತ, ಕಾರ್ಮಿಕ ವಿದ್ಯಾರ್ಥಿ, ಯುವಜನ ಮತ್ತು ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ಹೋರಾಟದಲ್ಲಿ ಪಾಳ್ಗೊಳ್ಳಲಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಟ್ರ್ಯಾಕ್ಟರ್ ಕಾರುಗಳು, ದ್ವಿಚಕ್ರ ವಾಹನಗಳೊಂದಿಗೆ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹೀಗಾಗಿ ಬೆಂಗಳೂರು ನಗರ ಸಂಚಾರಕ್ಕೆ ಧಕ್ಕೆ ಯಾಗದಂತೆ ಹೋರಾಟಗಾರರಿಗೆ ಬದಲಿ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಬಳ್ಳಾರಿ ರಸ್ತೆ ಮಾರ್ಗ: ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಕಡೆಯಿಂದ ತಿರುವು ಪಡೆದು ಭದ್ರಪ್ಪಾ ಲೇಔಟ್ ಕುವೆಂಪು ವೃತ್ತೆ ಹೆಬ್ಬಾಳ ಮೇಲು ಸೇತುವೆ ಬಳಿ - ಬಲ ಬಿ.ಇ.ಎಲ್ ಸರ್ಕಲ್ ಸರ್ವೀಸ್ ರಸ್ತೆ ಸದಾಶಿವನಗರ ಪಿಎಸ್, ಜಂಕ್ಷನ್ ಬಿ.ಹೆಚ್.ಐ.ಎಲ್ ವೃತ್ತ - ಮಾರಮ್ಮ ವೃತ್ತ - ಬಲ ತಿರುವು ಮಾರ್ಗೋಸಾ ರಸ್ತೆ - ಆರ್.ಎಂ.ಎಸ್. ಶೇಷಾದ್ರಿಪುರಂ - ಆನಂದರಾವ್ ವೃತ್ತ - ಮೌರ್ಯ ಜಂಕ್ಷನ್ ಮೂಲಕ ಫ್ರೀಡಂ ಪಾರ್ಕ್.

ಹಳೇ ಮದ್ರಾಸ್ ರಸ್ತೆ : ಕೋಲಾರ, ಹೊಸಕೋಟೆ ಕಡೆಯಿಂದ ಬರುವವರು - ಮೇಡಹಳ್ಳಿ ಜಂಕ್ಷನ್ - ಕೆ.ಆರ್.ಪುರ ಟಿನ್‌ಫ್ಯಾಕ್ಟರಿ - ಬಿಗ್‌ಬಜಾರ್' - ಎನ್.ಜಿ.ಇ.ಎಫ್ - 100 ಅಡಿ ರಸ್ತೆ ಜಂಕ್ಷನ್ - ಆಂಜನೇಯ ಸ್ವಾಮಿ ಟೆಂಪಲ್ ರಸ್ತೆ ಸ್ವಾಮಿ ವಿವೇಕಾನಂದ ರಸ್ತೆ - ರಾಮಯ್ಯ ಜಂಕ್ಷನ್ - ಟ್ರೆನಿನಿ ವೃತ್ತ - ಎಡ ತಿರುವು - ರಿಚ್‌ಮಂಡ್ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಫ್ರೀಡಂಪಾರ್ಕ್ .

ಹಳೇ ಏರ್‌ಪೋರ್ಟ್ ಮಾರ್ಗ: ವರ್ತೂರು ಮತ್ತು ಹಳೇ ಏರ್‌ಪೋರ್ಟ್ ರಸ್ತೆ ಕಡೆಯಿಂದ ಬರುವವರು ವರ್ತೂರು ರಸ್ತೆ - ಹಳೇ ಏರ್‌ಪೋರ್ಟ್‌ ರಸ್ತೆ - ದೊಮ್ಮಲೂರು - ಎ.ಎಸ್.ಸಿ. ವೃತ್ತ - ಇಂಡಿಯಾ ಗ್ಯಾರೇಜ್ - ಡಿಸೋಜಾ ವೃತ್ತೆ ಮದರ್ ತೆರೆಸಾ ಜಂಕ್ಷನ್ - ಅಶೋಕನಗರ ಸಿಗ್ನಲ್ ಲೈಟ್ - ರಿಚ್ಮಂಡ್ ವೃತ್ತ , ಮಹಾರಾಣಿ ಮೇಲು ಸೇತುವೆ ಸರ್ವೀಸ್ ರಸ್ತೆ - ಎಡ ತಿರುವು -ಫ್ರೀಡಂ ಪಾರ್ಕ್,

ಹೊಸೂರು ಮಾರ್ಗ: ಹೊಸೂರು ಮಾರ್ಗದಿಂದ ಬರುವರು ಮಡಿವಾಳ - ತಾವರೆಕೆರೆ ಜಂಕ್ಷನ್ ಡೈರಿ ವೃತ್ತ - ನಿಮ್ಹಾನ್ಸ್ , ಶಾಂತಿನಗರ ಬಿ.ಎಂ.ಟಿ.ಸಿ. ಜಂಕ್ಷನ್ , ಹಲಸೂರುಗೇಟ್ ಪಿ.ಎಸ್, ಜಂಕ್ಷನ್ - ಮೈಸೂರು ಬ್ಯಾಂಕ್ ವೃತ್ತ - ಬಲ ತಿರುವು ಪ್ಯಾಲೇಸ್ ರಸ್ತೆ ಮೂಲಕ ಫ್ರೀಡಂ ಪಾರ್ಕ್

