ಸಿಲಿಕಾನ್ ಸಿಟಿಯಲ್ಲಿ ರಿಪೇರಿ ಮಾಡಿ ಬೆಂಗಳೂರು 2026 ಮೇಳ: ಹಾಳಾಯ್ತು ಅಂತ ಏನನ್ನೂ ಎಸೀಬೇಡಿ

Repair Maadi Bengaluru 2026 : ಬೆಂಗಳೂರು ಅಂದ್ರೆ ಗಾ್ರ್ಡನ್ ಸಿಟಿ. ಭಾರತದ ಸಿಲಿಕಾನ್ ಸಿಟಿ. ಆದರೆ, ಬೆಂಗಳೂರು ಈಗ ಬೇರೆಯೇ ಕಾರಣಕ್ಕೆ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಬೆಳೆಯುತ್ತಿರುವ ರಿಪೇರಿ ಕಲ್ಚರ್​. ರಾಜಧಾನಿಯ ಜನರಿಗೆ ಹೊಸ ವಸ್ತುಗಳನ್ನು ಖರೀದಿಸುವ ತುಡಿತ ಎಷ್ಟಿದೆಯೋ, ಅಷ್ಟೇ ಆಸಕ್ತಿ ಹಳೆಯ ವಸ್ತುಗಳನ್ನು ದುರಸ್ತಿ ಮಾಡುವುದರಲ್ಲಿದೆ. ಸಾಹಸ್ ಝೀರೋ ವೇಸ್ಟ್​ ಎಂಬ ಸಂಸ್ಥೆ ಬಸವನಗುಡಿಯ ಇಂಡಿಯನ್ ಇನ್ಸಿಟ್ಯೂಟ್ ಆಫ್​ ವರ್ಲ್ಡ್​​ ಕಲ್ಚರಿನಲ್ಲಿ ರಿಪೇರಿ ಮಾಡಿ ಬೆಂಗಳೂರು 2026 ಎಂಬ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ನಿಯಂತ್ರಣಕ್ಕೆ ತರಲು ಹಾಗೂ ರಿಪೇರಿ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಸಾಹಸ್​ ಝೀರೋ ವೇಸ್ಟ್​ ಸಂಸ್ಥೆ ರಿಪೇರಿ ಮಾಡಿ ಬೆಂಗಳೂರು 2026 ಎಂಬ ಮೇಳವನ್ನು ಆಯೋಜಿಸಿದೆ.

Repair Maadi Bengaluru 2026 Mela Shoe Umbrella Laptop Cycle Cloth Everything Repair Under One Roof

ಅಂತಾರಾಷ್ಟ್ರೀಯ ರಿಪೇರಿ ದಿನದ ಹಿನ್ನೆಲೆಯಲ್ಲೂ ಈ ಮೇಳ ಆಯೋಜಿಸಲಾಗಿದೆ. ರಿಪೇರಿ ಮಾಡಿ ಬೆಂಗಳೂರು 2026 ಮೇಳದಲ್ಲಿ ಸುಮಾರು 11 ವಿವಿಧ ರೀತಿಯ ದುರಸ್ತಿ ಅಂಗಡಿಗಳು ಪಾಲ್ಗೊಂಡಿದ್ದವು. ಶೂ ಮತ್ತು ಬ್ಯಾಗ್ ರಿಪೇರಿ, ಕೊಡೆ ರಿಪೇರಿ, ಬಟ್ಟೆ ಅಲ್ಟರ್ ಮಾಡೋದು, ಝಿಪ್ ಸರಿ ಮಾಡೋದು, ಲ್ಯಾಪ್​​ ಟಾಪ್ ರಿಪೇರಿ, ಚಾಕು ಹರಿತಗೊಳಿಸುವುದು, ಸೈಕಲ್ ರಿಪೇರಿ, ವಾಚ್ ಸರಿ ಮಾಡೋದು, ಸೂಟ್​ ಕೇಸ್-ವಿದ್ಯುತ್ ಉಪಕರಣಗಳ ದುರಸ್ತಿ ಸೇರಿ, ನಾನಾ ರೀತಿಯ ರಿಪೇರಿ ಅಂಗಡಿಯವರು ಈ ಮೇಳದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಅಂದ್ರೆ, ಕೊಡೆ, ಬಟ್ಟೆ ಸರಿ ಮಾಡಿಸಿಕೊಳ್ಳಲು ಬಂದ ಗ್ರಾಹಕರೇ ಇಲ್ಲಿ ಹೆಚ್ಚಿದ್ದರು.

