7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಿವೃತ್ತ ಎಸ್‌ಐ ಬಂಧನ

ಬೆಂಗಳೂರು, ಆಗಸ್ಟ್ 15: ತನ್ನ ಮನೆಯ ಬಾಡಿಗೆದಾರನ ಮಗಳಾದ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 74 ವರ್ಷದ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಒಬ್ಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸೋಮವಾರ ರಾತ್ರಿ 8:30 ರ ಸುಮಾರಿಗೆ ನೆಲ ಮಹಡಿಗೆ ಬಿದ್ದಿದ್ದ ತನ್ನ ಆಟಿಕೆ ತೆಗೆದುಕೊಳ್ಳಲು ಮಗಳು ಇಳಿದಿದ್ದಾಳೆ. ತಡವಾಗಿಯಾದರೂ ಹಿಂತಿರುಗದಿದ್ದಾಗ ಗಾಬರಿಗೊಂಡ ತಾಯಿ ತನ್ನ ಮಗಳು ಕಣ್ಣೀರು ಹಾಕುತ್ತಾ ನಿಂತಿರುವುದನ್ನು ಕಂಡು ಘಟನೆ ಅರಿತಳು. ಬೆಂಗಳೂರಿನ ಪೂರ್ವ ಭಾಗದಲ್ಲಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

retired-si-arrested

ಮಗಳು ಕಣ್ಣೀರು ಹಾಕುತ್ತಾ ನಿಂತಿದ್ದಾಗ ಅವಳ ತುಟಿಗಳು ಊದಿಕೊಂಡಿದ್ದವು. ಅವಳು ತನಗೆ ಏನಾಯಿತು ಎಂದು ಹೇಳಲು ಅಳುತ್ತಿದ್ದಳು. ಸ್ಥಳದಲ್ಲಿ ಅವರು ತುಂಬಾ ಹೆದರುತ್ತಿದ್ದಳು ಎಂದು ತಾಯಿ ತಿಳಿಸಿದ್ದಾರೆ.

ಈ ಬಗ್ಗೆ ಆರೋಪಿಯನ್ನು ವಿಚಾರಿಸಲು ನೆಲಮಹಡಿಗೆ ಇಳಿದಾಗ ನಿವೃತ್ತ ಸಬ್‌ಇನ್ಸ್‌ಪೆಕ್ಟರ್‌ನ ಮಗ ಬೆದರಿಕೆ ಹಾಕಿದನು. ಆತನೂ ಸಹ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ತನಗೆ ಅನೇಕ ಗೂಂಡಾಗಳ ಪರಿಚಯವಿದೆ ಎಂದು ಬೆದರಿಕೆ ಹಾಕಿದನು. ಸದ್ದಿಲ್ಲದೆ ಹಣ ತೆಗೆದುಕೊಂಡು ಮನೆ ಖಾಲಿ ಮಾಡುವಂತೆ ಅವರು ನನಗೆ ಧಮ್ಕಿ ಹಾಕಲಾಯಿತು ಎಂದು ಸಂತ್ರಸ್ತ ಬಾಲಕಿಯ ತಂದೆ ಹೇಳಿದರು.

ನಂತರ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದಾರೆ. ಬಾಲಕಿ ಹಾಗೂ ಆರೋಪಿ ಇಬ್ಬರ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.

ಬಂಧಿತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ನ ಮಗನ ವಿರುದ್ಧವೂ ಪ್ರಕರಣ ದಾಖಲಿಸಬಹುದು, ಅವರು ಹುಡುಗಿಯ ತಂದೆಗೆ ಬೆದರಿಕೆ ಹಾಕಿದನು. ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದನು ಎಂದು ತಿಳಿದು ಬಂದಿದೆ. ಈ ಕುಟುಂಬ ಎಂಟು ದಿನಗಳ ಹಿಂದೆಯಷ್ಟೇ ಈ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸಕ್ಕೆ ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+