ಮಕ್ಕಳಿಗೆ ಹಾವುಗಳ ವೈಜ್ಞಾನಿಕ ನಿರ್ವಹಣೆ ಕುರಿತು ಕಾರ್ಯಾಗಾರ
ಬೆಂಗಳೂರು, ಮೇ 09: ಹಾವುಗಳೆಂದರೆ ಕೆಲವು ಮಕ್ಕಳಿಗೆ ತುಂಬಾ ಪ್ರೀತಿ, ಇನ್ನು ಕೆಲವು ಮಕ್ಕಳಿಗೆ ಭಯ, ಆದರೆ ಅವುಗಳ ಬಗ್ಗೆ ಮಾಹಿತಿ ತಿಳಿದ ಮೇಲೆ ಎಲ್ಲಾ ಮಕ್ಕಳು ಖಂಡಿತವಾಗಿಯೂ ಅವುಗಳನ್ನು ಇಷ್ಟ ಪಡದೆ ಇರಲಾರರು.
ಕಳಿಂಗ ಸೆಂಟರ್ ಫಾರ್ ರೇನ್ ಫಾರೆಸ್ಟ್ ಎಕಾಲಜಿ ಆಶ್ರಯದಲ್ಲಿ ಸರಿಸೃಪಗಳು, ಅದರಲ್ಲೂ ಹಾವುಗಳ ವೈಜ್ಞಾನಿಕ ನಿರ್ವಹಣೆ ಮತ್ತು ತರಬೇತಿ ಕಾರ್ಯಕ್ರಮ 'ಸ್ಟಾರ್ಮ್' ಜ್ಯೂನಿಯರ್‌ನ್ನು ಮೇ 22 ರಂದು ಪ್ರಾಣಿ-ದಿ ಪೆಟ್ ಸೆಂಕ್ಚುರಿಯಲ್ಲಿ ಏರ್ಪಡಿಸಲಾಗಿದೆ.
ಮೊದಲ ಬಾರಿಗೆ ಮಕ್ಕಳಿಗೆಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಕಾರ್ಯಾಗಾರವು ಪ್ರಾಯೋಗಿಕವಾಗಿರುತ್ತದೆ.
ಸ್ಟಾರ್ಮ್ ಜ್ಯೂನಿಯರ್‌ನಲ್ಲಿ ಪ್ರಾಣಿಗಳ ಬಗ್ಗೆ ಒಲವಿರುವ 10ರಿಂದ 17 ವರ್ಷದ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಸರಿಸೃಪಗಳ ಕುರಿತು ಕೆಲವು ವಿಷಯಗಳನ್ನು ತಿಳಿಸಲಾಗುತ್ತದೆ. ಅವುಗಳನ್ನು ಗುರುತಿಸುವುದು ಹೇಗೆ, ಹಾಗೆಯೇ ಸರಿಸೃಪಗಳನ್ನು ಹಿಡಿಯುವುದು ಹೇಗೆ, ಹಾವು ಕಚ್ಚಿದ ನಂತರ ಪ್ರಥಮ ಚಿಕಿತ್ಸೆ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ದೊರೆಯುತ್ತದೆ.

ಸರಿಸೃಪಗಳು ಹಾಗೂ ಉಭಯಚರಗಳು ಅದರಲ್ಲಿ ಆಫ್ರಿಕನ್ ಕ್ಲೇವ್ಡ್ ಫ್ರಾಗ್ಸ್, ರೆಡ್ ಇಯರ್ಡ್ ಸ್ಲೈಡರ್ಸ್, ಬಿಯರ್ಡ್ ಡ್ರಾಗನ್ ಹೀಗೆ ಇವುಗಳ ಜತೆಗೆ ಮಕ್ಕಳು ಆಟವಾಡಬಹುದು. ಈ ವಿಷಯ ಕುರಿತು ಕೆಸಿಆರ್‌ಇ ನಿರ್ದೇಶಕರಾದ ಗೌರಿ ಶಂಕರ್ ಮಾತನಾಡಿ, ಸ್ಟಾರ್ಮ್ ಜ್ಯೂನಿಯ್ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ಚೆನ್ನೈನಲ್ಲಿ ಆಯೋಜನೆ ಮಾಡುತ್ತಿದ್ದೆವು. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ.
ಕಾರ್ಯಾಗಾರದಲ್ಲಿ ಕಿಂಗ್ ಅಂಡ್ ಐ, ಸಿಕ್ರೇಟ್ ಆಫ್ ಕಿಂಗ್ ಕೋಬ್ರಾ, ಏಷಿಯಾಸ್ ಡೆಡ್ಲಿಯಸ್ಟ್ ಸ್ನೇಕ್, ವೈಲ್ಡೆಸ್ಟ್ ಇಂಡಿಯಾ ಹೀಗೆ ಅನೇಕ ಡಾಕ್ಯುಮೆಂಟರಿಗಳನ್ನು ಪ್ರದರ್ಶಿಸಲಾಗುತ್ತದೆ.












Click it and Unblock the Notifications