Renukaswamy Murder: ಗೂಗಲ್‌ ಮ್ಯಾಪ್‌ನಲ್ಲೂ ಪಟ್ಟಣಗೆರೆ ಶೆಡ್‌ ಲೊಕೇಶನ್‌: ಭಾರೀ ವೈರಲ್‌

Renukaswamy Murder: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಹಾಗೂ ಪಟಾಲಂ ಗ್ಯಾಂಗ್‌ ಜೈಲು ಸೇರಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸುವ ಮೂಲಕ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ನಡುವೆಯೇ ರೇಣುಕಾಸ್ವಾಮಿ ಕೊಲೆಯಾದ ಪಟ್ಟಣಗೆರೆ ಶೆಡ್‌ ಗೂಗಲ್‌ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಹಾಗಾದರೆ ಮ್ಯಾಪ್‌ನಲ್ಲಿ ಇದನ್ನು ಎಷ್ಟು ಜನ ಸರ್ಚ್‌ ಮಾಡಿ ವೀಕ್ಷಿಸಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಲ್ಲದೆ ಪೊಲೀಸರು ಕೂಡ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಡುವೆಯೇ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಈ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಹೊರ ತರಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ಪಟ್ಟಣಗೆರೆ ಶೆಡ್‌ ಕೂಡ ಇದೀಗ ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದನ್ನು ಎಷ್ಟು ಜನ ಸರ್ಚ್‌ ಮಾಡಿ ವೀಕ್ಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.

Renukaswamy Murder Pattanagere shed location on google map Viral

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್‌ & ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆತಂದು ಅಲ್ಲಿ ಆತನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿತ್ತು. ಇನ್ನೂ ಈ ಪ್ರಕರಣದಲ್ಲಿ ಜೈಲು ಪಾಲಾಗಿರುವ ಅಕ್ಕ ಪವಿತ್ರಾಗೌಡನನ್ನು ನೋಡಲು ತಮ್ಮ ಪರಪ್ಪನ ಅಗ್ರಹಾರಕ್ಕೆ ಬರುತ್ತಿದ್ದರು. ಈ ವೇಳೆ ಸುಮ್ಮನೆ ಹೋಗದೆ ನಿಮಗೆ ಮಾಡುವುದಕ್ಕೆ ಏನು ಕೆಲ ಇಲ್ವಾ ಎಂದು ಅಲ್ಲಿದ್ದ ಮಾಧ್ಯಮದವರಿಗೆ ಈತ ಪ್ರಶ್ನಿಸಿದ್ದ.

ಇನ್ನೂ ಇದೇ ವಿಚಾರವನ್ನು ಇಟ್ಟುಕೊಂಡು ನಿರೂಪಕರೊಬ್ಬರು ಬಾ..ನಮ್ಗೆ ಮಾಡೋದಿಕ್ಕೆ ಏನು ಕೆಲ್ಸ ಇಲ್ಲ.. ಶೆಡ್‌ಗೆ ಹೋಗಿ ಕುಂಟೆಬಿಲ್ಲೆ ಆಡುವ ಬಾ ಎಂದು ಹೇಳುವ ಮೂಲಕ ಪವಿತ್ರಾ ಗೌಡ ತಮ್ಮನಿಗೆ ತಿರುಗೇಟು ನೀಡಿದ್ದರು. ಆಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆಯೇ ತುಂಬಾ ಜನ ರೀಲ್ಸ್‌ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಈಗಳು ಕೂಟ ಬಾ..ಶೆಡ್‌ಗೆ ಹೋಗಿ ಕುಂಟೆಬಿಲ್ಲ ಆಡುವ ಬಾ.. ಎನ್ನುವ ರೀಲ್ಸ್‌ಗಳು ಟ್ರೆಂಡಿಂಗ್‌ನಲ್ಲಿವೆ.

ಪೇಸ್‌ಬುಕ್‌, ಇನ್ಸ್ಟಾಗ್ರಾಂ, ಟ್ವಿಟ್ಟರ್‌, ಶೇರ್‌ ಚಾಟ್‌ ಸೇರಿದಂತೆ ಎಲ್ಲಿ ನೋಡಿದಲೂ ಇದೇ ರೀಲ್ಸ್‌ಗಳು ಹರಿದಾಡುತ್ತಿವೆ. ಇನ್ನು ಜನರು ಗೂಗಲ್‌ ಮಾಪ್‌ನಲ್ಲಿ ಪಟ್ಟಣಗೆರೆ ಶೆಡ್‌ ಸರ್ಚ್‌ ಮಾಡಲು ಶುರು ಮಾಡಿದ್ದಾರೆ. ಇದೇ ಶೆಡ್‌ನಲ್ಲಿ ದರ್ಶನ್‌ & ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಹತ್ಯೆಗೈದಿದ್ದರು ಎಂದು ಇಡೀ ರಾಜ್ಯ, ಅಲ್ಲದೆ, ದೇಶಕ್ಕೆ ಗೊತ್ತಾಗಿದ್ದು, ಈ ಶೆಡ್‌ ಅನ್ನು ಗೂಗಲ್‌ ಮ್ಯಾಪ್‌ನಲ್ಲಿ ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದುವರೆಗೂ ಗೂಗಲ್​ ಮ್ಯಾಪ್‌ನಲ್ಲಿ ಈ ಶೆಡ್‌ಗೆ​ ನೆಟ್ಟಿಗರು 4.6 ಸ್ಟಾರ್​ ರೇಟಿಂಗ್​ ನೀಡಿದ್ದು, ಈ ಬಗ್ಗೆ ಇನ್ನೂ ತುಂಬಾ ಜನ ಕಾಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+