ಬನ್ನೇರುಘಟ್ಟ ಮಾರ್ಗ: ಹುಳಿಮಾವು ಅರಕೆರೆ - ಬಿಳೇಕಹಳ್ಳಿ - ಜಿ.ಡಿ.ಮರೆ ಜಂಕ್ಷನ್ ಜಯದೇವ ಅಂಡರ್‌ಪಾಸ್ - ಸಾಗರ್ ಜಂಕ್ಷನ್ - ಡೈರಿ ವೃತ್ತ ಎಡ ತಿರುವು - ಶಾಂತಿನಗರ ಬಿ.ಎಂ.ಟಿ.ಸಿ. ಜಂಕ್ಷನ್ - ಶಾಂತಿನಗರ - ರಿಚ್ಮಂಡ್ ವೃತ್ತ. ತಿರುವು - ಆರ್.ಆರ್.ಎಂ.ಆರ್. ಜಂಕ್ಷನ್ - ಹೆಡ್ಡನ್ ವೃತ್ತ - ಹಲಸೂರುಗೇಟ್ ಪಿ.ಎಸ್, ಮಹಾರಾಣಿ ಮೇಲು ಸೇತುವೆ ಸರ್ವೀಸ್ ರಸ್ತೆ ಮೂಲಕ ಫ್ರೀಡಂ ಪಾರ್ಕ್,

ತುಮಕೂರು ರಸ್ತೆ: ನೈಸ್ ರಸ್ತೆ ಜಂಕ್ಷನ್- ಯಶವಂತಪುರ ಫೈಟರ್ - ಸರ್ಕಲ್ ಮಾರಮ್ಮ ಜಂಕ್ಷನ್- ಬಲ ತಿರುವು- ಮಾರ್ಗೋಸಾ ರಸ್ತೆ-ಕೆ.ಸಿ.ಜಿ ಜಂಕ್ಷನ್- ಎಡ ತಿರುವು ಗೀತಾಂಜಲಿ ಜಂಕ್ಷನ್ ಲಿಂಕ್ ರಸ್ತೆ - ಆರ್.ಎಂ.ಎಸ್. ಶೇಷಾದ್ರಿಪುರಂ - ಆನಂದರಾವ್ ವೃತ್ತ - ಮೌರ್ಯ ಜಂಕ್ಷನ್ ಮೂಲಕ ಫ್ರೀಡಂ ಪಾರ್ಕ್.

ಕನಕಪುರ ರಸ್ತೆ: ಕೋಣನಕುಂಟೆ ಕ್ರಾಸ್ ಜಂಕ್ಷನ್- ಚುಂಚಘಟ್ಟ ಕ್ರಾಸ್ ಜಂಕ್ಷನ್-ಸಾರಕ್ಕಿ ಜಂಕ್ಷನ್-ಸಾರಕ್ಕಿ ಮಾರ್ಕೇಟ್ ಜಂಕ್ಷನ್- ಬನಶಂಕರಿ ಟೆಂಪಲ್ ಜಂಕ್ಷನ್ -ಬಲತಿರುವು- ಸೌತ್ ಎಂಡ್ ವೃತ್ತ-ಆರ್.ವಿ.ಟೀಚರ್ ಕಾಲೇಜ್ ಜಂಕ್ಷನ್-ಲಾಲ್‌ಬಾಗ್ ವೆಸ್ಟ್ ಗೇಟ್ ಜಂಕ್ಷನ್- ಟೌನ್ ಹಾಲ್ ಸರ್ಕಲ್ - ಎನ್.ಆರ್. ವೃತ್ತ - ಪೊಲೀಸ್ ಕಾರ್ನರ್ - ಎಡ ತಿರುವು - ಕೆ.ಜ, ರಸ್ತೆ - ಮೈಸೂರು ಬ್ಯಾಂಕ್ ಮೂಲಕ ಫ್ರೀಡಂಪಾರ್ಕ್.

   ಮೈಸೂರು:ಪೊಲೀಸರು ರೈತರ ಟ್ರ್ಯಾಕ್ಟರ್ ತಡೆದರೆ ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ-ರೈತ ಸಂಘ ಎಚ್ಚರಿಕೆ | Oneindia Kannada

   ಮೈಸೂರು ರಸ್ತೆ: ಮೈಸೂರು ರಸ್ತೆ ಮಾರ್ಗವಾಗಿ-ಮಧು ಪೆಟ್ರೋಲ್ ಬಂಕ್ ಜಂಕ್ಷನ್-ಗಾಳಿ ಆಂಜನೇಯಸ್ವಾಮಿ ದೇವಸ್ಥಾನ-ಬಾಪೂಜಿನಗರ ಜಂಕ್ಷನ್- ಕೆ.ಎಸ್.ಆರ್.ಟಿ.ಸಿ, ಜಂಕ್ಷನ್- ಹೊಸ ಗುಡ್ಡದಹಳ್ಳಿ ಜಂಕ್ಷನ್- ಕ್ರಿಶ್ಚಿಯನ್ ಸ್ಮಶಾನೆ- ಮೈಸೂರು ರಸ್ತೆ ಟೋಲ್ ಗೇಟ್ ಜಂಕ್ಷನ್-ಬಿಜಿ ಜಂಕ್ಷನ್- ಶಾಂತಲಾ ವೃತ್ತ-ಜಿ.ಟಿ.ರಸ್ತೆ-ಖೋಡೆ ಜಂಕ್ಷನ್ ಬಲತಿರುವು-ಶೇಷಾದ್ರಿರಸ್ತೆ-ಆನಂದರಾವ್ ವೃತ್ತ-ಫ್ರೀಡಂಪಾರ್ಕ್ ಸೇರಲು ಅವಕಾಶ ಕಲ್ಪಿಸಲಾಗಿದೆ.

   English summary
   Bangalore Traffic Police have set up a separate lane in the wake of the farmers tractor rally in Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X