ಬೆಂಗಳೂರಿನಲ್ಲಿ ಈ ಕಟ್ಟಡಗಳಿಗೆ ಶೇ 26ರಷ್ಟು ಬಾಡಿಗೆ ಹೆಚ್ಚಳ!

ಬೆಂಗಳೂರಿನಲ್ಲಿ ಬಾಡಿಗೆ ಹಾಗೂ ಲೀಸ್‌ ಬೆಲೆ ಈಗಾಗಲೇ ವಿಪರೀತ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದೀಗ ಕೆಲವೊಂದು ನಿರ್ದಿಷ್ಟ ಕಟ್ಟಡಗಳ ಬೆಲೆಯೂ ಹೆಚ್ಚಳವಾಗಿದೆ ಎನ್ನುವ ವರದಿಯೊಂದು ಬಂದಿದೆ. ಬೆಂಗಳೂರಿನಲ್ಲಿ ಕೆಲವೊಂದು ಕಟ್ಟಡಗಳ ಬೆಲೆ ಬರೋಬ್ಬರಿ ಶೇ 26ರಷ್ಟು ಹೆಚ್ಚಳವಾಗಿದೆ ಎಂದು ಪ್ರತಿಷ್ಠಿತ ರಿಯಲ್‌ ಎಸ್ಟೇಟ್‌ ಸಂಸ್ಥೆ ಅನಾರಕ್ ಎನ್ನುವ ಸಂಸ್ಥೆ ವರದಿ ಮಾಡಿದೆ. ಇನ್ನೂ ಇದರಲ್ಲಿ ಪ್ರತಿ ಚದರ ಅಡಿಗೆ ಬೆಲೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ ಬಾಡಿಗೆ ಹಾಗೂ ಅಡ್ವಾನ್ಸ್‌ ಸಾಕಷ್ಟು ಹೆಚ್ಚಳವಾಗಿದೆ. ಇದೀಗ ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಕಟ್ಟಡಗಳ ಬಾಡಿಗೆ ಪ್ರಮಾಣ ಹಲವು ಪಟ್ಟು ಹೆಚ್ಚಳವಾಗಿದೆ ಎಂದು ಹೇಳಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ನಗರದಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. ಅದರಲ್ಲೂ ಬೆಂಗಳೂರಿನ ಹೃದಯ ಭಾಗದಲ್ಲಿ ಪ್ರಾಪರ್ಟಿಗೆ ಬಂಗಾರದ ಬೆಲೆ ಇದೆ. ಇದರ ನಡುವೆಯೇ ಕಳೆದ 5 ವರ್ಷಗಳಿಂದ ಬಾಡಿಗೆ ಬೆಲೆ ಹೆಚ್ಚಳವಾಗುತ್ತಿದೆ ಎಂದು ಹೇಳಲಾಗಿದೆ. ನಗರದಲ್ಲಿ ಈ ರೀತಿ ಕಟ್ಟಡಗಳ ಬಾಡಿಗೆ ಬೆಲೆ ಯಾಕೆ ಹೆಚ್ಚಳವಾಗುತ್ತಿದೆ ಎನ್ನುವುದಕ್ಕೆ ಹಲವು ಕಾರಣಗಳು ಇವೆ. ನಗರದಲ್ಲಿ ನಿರಂತರವಾಗಿ ಕಟ್ಟಡಗಳ ಬೆಲೆ ಹೆಚ್ಚಳವಾಗುತ್ತಲ್ಲೇ ಇದೆ.

Rent for These Buildings in Bengaluru Have Increased By 26

ಇನ್ನು ಕಳೆದ 5 ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಬೆಲೆ ಹಾಗೂ ಕಟ್ಟಡಗಳ ಬಾಡಿಗೆ ಬೆಲೆ ಹಲವು ಪಟ್ಟು ಹೆಚ್ಚಳವಾಗಿದೆ. ಈ ಸಂಸ್ಥೆಯು ಬೆಂಗಳೂರು ಸೇರಿದಂತೆ ಪ್ರತಿಷ್ಠಿತ ನಗರಗಳಲ್ಲಿ ಸಮೀಕ್ಷೆಯನ್ನು ನಡೆಸಿ, ಈ ವರದಿಯನ್ನು ಪ್ರಕಟಿಸಿದೆ.

ಪ್ರಮುಖ ನಗರಗಳಲ್ಲಿ ಸಮೀಕ್ಷೆ: ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಅದರಲ್ಲಿ ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ, ಮುಂಬೈ, ಪುಣೆ ಹಾಗೂ ದೆಹಲಿ - ಎನ್‌ಸಿಆರ್ ನಗರಗಳಲ್ಲಿ ಸಮೀಕ್ಷೆ ಮಾಡಲಾಗಿದೆ. ದೇಶದ ಪ್ರಮುಖ ನಗರಗಳಿಗೆ ಹೋಲಿಕೆ ಮಾಡಿದರೆ ಇಲ್ಲೇ ಬಾಡಿಗೆ ಪ್ರಮಾಣ ಹೆಚ್ಚಳವಾಗಿದೆ. ಇನ್ನು ದೇಶಲ್ಲೇ ಬೆಂಗಳೂರಿನಲ್ಲಿ ಕಚೇರಿ ಬಾಡಿಗೆ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

ಜಾಗಗಳಲ್ಲಿ ಪ್ರತಿ ಚದರ ಅಡಿಗೆ ಬರೋಬ್ಬರಿ 93 ರೂಪಾಯಿ ಇದೆ. ಈ ಪ್ರಮಾಣವು ತಿಂಗಳಿಗೆ ಕೆಲವು ಕಡೆ ಲಕ್ಷಾಂತರ ರೂಪಾಯಿ ಆಗುವುದು ಸಹ ಇದೆ ಎಂದು ಹೇಳಲಾಗಿದೆ.

ದೇಶದಲ್ಲೇ ಬೆಂಗಳೂರಿನಲ್ಲೇ ಹೆಚ್ಚು: ಇನ್ನು ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲೇ ಬೆಂಗಳೂರಿನಲ್ಲೇ ಕಚೇರಿಗಳ ಬಾಡಿಗೆ ಬೆಲೆ ಸಾಕಷ್ಟು ಹೆಚ್ಚಳವಾಗಿದೆ. ಇದೀಗ ದೇಶದಲ್ಲೇ ಬೆಂಗಳೂರಿನಲ್ಲಿ ಬಾಡಿಗೆ ಬೆಲೆ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ ಬಾಡಿಗೆ ಹಾಗೂ ಅಡ್ವಾನ್ಸ್‌ ಸಹ ಜಾಸ್ತಿ ಆಗುತ್ತಿದೆ. ಇಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳಿದ್ದು, ಪ್ರತಿ ವರ್ಷವೂ ಇನ್ನಷ್ಟು ಹೊಸ ಕಂಪನಿಗಳ ಪ್ರಾರಂಭವಾಗುತ್ತಿದೆ. ಈ ಕಾರಣಕ್ಕೆ ಬಾಡಿಗೆ ಹೆಚ್ಚಳವಾಗುತ್ತಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+