ಎಸೆಯೋ ಸಂಸ್ಕೃತಿಗೆ ಫುಲ್ ಸ್ಟಾಪ್

ದುರಸ್ತಿ ಸಂಸ್ಕೃತಿ ಬೆಳೆಸುವುದು, ಬದಲಿ ಉತ್ಪನ್ನ ಖರೀದಿಯ ಬದಲು, ಇರುವ ಉತ್ಪನ್ನವನ್ನೇ ದುರಸ್ತಿಗೊಳಿಸಿ ಬಳಸುವುದು, ಸ್ಥಳೀಯ ದುರಸ್ತಿ ಟಕ್ನಿಶಿಯನ್ಸ್​ ಗೆ ಬೆಂಬಲ ಕೊಡುವುದು, ರಿಪೇರಿಗೆ ಬರುವ ಗ್ರಾಹಕರಿಗೆ ನೆರವಾಗುವುದೇ ಈ ಮೇಳದ ಪ್ರಮುಖ ಉದ್ದೇಶ ಅಂತ ಮೇಳದ ಸಂಘಟಕಿಯಾದ ಸ್ಮಿತಾ ಕುಲಕರ್ಣಿ ಹೇಳಿದ್ದಾರೆ.

ರಿಪೇರಿ ಕಲ್ಚರ್ ಬೆಳೆದ್ರೆ ಉತ್ಪನ್ನ ಬಹಳ ವರ್ಷ ಬಾಳಿಕೆ ಬರುತ್ತದೆ. ಇದರಿಂದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮೇಲೆ ಒತ್ತಡ ಕಡಿಮೆ ಆಗುತ್ತದೆ. ಪರಿಸರದ ಮೇಲಾಗುವ ದುಷ್ಪರಿಣಾಮ ಕೂಡಾ ಕಡಿಮೆ ಆಗುತ್ತದೆ. ಹಣ ಕೂಡಾ ಉಳಿತಾಯವಾಗುತ್ತದೆ ಎಂದು ಹೇಳುತ್ತಾರೆ ಸ್ಮಿತಾ ಕುಲಕರ್ಣಿ. ಭಾರತದಲ್ಲಿ ದುರಸ್ತಿ ಮತ್ತು ಮರುಬಳಕೆ ಸಂಸ್ಕೃತಿ ಮೊದಲಿನಿಂದಲೂ ಇದೆ. ಚಪ್ಪಲಿ ರಿಪೇರಿ ಮಾಡೋರು, ಇಲೆಕ್ಟ್ರೀಶಿಯನ್ಸ್​, ವಾಚ್ ರಿಪೇರಿ ಮಾಡೋದು ಮನೆ ಪಕ್ಕದಲ್ಲೇ ಸಿಗ್ತಾರೆ. ಆದರೆ, ಕಡಿಮೆ ಬೆಲೆಯ ವಸ್ತು, ಅದಕ್ಕೆ ಸಿಗುವ ಭರ್ಜರಿ ಡಿಸ್ಕೌಂಟ್​​ ಜೊತೆ ಆನ್​ ಲೈನ್​​ ಶಾಪಿಂಗ್ (online shopping) ಸೌಲಭ್ಯಗಳಿಂದಾಗಿ ಈಗ ರಿಪೇರಿ ಕಲ್ಚರ್ ಮರೆಯಾಗ್ತಾ ಇದೆ. ಬದಲಿಗೆ ಜನ ಹೊಸ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಕೆ ಮಾಡ್ತಾರೆ ಅಂತ ಹೇಳ್ತಾರೆ ಸ್ಮಿತಾ ಕುಲಕರ್ಣಿ.

