'ನನ್ನ ಲಂಚ್ ಬಾಕ್ಸ್ ತೊಳೆಯಿರಿ' ವಿಮಾನ 2 ಗಂಟೆ ತಡವಾಗಲು ಇದೇ ಕಾರಣ
ಬೆಂಗಳೂರು, ಜೂನ್ 19: 'ನನ್ನ ಲಂಚ್ ಬಾಕ್ಸ್ ತೊಳೆಯಿರಿ' ಎಂದು ವಿಮಾನ ಕ್ಯಾಪ್ಟನ್ ಮೇಲ್ವಿಚಾರಕರಿಗೆ ಹೇಳಿದ್ದೇ ತಡ ಜಗಳ ಆರಂಭವಾಗೇ ಬಿಡ್ತು, ಇದೊಂದು ಮಾತು ಏರ್ ಇಂಡಿಯಾ ವಿಮಾನ 2 ಗಂಟೆ ತಡವಾಗಿ ಹೋಗಲು ಕಾರಣವಾಯಿತು.
ಇನ್ನೇನು ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನಿಂದ ಕೊಲ್ಕತ್ತಕ್ಕೆ ಏರ್ ಇಂಡಿಯಾ ವಿಮಾನ ಹೊರಡುವುದರಲ್ಲಿತ್ತು, ಬೋರ್ಡಿಂಗ್ ಮುಕ್ತಾಯಗೊಂಡಿತ್ತು.
ಎಲ್ಲರೂ ತಮ್ಮ ತಮ್ಮ ಸೀಟಿನಲ್ಲಿ ಕುಳಿತಾಗಿತ್ತು. ಮೊದಲು ಕ್ಯಾಪ್ಟನ್ ತಂದಿದ್ದ ಆಹಾರವನ್ನು ಬಿಸಿ ಮಾಡುವಂತೆ ಹೇಳಿದ್ದರು, ಊಟವಾದ ನಂತರ ಬಾಕ್ಸ್‌ನ್ನು ತೊಳೆಯುವಂತೆ ಹೇಳಿದಾಗ , ಮೇಲ್ವಿಚಾರಕನಿಗೆ ಕೋಪಬಂದು ಅಲ್ಲಿಯೇ ಜಗಳ ಆರಂಭವಾಗಿತ್ತು.

ವಿಮಾನವನ್ನು ಎರಡು ಗಂಟೆ ತಡವಾಗಿ ಹೋಗುವಂತೆ ಮಾಡಿತ್ತು. ಅದೂ ಬೇರೆ ಕ್ಯಾಪ್ಟನ್ ಹಾಗೂ ಮೇಲ್ವಿಚಾರಕರನ್ನು ಕರೆಸಿ ವಿಮಾನ ಹಾರಾಟಕ್ಕೆ ಅನುವು ಮಾಡಿಕೊಡಲಾಗಿತ್ತು.
ಏರ್‌ಲೈನ್ ಮುಖ್ಯಸ್ಥರಾದ ಅಶ್ವನಿ ಲೊಹಾನಿಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಗುರುವಾರ ದೆಹಲಿಯಗೆ ಇವರಿಬ್ಬರನ್ನು ವಿಚಾರಣೆಗೆಂದು ತೆರಳಲು ತಿಳಿಸಿದ್ದಾರೆ. ಕರ್ತವ್ಯದ ಸಂದರ್ಭದಲ್ಲಿ ಜಗಳವಾಡಿದ್ದು ಅಷ್ಟೇ ಅಲ್ಲದೆ ನೂರಾರು ಪ್ರಯಾಣಿಕರಿಗೆ ತೊಂದರೆ ಮಾಡಿದ್ದು ಗಂಭೀರವಾದ ವಿಚಾರವಾಗಿದೆ.
ಬೆಳಗ್ಗೆ 11.15ಕ್ಕೆ ಬೆಂಗಳೂರಿನಿಂದ ಹೊರ ವಿಮಾನ ಕೊಲ್ಕತ್ತವನ್ನು ಎರಡು ತಾಸು ತಡವಾಗಿ ತಲುಪಿದೆ. ಅದೃಷ್ಟವಶಾತ್ ಒಂದೊಮ್ಮೆ ಹಾರಾಟದ ಹಂತದಲ್ಲಿದ್ದಾಗ ಈ ರೀತಿಯಾಗಿದ್ದರೆ ಪ್ರಯಾಣಿಕರ ಗತಿ ಏನಾಗುತ್ತಿತ್ತು ಎಂದು ಹಿರಿಯ ಪೈಲಟ್ ಒಬ್ಬರು ತಿಳಿಸಿದ್ದಾರೆ.












Click it and Unblock the Notifications