ಭಾರಿ ಮಳೆಗೆ ಹೇಗಾಯ್ತು ನೋಡಿ ಬೆಂಗಳೂರು ರಸ್ತೆ ಸ್ಥಿತಿ
ಬೆಂಗಳೂರು, ಏಪ್ರಿಲ್ 24: ಬೆಂಗಳೂರಿನಲ್ಲಿ ನಿನ್ನೆ (ಗುರುವಾರ) ರಾತ್ರಿ ಭಾರಿ ಮಳೆ ಸುರಿದಿದೆ. ಸಾಮಾನ್ಯವಾಗಿ ಮಳೆ, ಗಾಳಿ ಹೆಚ್ಚಿದ್ದರೆ ಮರ ಬೀಳುತ್ತವೆ. ಆದರೆ, ಇಲ್ಲಿ ಜನರು ಓಡಾಡುವ ರಸ್ತೆಯೇ ಕಿತ್ತು ಬಂದಿದೆ.
ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಸಂಜೆ, ರಾತ್ರಿ ವೇಳೆಯಲ್ಲಿ ಮಳೆ ಸುರಿಯುತ್ತಿದೆ. ನಿನ್ನೆ ಕೆಂಗೇರಿ ಬಳಿ ಜೋರಾಗಿ ಮಳೆ ಬಂದಿದೆ. ಇದರಿಂದ ರಸ್ತೆಯ ಸ್ಥಿತಿ ಪೂರ ಬದಲಾಗಿ ಹೋಗಿದೆ.
ಮಳೆಗೆ ರಸ್ತೆಗಳು ಬಿರುಕು ಬಿಟ್ಟಿದೆ. ಭೂಕಂಪ ಆದಾಗ ಅದರ ಪರಿಣಾಮ ಹೇಗಿರುತ್ತದೆಯೋ ಆ ರೀತಿಯ ಚಿತ್ರಣ ಅಲ್ಲಿ ಕಂಡು ಬಂದಿದೆ. ಕೆಂಗೇರಿ ಬಳಿಯ ಮೂರ್ನಾಲ್ಕು ರಸ್ತೆಗಳು ಮಳೆಗೆ ಈ ರೀತಿಯಾಗಿವೆ. ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಉಂಟಾಗಿದೆ.

ಮನೆ ಮುಂದೆ ರಸ್ತೆಯ ಅಂಚಿನಲ್ಲಿ ಕಾರ್‌ಗಳು, ಆಟೋಗಳು ನಿಲ್ಲಿಸಿದ್ದು, ಆ ವಾಹನಗಳು ಸಿಕ್ಕಿ ಹಾಕಿಕೊಂಡಿವೆ. ಟಾಟಾ ಇಂಡಿಕಾ ಕಾರ್ ಗುಂಡಿಗೆ ಬಿದ್ದಿದೆ. ಕೆಲವು ರಸ್ತೆಗಳಿಗೆ ಟಾರ್ ಹಾಕಿದ್ದರೂ, ಕಳಪೆ ಕಾಮಗಾರಿಯಿಂದಲೋ ಏನೋ ಈ ಅವಸ್ಥೆಯಾಗಿದೆ. ಬೆಂಗಳೂರಿನಲ್ಲಿ ಈ ರೀತಿ ಮಳೆ ಹೊಡೆತಕ್ಕೆ ರಸ್ತೆಗಳು ಹಾಳಗುವುದು ಆಗಾಗ ಕಂಡು ಬರುತ್ತಿದೆ.
Bengaluru: Road cave-in near Kaggere after heavy rain last night#Karnataka pic.twitter.com/ApXF6kYWZ5
— ANI (@ANI) April 24, 2020
ಕೊರೊನಾ ವೈರಸ್ ಭೀತಿ, ಲಾಕ್‌ಡೌನ್‌ಗಳ ನಡುವೆ ಈ ಭಾಗದ ಜನಕ್ಕೆ ಮಳೆ ಬಂದು, ರಸ್ತೆ ಅವತಾರ ನೋಡಿ ತಲೆ ನೋವು ತಂದಿದೆ.












Click it and Unblock the Notifications