ಬಾಳಿಕೆ ಬರೋ ವಸ್ತುಗಳ ಉತ್ಪಾದನೆಗೆ ಒತ್ತು

ಇಂಥಹ ಮೇಳಗಳ ಆಯೋಜನೆಯಿಂದ ಟೆಕ್ನಿಶಿಯನ್ಸ್ ಬೇಡಿಕೆ ಹೆಚ್ಚುತ್ತದೆ. ಕಂಪನಿಗಳು ಹೆಚ್ಚು ಬಾಳಿಕೆ ಬರುವ ವಸ್ತುಗಳನ್ನು ಉತ್ಪಾದಿಸುತ್ತವೆ. ಬಿಡಿಭಾಗಗಳ ಉತ್ಪಾದನೆ ಮತ್ತು ಸಪೋರ್ಟ್​ ವ್ಯವಹಾರಕ್ಕೂ ಬೇಡಿಕೆ ಹೆಚ್ಚುತ್ತದೆ ಎನ್ನುತ್ತಾರೆ ಸ್ಮಿತಾ ಕುಲಕರ್ಣಿ.

ದುರಸ್ತಿ ಅಂಗಡಿಗಳಲ್ಲದೆ, ಇಲ್ಲಿ ಬಡಗಿ ಕಸುಬುದಾರಿಕೆ ಬಗ್ಗೆ ಕಾರ್ಯಾಗಾರ, ಪೀಠೋಪಕರಣ, ತ್ಯಾಜ್ಯ ಆಧಾರಿತ ಡೇಕೊರೇಶನ್​, ಹಣತೆಗಳ ಪೇಂಟಿಂಗ್​, ಗೊಂಬೆ ಮಾಡೋದು, ಕಥೆ ಹೇಳುವುದು, ಲ್ಯಾಪ್​ ಟಾಪ್ ( laptop) ರಿಪೇರಿ, ತ್ಯಾಜ್ಯ ಬಟ್ಟೆ ಬಳಸಿ ಗೊಂಬೆ ತಯಾರಿಸುವ ಬಗ್ಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ, ಈ ಮೇಳಕ್ಕೆ ಭೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ಕೋರಮಂಗಲದಲ್ಲಿ ಇಂಥಹ ಕಾರ್ಯಾಗಾರಗಳನ್ನು ನಿಯಮಿತವಾಗಿ ಆಯೋಜಿಸುವಂತೆ ಆಹ್ವಾನ ನೀಡಿದ್ದಾರೆ.

Repair Maadi Bengaluru ನಗರ ಬದಲಾಗಲಿ

ಇಷ್ಟೇ ಅಲ್ಲದೆ, ಸಾಹಸ್​ ಸಂಸ್ಥೆ ಗ್ಲೋಬಲ್ ಡುನಟ್ ಡೇಸ್​ -2026 ಎಂಬ ಕಾರ್ಯಾಗಾರವನ್ನೂ ಆಯೋಜಿಸಿದೆ. ಇದರಲ್ಲಿ ಅರ್ಬನ್ ಪ್ಲಾನರ್ಸ್​, ಡೆವಲಪ್​ಮೆಂಟ್ ಪ್ರಾಕ್ಟಿಶನರ್​, ಮತ್ತು ಸಿವಿಕ್ ಸಂಸ್ಥೆಗಳು ಪಾಲ್ಗೊಂಡಿದ್ದವು. ನೀರು, ತ್ಯಾಜ್ಯ, ಸಂಚಾರ, ಇಂಧನ ವ್ಯವಸ್ಥೆಗಳ ಮೂಲ ಬೆಂಗಳೂರನ್ನು ಬದಲಾಯಿಸುವ ಸಾಧ್ಯತೆಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಿತು.

ಒಟ್ಟಾರೆಯಾಗಿ, ಬೆಂಗಳೂರಿನಲ್ಲಿ (bengluru) ಈಗ ದುರಸ್ತಿ ಕಲ್ಚರ್ ಹೆಚ್ಚಾಗುತ್ತಿದೆ. ತಾಜ್ಯ ನಿರ್ವಹಣೆ ಕುರಿತಂತೆ ಅರಿವು ಮೂಡಿಸಲಾಗುತ್ತಿದೆ. ಇಂಥಹ ಕಾರ್ಯಕ್ರಮಗಳಿಗೆ ಜನಬೆಂಬಲವೂ ಹೆಚ್ಚುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+