Revanna Brothers: ಪರಪ್ಪನ ಅಗ್ರಹಾರದಲ್ಲಿ ಸೂರಜ್ ಮತ್ತು ಪ್ರಜ್ವಲ್ ಒಂದೇ ಸೆಲ್‌ನಲ್ಲಿ!
ಹಲವು ಆರೋಪಗಳ ಮೇಲೆ ಪರಪ್ಪನ ಅಗ್ರಹಾರ ಸೇರಿರುವ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಎರಡು ದಿನಗಳಿಂದ ಒಂದೇ ಸೆಲ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಖಾಸಗಿ ವಾಹಿನಿ ನ್ಯೂಸ್ ಫಸ್ಟ್ ಈ ಬಗ್ಗೆ ವರದಿ ಮಾಡಿದ್ದು, ಅಣ್ಣ ತಮ್ಮ ಒಂದೇ ಸೆಲ್‌ನಲ್ಲಿದ್ದರು ಎಂದು ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದೆ.

ಅಶ್ಲೀಲ ವಿಡಿಯೋ ಪ್ರಕರಣ, ಅತ್ಯಾಚಾರ ಆರೋಪದಡಿ ಜೈಲು ಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಸೂರಜ್ ರೇವಣ್ಣ ಜೈಲು ಸೇರಿದ್ದಾರೆ.
ಪೇಪರ್ ಓದುತ್ತಿದ್ದಾರಂತೆ ಸಹೋದರರು
ಇಬ್ಬರನ್ನೂ ಕೂಡ ಒಂದೇ ಸೆಲ್‌ನಲ್ಲಿ ಇಡಲಾಗಿದ್ದು, ಕಳೆದ ಎರಡು ದಿನಗಳಿಂದ ಪೇಪರ್ ಓದುತ್ತಾ, ಜಗತ್ತಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಪ್ರಜ್ವಲ್ ಮತ್ತು ಸೂರಜ್ ರೇವಣ್ಣ ಅವರ ಸೆಲ್ ಪಕ್ಕದಲ್ಲಿರುವ ಇನ್ನೊಂದು ಸೆಲ್‌ನಲ್ಲಿ ಬಿಟ್‌ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಮತ್ತು ಗ್ಯಾಂಗ್ ಇದೆ. ಸೆಲ್‌ನಿಂದ ಹೊರಗಡೆ ಸಹೋದರರಿಗೆ ಯಾರೇ ಮುಖಾಮುಖಿಯಾದರೂ ಇಬ್ಬರೂ ಕೂಡ ಅವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.












Click it and Unblock the Notifications