ಬೆಂಗಳೂರಲ್ಲಿ ಭಾನುವಾರ ಸಿವಿಲ್ ಪೊಲೀಸ್ ಪೇದೆ ಪರೀಕ್ಷೆ

ಬೆಂಗಳೂರು, ಜ. 17: ನಗರದಲ್ಲಿ ಖಾಲಿ ಉಳಿದಿರುವ ಸಿವಿಲ್ ಪೊಲೀಸ್ ಪೇದೆ (ಪುರುಷ ಮತ್ತು ಮಹಿಳೆ) ಹುದ್ದೆಗಳಿಗೆ 64 ಕೇಂದ್ರಗಳಲ್ಲಿ ಜ. 18ರಂದು ಮರು ಲಿಖಿತ ಪರೀಕ್ಷೆ ಏರ್ಪಡಿಸಲಾಗಿದೆ.

ಬೆಳಗ್ಗೆ 11 ರಿಂದ 12.30ರ ವರೆಗೆ ಪರೀಕ್ಷೆ ನಡೆಯಲಿದೆ. ಈಗಾಗಲೇ ನಡೆದಿರುವ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪರೀಕ್ಷೆ ಬರೆಯಲು ಅರ್ಹರು ಎಂದು ಪೊಲೀಸ್ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

police

ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ವಿವರಗಳು ಮತ್ತು ಕರೆಪತ್ರವನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ www.ksp.gov.in ನಿಂದ ಪಡೆಯಬಹುದು. ಕರೆಪತ್ರ ಪಡೆಯದೇ ಹಾಜರಾದಲ್ಲಿ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ. ಜೊತೆಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಫಲಿತಾಂಶ ಪತ್ರ ತರಬೇಕು.

ನಿಗದಿತ ಸಮಯದಲ್ಲಿ ಹಾಜರಾಗದಿದ್ದರೆ ಲಿಖಿತ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್, ಪೇಜರ್, ಕ್ಯಾಲ್‌ಕ್ಯುಲೇಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತರಬಾರದು ಎಂದು ಪೊಲೀಸ್ ಉಪ ಆಯುಕ್ತರು ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+